ಪುಣೆಯಲ್ಲಿ 14 ಅಂತಸ್ತಿನ ಕಟ್ಟಡ ಕುಸಿಯಲು ಏನು ಕಾರಣ?

Subscribe to Oneindia Kannada

ಪುಣೆ, ಜುಲೈ, 29: ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು 10 ಜನ ಕಾರ್ಮಿಕರು ದಾರುಣ ಸಾವಿಗೀಡಾಗಿದ್ದಾರೆ. ಪುಣೆ ಹೊರವಲಯದ ಬಾಳೇವಾಡಿಯಲ್ಲಿ ಶುಕ್ರವಾರ ಮುಂಜಾನೆ ನಡೆದ ಘಟನೆ ಕಾರ್ಮಿಕರ ಜೀವ ಬಲಿ ಪಡೆದಿದೆ.

14ನೇ ಅಂತಸ್ತಿಲ್ಲಿ ಕಟ್ಟಡದ ಸ್ಲಾಬ್ ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಕಟ್ಟಡ ಕುಸಿದಿದ್ದು ಅವಶೇಷದಡಿ ಸಿಲುಕಿ 10 ಮಂದಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.[ಹುಬ್ಬಳ್ಳಿಯಲ್ಲಿ ಕಾರ್ಮಿಕರ ಬಲಿ ಪಡೆದಿದ್ದ ಕಟ್ಟಡ]

ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು ಕಾರ್ಮಿಕರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿರಲ್ಲ. ಧಾರಾಕಾರ ಮಳೆ ಕಟ್ಟಡ ಕುಸಿಯಲು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗ್ಗೆ ಅವಘಡ

ಬೆಳಗ್ಗೆ ಅವಘಡ

ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಕಟ್ಟಡ ಕುಸಿಯುವ ವೇಳೆ ಕಾರ್ಮಿಕರು 13 ನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದರು.

ಮಳೆ ಕಾರಣವೇ?

ಮಳೆ ಕಾರಣವೇ?

ಧಾರಾಕಾರ ಮಳೆ ಕಟ್ಟಡ ಕುಸಿಯಲು ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಆದರೆ ಕಳಪೆ ಕಾಮಗಾರಿಯ ದೂರು ಕೇಳಿಬಂದಿದೆ.

ಪರಿಶೀಲನೆಗೆ ಆದೇಶ

ಪರಿಶೀಲನೆಗೆ ಆದೇಶ

ಕಾರ್ಮಿಕರ ಸುರಕ್ಷತೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಿಲಾಗಿತ್ತೋ? ಇಲ್ಲವೋ? ಎಂಬ ಬಗ್ಗೆ ನಿರ್ಮಾಣ ಹಂತದಲ್ಲಿರುವ ಎಲ್ಲಾ ಕಟ್ಟಡಗಳನ್ನು ಪರಿಶೀಲಿಸಲು ಆದೇಶ ನೀಡಲಾಗುವುದು ಎಂದು ಪುಣೆ ಮೇಯರ್ ಪ್ರಶಾಂತ್ ಜಗ್ ತಾಪ್ ಘಟನೆಯ ನಂತರ ತಿಳಿಸಿದ್ದಾರೆ.

ಗುತ್ತಿಗೆದಾರನ ವಿಚಾರಣೆ

ಗುತ್ತಿಗೆದಾರನ ವಿಚಾರಣೆ

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಗುತ್ತಿಗೆದಾರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೂಕ್ತ ತನಿಖೆ ನಂತರ ಕಟ್ಟಡ ಕುಸಿತದ ಅಸಲಿ ಕಾರಣ ತಿಳಿದು ಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ten labourers were killed and three others critically injured when the slab of an under-construction building on which they were working suddenly crashed here on Friday, police said. The 13 labourers were working on the 14th floor of the under-construction tower of Pride Purple Constructions when the slab collapsed in the city's Balewadi area.
Please Wait while comments are loading...