• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ- ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ, 17 ಸಾವು

By Mahesh
|
Google Oneindia Kannada News

ಪುಣೆ, ಜೂನ್ 05: ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭಾನುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಮುಂಜಾನೆ 5.30 ರ ಸುಮಾರಿಗೆ ಎರಡು ಕಾರುಗಳು ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, 17 ಜನ ಸಾವನ್ನಪ್ಪಿದ್ದು, 33ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ರಾಯ್ ಗಡ್ ಜಿಲ್ಲೆಯ ಶೆಡುಂಗಿ ಎಂಬಲ್ಲಿ ಅತಿಯಾದ ವೇಗದಿಂದ ಚಲಿಸುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಢಿಕ್ಕಿ ಹೊಡೆದು ನಂತರ ಬದಿಯ ಕಂದಕಕ್ಕೆ ಉರುಳಿದೆ. 17 ಜನ ದಾರುಣ ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ಮಂದಿ ಮಹಿಳೆಯರು, 6 ಪುರುಷರು ಹಾಗೂ ಎಂಟು ತಿಂಗಳ ಮಗು ಇದೆ.


ಒಂದು ಕಾರಿನ(ಸ್ವಿಫ್ಟ್ ಡಿಜೈರ್) ಟೈರ್ ಪಂಕ್ಚರ್ ಆಗಿದ್ದರಿಂದ ಟೈರ್ ಬದಲಾಯಿಸಲು ಹೆದ್ದಾರಿಯ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಆ ಕಾರಿನ ಹಿಂದೆ ಮತ್ತೊಂದು ವಾಹನ(ಇನ್ನೋವಾ) ನಿಲ್ಲಿಸಲಾಯಿತು. ಮುಂಜಾನೆ ಮಸುಕಿನ ವಾತಾವರಣದಲ್ಲಿ ಪುಣೆಯಿಂದ ಮುಂಬೈ ಕಡೆಗೆ ಹೊರಟ್ಟಿದ್ದ ಬಸ್ ತೀವ್ರವಾಗಿ ಬಂದು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಗಾಯಗೊಂಡವರನ್ನು ಪಾನ್ ವೆಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

English summary
At least 17 people were killed on Sunday, June 5 after a bus hit two cars and fell into 20 feet deep ditch at Mumbai-Pune highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X