ಫೆಬ್ರವರಿ 27ರಂದು ಸಂಜಯ್ ದತ್ ಗೆ ಜೈಲಿನಿಂದ ಬಿಡುಗಡೆ
ಮುಂಬೈ, ಜ.06: 1993ರ ಮುಂಬೈ ಸರಣಿ ಸ್ಫೋಟದ ಆರೋಪ ಹೊತ್ತು ಜೈಲುವಾಸಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಅವಧಿಗೆ ಮುನ್ನ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ. ಸನ್ನಡತೆ ಆಧಾರದ ಮೇಲೆ ಸಂಜಯ್ ದತ್ ಅವರನ್ನು ಫೆಬ್ರವರಿ 27ರಂದು ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ.
56 ವರ್ಷ ವಯಸ್ಸಿನ ಸಂಜಯ್ ದತ್ ಅವರು ಸದ್ಯ ಪುಣೆಯ ಯೆರವಾಡಾ ಜೈಲಿನಲ್ಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಅವರ ಜೈಲುವಾಸದ ಅವಧಿ ಮುಕ್ತಾಯವಾಗಲಿದೆ. [ಮುಂಬೈ ಸರಣಿ ಸ್ಫೋಟದ ಹಿನ್ನೋಟ ]

ಕಳೆದ ವರ್ಷ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಕ್ಷಮಾದಾನ ಕೋರಿ ಸಂಜಯ್ ದತ್ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ, ಮೇ 2013 ರಿಂದ 2014ರ ಅವಧಿಯಲ್ಲಿ ದತ್ ಅವರು ಸುಮಾರು 118 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. [ಭಾರತದಲ್ಲಿ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು]
ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾರಣಕ್ಕೆ ನಟ ಸಂಜಯ್‌ದತ್ ಅವರಿಗೆ ಮುಂಬೈನ ಟಾಡಾ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ ಅಬು ಸಲೇಂ ಜತೆಗೆ ರಿಯಾಜ್ ಸಿದ್ದಿಕಿ , ಕರೀಂ ಉಲ್ಲಾ ಖಾನ್, ಫೆರೋಜ್ ಅಬ್ದುಲ್ ರಸೀದ್, ತಾಹಿರ್ ಮರ್ಚೆಂಟ್ ಮತ್ತು ಮುಸ್ತಫ ಜೋಸಾ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.[ಸಂಜಯ್ ದತ್‌ಗೆ ಕ್ಷಮಾದಾನ ಏಕೆ ಸಿಗಲಿಲ್ಲ?]
ಸಂಜಯ್ ದತ್ ಅವರಿಗೆ ಎರಡು ಎಕೆ-47 ಬಂದೂಕು, ಗ್ರಾನೈಡ್ ಬಾಂಬ್‌ಗಳನ್ನು ಪೂರೈಕೆ ಮಾಡಿರುವ ಆರೋಪ ನಿಜವಲ್ಲ. ನಾನು ಯಾವುದೇ ಸ್ಫೋಟಕ ವಸ್ತುಗಳನ್ನು ನೀಡಿರಲಿಲ್ಲ ಎಂದು ಟಾಡಾ ನ್ಯಾಯಾಲಯದ ಮುಂದೆ ಅಬು ಸಲೇಂ ನೀಡಿದ ಹೇಳಿಕೆ ಸಂಜಯ್ ದತ್ ಗೆ ವರವಾಗಿ ಪರಿಣಮಿಸಿತು.
1993ರ ಸರಣಿ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, 750ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೂಲಗಳ ಪ್ರಕಾರ 103 ದಿನಗಳಿಗೂ ಮುನ್ನ ಸಂಜಯ್ ದತ್ ಅವರು ಬಿಡುಗಡೆಯಾಗುತ್ತಿದ್ದಾರೆ. ಫೆ.25ಕ್ಕೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದರೂ ಪೆರೋಲ್ ಮೇಲೆ ಅಧಿಕ ಕಾಲ ಕಳೆದ ದತ್ ಅವರು ಫೆ.27ರ ತನಕ ಕಾಯಬೇಕಿದೆ.
(ಒನ್ ಇಂಡಿಯಾ ಸುದ್ದಿ)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications