ಪಾಟ್ನಾ ಪ್ರವಾಹದಲ್ಲಿ ರೂಪದರ್ಶಿಯ ಫೋಟೋಶೂಟ್ ವೈರಲ್
ಪಾಟ್ನಾ, ಅಕ್ಟೋಬರ್ 01: ಭಾರೀ ಮಳೆ ಮತ್ತು ಪ್ರವಾಹದಿಂದ ಅಕ್ಷರಶಃ ಜಲಾವೃತವಾಗಿರುವ ಪಾಟ್ನಾದ ರಸ್ತೆಯಲ್ಲಿ ರೂಪದರ್ಶಿಯೊಬ್ಬರು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವ ಚುತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
"ಮರ್ಮೇಡ್ ಇನ್ ಡಿಸಾಸ್ಟರ್" ಎಂಬ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಸೌರವ್ ಅನುರಾಜ್ ಎಂಬ ಫೋಟೋಗ್ರಾಫರ್ ಪೋಸ್ಟ್ ಮಾಡಿದ್ದಾರೆ.

ಈ ಮಹಿಳೆಯನ್ನು ನ್ಯಾಶ್ನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(NIFT) ಯ ವಿದ್ಯಾರ್ಥಿನಿಯಾಗಿರುವ ಅದಿತಿ ಸಿಂಗ್ ಎಂದು ಗುರುತಿಸಲಾಗಿದೆ.
ಆಕೆಯ ಚಿತ್ರಕ್ಕೆ ಇನ್ ಸ್ಟಾಗ್ರಾಂ ನಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಮಿಶ್ರಪ್ರತಿಕ್ರಿಯೆ ವ್ಯಜ್ತವಾಗಿದೆ. ಅದಿತಿ ಸಿಂಗ್ ಅವರ ಧೈರ್ಯವನ್ನು ಕೆಲವರು ಮೆಚ್ಚಿದ್ದರೆ, ಮತ್ತೆ ಕೆಲವರು, ಜನರು ಪ್ರವಾಹದಿಂದ ತತ್ತರಿಸುತ್ತಿರುವಾಗ ಇವರಿಗೆ ಫೋಟೋಶೂಟ್ ಚಿಂತೆ ಎಂದು ಲೇವಡಿ ಮಾಡಿದ್ದಾರೆ.
View this post on InstagramA post shared by Meow Studio (Saurav Anuraj) (@sauravanuraj) on
ಬಿಹಾರದಲ್ಲಿ ಭಾರೀ ಮಳೆಯಿಂದ ಉಂಟಾಗಿವ ಪ್ರವಾಹದಿಂದ ರಾಜಧಾನಿ ಪಾಟ್ನಾ ಅಕ್ಷರಶಃ ಮುಳುಗಿದ್ದು, ಇದುವೆರಗೆ 29 ಮಂದಿ ಮೃತರಾಗಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ ಹಲವು ದಿನಗಳಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮಂಗಳವಾರದವರೆಗೆ ಶಾಲೆಗಳನ್ನು ಮುಚ್ಚಲಾಗಿದೆ.












Click it and Unblock the Notifications