ಹಿಲರಿ ಕ್ಲಿಂಟನ್ ಪ್ರಚಾರವೂ ನವದೆಹಲಿಯ ಕೋಳಿ ಜ್ವರವೂ...

Posted By:
Subscribe to Oneindia Kannada

ಜಗತ್ತಿನ ಎಲ್ಲೆಲ್ಲಿ ಏನೇನು ಆಗುತ್ತೋ ಎಲ್ಲವನ್ನೂ ಸುದ್ದಿ ಮೂಲಕ ಹೇಳ್ತೀವಿ ಅಂತ ಹೊರಟರೆ ಆಗುತ್ತಾ? ಅದೇ ಬೇರೆ ಬೇರೆ ಸಂಗತಿಗಳನ್ನು ಫೋಟೋಗಳ ಮೂಲಕ ಹೇಳುವುದಕ್ಕೆ ಪ್ರಯತ್ನ ಪಟ್ಟರೆ ಹೇಗೆ ಎಂಬುದರ ಯೋಚನೆ ಮಾಡಿದ್ದರ ಫಲಿತಾಂಶವೇ ಇಲ್ಲಿರುವ ಫೋಟೋ ಸರಣಿ. ಅಲ್ಲೆಲ್ಲೋ ಹಿಲರಿ ಕ್ಲಿಂಟನ್ ಪ್ರಚಾರ ಅಮೆರಿಕಾದಲ್ಲಿ ರಂಗೇರಿದೆ.

ನವದೆಹಲಿಯ ಕೋಳಿ ಮಾರುಕಟ್ಟೆಯಲ್ಲಿ ಮಾಲೀಕನೊಬ್ಬನಿಗೆ ಹಕ್ಕಿಜ್ವರದಿಂದ ಕೋಳಿ ಮಾರಾಟವಾಗದಿದ್ದರೆ ಎಂಬ ಆತಂಕ. ಬೆಂಗಳೂರಿನ ವಿಧಾನಸೌಧದಲ್ಲಿ ಎರಡೂವರೆ ಕೋಟಿ ರುಪಾಯಿ ನಗದಿನ ಜೊತೆಗೆ ಪೊಲೀಸರಗೆ ಸಿಕ್ಕಿಬಿದ್ದ ವ್ಯಕ್ತಿ ಹೆಸರು ಸಿದ್ಧಾರ್ಥ, ವೃತ್ತಿಯಿಂದ ವಕೀಲರಂತೆ.[ವಿಧಾನಸೌಧಕ್ಕೆ ಬಂದ ಕಾರಿನಲ್ಲಿ 2.5 ಕೋಟಿ, ಸಚಿವರಿಗೆ ದಕ್ಷಿಣೆ ಕಾಸಾ?]

ತಮಿಳುನಾಡಿನ ಮುಖ್ಯಮಂತ್ರಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಕೊಯಮತ್ತೂರಿನ ದೇವಾಲಯದಲ್ಲಿ ಎಐಎಡಿಎಂಕೆ ಸದಸ್ಯೆಯರು ಸಾವಿರಾರು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದನ್ನುಚಿತ್ರಗಳಲ್ಲಿ ನೋಡಬಹುದು. ಸಾವಿರಾರು ಕಾರ್ಯಕರ್ತೆಯರ ಶ್ರದ್ಧೆ, ಭಕ್ತಿ ಒಟ್ಟಾದ ಕ್ಷಣವನ್ನು ಇನ್ನು ಹೇಗೆ ವಿವರಿಸಬಹುದು!

ಹೀಗೆ ಬೇರೆ-ಬೇರೆ ಸಂಗತಿಗಳನ್ನು ಒಂದು ಗುಕ್ಕಿನಲ್ಲಿ ನೋಡಿ, ಓದುವ ಮಜಾ ಬೇರೆ. ಎಷ್ಟೋ ಪದಗಳಲ್ಲಿ ಹೇಳಿಯೂ ಸಮರ್ಥವಾಗಿ ಕಟ್ಟಿಕೊಡಲಾಗದ ವಿಷಯವೊಂದನ್ನು ಫೋಟೊ ಹೇಳಿಬಿಡುತ್ತದೆ ಎಂಬುದು 'ಪುರಾಣ' ಕಾಲದ ನಂಬಿಕೆ. ಆ ಮಾತನ್ನು ನೀವು ಒಪ್ಪುವಿರಾದರೆ ಅಭಿಪ್ರಾಯ ತಿಳಿಸಿ.

