• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಮೊದಲ ‘ಒನ್ ಬ್ಲೆಂಡೆನ್’ ಕಾರ್ಖಾನೆ ಭಾರತದಲ್ಲಿ ಆರಂಭ

|

ಬೆಂಗಳೂರು, ನವೆಂಬರ್ 15, 2018: ಬೆಲ್ಡೆನ್ ಇಂಕ್ ಸಿಗ್ನಲ್ ಟ್ರಾನ್ಸ್ ಮಿಷನ್ ಮತ್ತು ಮಿಷನ್-ಕ್ರಿಟಿಕಲ್ ಅಪ್ಲಿಕೇಷನ್‍ಗೆ ಭದ್ರತಾ ಸಲ್ಯೂಷನ್ಸ್ ಒದಗಿಸುವ ಸಂಸ್ಥೆ. ಎಂಟರ್ ಪ್ರೈಸಸ್ ಹಾಗೂ ಕೈಗಾರಿಕಾ ಮಾರುಕಟ್ಟೆಯಲ್ಲಿ ಜಾಗತಿಕ ನಾಯಕನಾಗಿರುವ ಸಂಸ್ಥೆ ಇಂದು ಪುಣೆ ಸಮೀಪದ ಚಕನ್‍ನಲ್ಲಿ ತನ್ನ ಉತ್ಪಾದನಾ ಘಟಕ ಪ್ರಾರಂಭಿಸಿತು. ಘಟಕ ಸ್ಟೇಟ್-ಆಫ್-ದ-ಆರ್ಟ್ ಸೌಲಭ್ಯ ಹೊಂದಿದೆ.

24 ಸಾವಿರ ಚದರ ಮೀಟರಿನಲ್ಲಿ ಘಟಕ ಹೊಂದಿದ್ದು ಹೂಡಿರುವ ಒಟ್ಟು ಬಂಡವಾಳ 250 ಕೋಟಿ. ($35 ಮಿಲಿಯನ್ ಯುಎಸ್‍ಡಿ). ಕೇಂದ್ರ ಸರ್ಕಾರದ ಮೆಘಾ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಮೊದಲ ನಿಜವಾದ 'ಒನ್ ಬೆಲ್ಡೆನ್' ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಹು ಗ್ರಾಹಕರ ಮಾರುಕಟ್ಟೆ ಹಾಗೂ ಉಪಕರಣಗಳನ್ನು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಬಹುಪಯೋಗಿ ಉಪಕರಣದ ಮೇಲೆ ಹೂಡಿಕೆ ಮಾಡುವ ಗ್ರಾಹಕರ ಗುರಿಯನ್ನು ಈ ಜಾಗತಿಕ ಸಂಸ್ಥೆ ಹೊಂದಿದೆ. ಮಿನ್-ಕ್ರಿಟಿಕಲ್ ಸಿಗ್ನಲ್ ಟ್ರಾನ್ಸ್‍ಮಿಷನ್ ಮತ್ತು ಮ್ಯಾನೆಜ್‍ಮೆಂಟ್ ಅಗತ್ಯಗಳಿಗೆ ಒಂದು ಪರಿಹಾರ ನೀಡುತ್ತದೆ.

'ಸಾಗಣೆ, ಇಂಧನ, ಆಧುನಿಕ ಕಟ್ಟಡ, ಫ್ಯಾಕ್ಟರಿ ಆಟೊಮೇಷನ್ ಹಾಗೂ ಪ್ರಸಾರ ಮಾರುಕಟ್ಟೆಯಲ್ಲಿ ಭಾರತೀಯ ಗ್ರಾಹಕರಿಗೆ ಅಗತ್ಯವಾಗಿ ಬೇಕಿರುವ ಅವಶ್ಯಕತೆ ಪೂರೈಸಲು ಬೆಲ್ಡೆನ್ ಮೆಘಾ ಯೋಜನೆ ಉದ್ದೇಶಿಸಿದೆ' ಎಂದು ಏಷಿಯಾ ಫೆಸಿಫಿಕ್ ಬೆಲ್ಡೆನ್ ಇಂಕ್‍ನ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಚಾಂದ್ ತಿಳಿಸಿದರು.

ನೂತನ ಘಟಕದಲ್ಲಿ ಉತ್ಪಾದನೆ ಆಗುವ ಪ್ರಮುಖ ವಸ್ತುಗಳಲ್ಲಿ- ಅತಿ ದುಬಾರಿ ವಸ್ತುಗಳಿಗೆ ಬಳಸುವ ಕಡಿಮೆ ವೋಲ್ಟೇಜ್‍ನ ಕೇಬಲ್, ಡಾಟಾ ಟ್ರಾನ್ಸ್‍ಮಿಷನ್ನಿನ ಕನೆಕ್ಟಿವಿಟಿ ಹಾಗೂ ಜೋಡಣೆಗಳು, ಎತರ್ನೆಟ್ ಸ್ವಿಚ್‍ಗಳು, ರೌಟರ್ಸ್, ಕಾರ್ಖಾನೆ ಹಾಗೂ ಕಟ್ಟಡಗಳಿಗೆ ಬೇಕಿರುವ ಫೈರ್‍ವಾಲ್ಸ್ ಸೇರಿದೆ.

ಇವುಗಳು ದೇಶೀಯ ತಂತ್ರಜ್ಞಾನ ಸಹ ಹೊಂದಿದ್ದು ಅದರೊಂದಿಗೆ ಅಮೆರಿಕ, ಮಿಡಲ್ ಈಸ್ಟ್, ಸೌತ್ ಈಸ್ಟ್ ಏಷಿಯಾ ಹಾಗೂ ಚೀನಾದ ಬಳಸಲೂ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಭಾರತದಲ್ಲಿ 2003 ರಿಂದ ಭರತದಲ್ಲಿ ಅಸ್ತಿತ್ವ ಹೊಂದಿರುವ ಬೆಲ್ಡೆನ್, ಮಾರುಕಟ್ಟೆಯಲ್ಲಿ ಸಹ ನೆಲೆ ಹೊಂದಿದೆ. ಇಲ್ಲಿ ಉತ್ಪಾದನಾ ಘಟಕ ತೆರಯುವ ಬಗ್ಗೆ ಸಂಸ್ಥೆ 2017ರ ಆರಂಭದಲ್ಲಿಯೇ ನಿರ್ಧರಿಸಿತ್ತು ಎಂದು ಚಾಂದ್ ತಿಳಿಸಿದರು.

ಅದಕ್ಕೆಂದೇ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಆಧುನಿಕ ಉತ್ಪಾದನೆಯಲ್ಲಿ ಬಂಡವಾಳ ಹೂಡಿದೆ. ಇದೇ ಹಾದಿಯಲ್ಲಿ ಭಾರತದಲ್ಲಿಯೂ ಅದು ಸಾಗಲು ಬದ್ಧವಾಗಿದೆ. ಮುಂದೆ ಪುಣೆಯಲ್ಲಿ ಸ್ಥಳೀಯ ಪ್ರತಿಭೆ ಬೆಳೆಸಿಕೊಂಡು ಜಾಗತಿಕ ಬಳಕೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತ ಬೆಲ್ಡೆನ್ ಗುರಿ ಹೊಂದಿದೆ.

English summary
Belden today announced the opening of its new facility at Chakan near Pune, established with support from the Mega Project program of the Government of India. This facility is credited with being the first truly ‘One Belden’ factory, with capabilities to serve multiple customer markets and applications of the Belden group of brands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X