Get Updates
Get notified of breaking news, exclusive insights, and must-see stories!

ಇಪ್ಪತ್ತು ನಾಯಿಗಳ ಜತೆ ಪುಟ್ಟ ಬಾಲಕ; ವರ್ತನೆಯೂ ಬದಲು

ಪುಣೆ, ಮೇ 12: ಒಂದೇ ಮನೆಯಲ್ಲಿ 20ಕ್ಕೂ ಹೆಚ್ಚು ನಾಯಿಗಳ ಜೊತೆ 11 ವರ್ಷದ ಬಾಲಕನನ್ನು ಕೂಡಿಹಾಕಿದ ಭಯಾನಕ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕನ ಪೋಷಕರ ವಿರುದ್ಧ ಎನ್‌ಜಿಒ ಸಂಸ್ಥೆಯೊಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಈ ಬಾಲಕನ್ನು ರಕ್ಷಿಸಲಾಗಿದೆ. ಆದರೆ, ಪೋಷಕರ ಬಂಧನ ಇನ್ನೂ ಆಗಿಲ್ಲ.

ನಾಯಿಗಳ ಜೊತೆ ಬಾಲಕ ಸೆರೆಯಾಗಿರುವ ವಿಚಾರ ಅನಾಮಧೇಯ ವ್ಯಕ್ತಿಯೊಬ್ಬರ ಮೂಲಕ ಚೈಲ್ಡ್‌ಲೈನ್ (Childline NGO) ಎಂಬ ಎನ್‌ಜಿಒಗೆ ಗೊತ್ತಾಗಿದೆ. ಕೊಂಧ್ವಾ ಪ್ರದೇಶದ ಫ್ಲಾಟ್‌ವೊಂದರಲ್ಲಿ 20-22 ನಾಯಿಗಳ ಜೊತೆ 24 ಗಂಟೆಯೂ ಇರುವಂತೆ ಬಾಲಕನ ಮೇಲೆ ಬಲವಂತ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಬಾಲಕ ನಾಯಿಗಳ ಜೊತೆ ಇರುತ್ತಿರುವುದರ ಸುಳಿವು ಸಿಕ್ಕಿತು. ನಂತರ ಎನ್‌ಜಿಒ ಪೊಲೀಸರಿಗೆ ಈ ವಿಷಯ ತಿಳಿಸಿ ಕ್ರಮ ಕೈಗೊಳ್ಳುವಂತೆ ಕೋರಿತು.

"ದೂರುದಾರರು ಮೇ 5ರಂದು ಮನೆಗೆ ಹೋದಾಗ ಒಬ್ಬ ಬಾಲಕ ನಾಯಿಗಳ ಜೊತೆ ಫ್ಲಾಟ್‌ನ ಕಿಟಕಿ ಬಳಿ ಕುಳಿತುಕೊಂಡಿರುವುದನ್ನು ಕಾಣುತ್ತಾರೆ. ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ಬಾಲಕನ ಪೋಷಕರೊಂದಿಗೆ ಅವರು ಮಾತನಾಡಿದಾಗ, ಆ ಹುಡುಗ ಶಾಲೆ ಹೋಗುತ್ತಿಲ್ಲದಿರುವುದು ಗೊತ್ತಾಗಿದೆ. ನಾಯಿಗಳೊಂದಿಗೆ ಬಾಲನನ್ನು ಬಿಡಬೇಡಿ. ಆತನನ್ನು ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಆಕೆ ಕಿವಿಮಾತು ಹೇಳಿಬರುತ್ತಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಪ್ರಕರಣದ ವಿವರಣೆ ಕೊಡುತ್ತಾರೆ.

 Boy confined to House With 20 Dogs Rescued In Pune

ಚೈಲ್ಡ್‌ಲೈನ್ ಸಂಸ್ಥೆಯ ಆ ಸದಸ್ಯೆ ಮತ್ತೊಮ್ಮೆ, ಅಂದರೆ ಮೇ 9ರಂದು ಆ ಮನೆಗೆ ಹೋಗುತ್ತಾರೆ. ಆಗ ಪೋಷಕರು ಮನೆಯಲ್ಲಿ ಇರುವುದಿಲ್ಲ. ಬಾಲಕನನ್ನು ಮನೆಯೊಳಗೆಯೇ ಕೂಡಿಹಾಕಿ ಹೋಗಿರುತ್ತಾರೆ. "ಅದೇ ದಿನ ಎನ್‌ಜಿಒದವರು ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಬಾಲಕನನ್ನು ರಕ್ಷಿಸುತ್ತಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ" ಎಂದು ಪೊಲೀಸರು ಹೇಳಿದ್ದಾರೆ.

 Boy confined to House With 20 Dogs Rescued In Pune

ಶ್ವಾನದ ರೀತಿ ವರ್ತನೆ:
ಅಷ್ಟು ನಾಯಿಗಳೊಂದಿಗೆ ಇದ್ದೂ ಇದ್ದೂ 11 ವರ್ಷದ ಬಾಲಕನ ವರ್ತನೆ ಪ್ರಾಣಿಗಳ ರೀತಿಯಂತೆ ಇತ್ತು ಎಂದು ಪೊಲೀಸರು ತಿಳಿಸುತ್ತಾರೆ. ಆ ಹುಡುಗನನ್ನು ಮಕ್ಕಳ ಪಾಲನಾ ಗೃಹಕ್ಕೆ ಸೇರಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ಧಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+