ಕೋಟಿ ಕೋಟಿ

ಕೋಟಿ ಕೋಟಿ

ಬೆಂಗಳೂರಿನ ವಿಧಾನಸೌಧ ಪ್ರವೇಶಿಸುತ್ತಿದ್ದ ಕಾರೊಂದನ್ನು ಶುಕ್ರವಾರ ಮಾಮೂಲಿನಂತೆ ಭದ್ರತಾ ಪರೀಕ್ಷೆ ಮಾಡುವಾಗ 2.5 ಕೋಟಿ ರುಪಾಯಿ ಸಿಕ್ಕಿತು. ಆ ನಂತರ ಕಾರಿನಲ್ಲಿದ್ದ, ವೃತ್ತಿಯಲ್ಲಿ ವಕೀಲರಾದ ಸಿದ್ಧಾರ್ಥ್ ಅವರನ್ನು ಪೊಲೀಸರು ಕರೆದೊಯ್ದರು.

ಹಿಮ ಹಿಲರಿ

ಹಿಮ ಹಿಲರಿ

ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕಾದ ರಾಷ್ಟ್ರಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಹಿಲರಿ ಕ್ಲಿಂಟನ್ ಶುಕ್ರವಾರ ತಮ್ಮ ಪ್ರಚಾರದ ಸಲುವಾಗಿ ಬಂದಾಗ ಹಿಮದಿಂದ ಕೂಡಿದ ವೆಸ್ಟ್ ಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಕಂಡಿದ್ದು ಹೀಗೆ.

ಕೊಕ್ಕೊ ಕೋಳಿಯೇ

ಕೊಕ್ಕೊ ಕೋಳಿಯೇ

ನವದೆಹಲಿಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾರುವುದಕ್ಕೆ ಶನಿವಾರ ಗಾಜಿಪುರದ ಕೋಳಿ ಮಾರುಕಟ್ಟೆಯಲ್ಲಿ ಇಟ್ಟಿದ್ದ ಕೋಳಿ.

ಚೆಲುವೆಯರ ನೋಟ ಚೆನ್ನ

ಚೆಲುವೆಯರ ನೋಟ ಚೆನ್ನ

ಸ್ವೀಡನ್ ನ ಗೊಟೆಬಾರ್ಗ್ ನಲ್ಲಿ ಸ್ವೀಡನ್ ಹಾಗೂ ಇರಾನ್ ಮಧ್ಯೆ ಶುಕ್ರವಾರ ಅಂತರ ರಾಷ್ಟ್ರೀಯ ಸ್ನೇಹಪರ ಫುಟ್ ಬಾಲ್ ಪಂದ್ಯ ನಡೆಯಿತು. ಆ ವೇಳೆ ಸೆಲ್ಫಿ ತೆಗೆದುಕೊಂಡ ಇರಾನ್ ತಂಡದ ಆಟಗಾರ್ತಿಯರು.

ಹಿಡಿ ಹಿಡಿ

ಹಿಡಿ ಹಿಡಿ

ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಕಬಡ್ಡಿ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತದ ಆಟಗಾರರು ಥಾಯ್ಲೆಂಡ್ ರೈಡರ್ ನನ್ನು ಹಿಡಿದ ರೋಚಕ ಕ್ಷಣ.

ದೀಪ ಪ್ರಾರ್ಥನೆ

ದೀಪ ಪ್ರಾರ್ಥನೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಐಎಡಿಎಂಕೆ ಸದಸ್ಯೆಯರು ಕೊಯಮತ್ತೂರಿನ ದೇವಾಲಯದಲ್ಲಿ 1,508 ದೀಪ ಹೊತ್ತಿಸಿದರು.

ಕಬಡ್ಡಿ 'ಕೋರ್ಟ್'ಗೆ

ಕಬಡ್ಡಿ 'ಕೋರ್ಟ್'ಗೆ

ಪತ್ನಿಗೆ ಹಿಂಸೆ ನೀಡಿ, ಆತ್ಮಹತ್ಯೆಗೆ ಕಾರಣರಾದ ಆರೋಪದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ನನ್ನು ಶುಕ್ರವಾರ ಬಂಧಿಸಿ, ಮುಂಬೈ ಮೆಟ್ರೋಪಾಲಿಟನ್ ಕೋರ್ಟ್ ಗೆ ಹಾಜರುಪಡಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various events presented through photos, it is a different attempt of news presentation from wide range of category.
Please Wait while comments are loading...