ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನದಂದು 17 ಸಮಾವೇಶ ಲಾಲೂ ದಾಖಲೆ ಮುರಿದ ತೇಜಸ್ವಿ

|
Google Oneindia Kannada News

ಪಾಟ್ನ, ನ.2: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಒಂದೇ ದಿನ 17 ಚುನಾವಣಾ ಪ್ರಚಾರ ಸಮಾವೇಶ ನಡೆಸಿ ಮಾಜಿ ಮುಖ್ಯ ಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಅವರ ಪುತ್ರ ತೇಜಸ್ವಿ ಯಾದವ್ ಅವರು ಮುರಿದಿದ್ದಾರೆ.

ರಾಷ್ಟ್ರೀಯ ಜನತಾ ದಳ ಮುಖಂಡ ತೇಜಸ್ವಿ ಯಾದವ್ ಅವರು ಶನಿವಾರದಂದು ಒಂದೇ ದಿನ 19 ಚುನಾವಣಾ ಸಮಾವೇಶ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ತೇಜಸ್ವಿ ಅವರು 17 ಸಾರ್ವಜನಿಕ ಸಭೆಗಳು ಹಾಗೂ 2 ರೋಡ್ ಶೋಗಳಲ್ಲಿ ಪಾಲ್ಗೊಂಡಿದ್ದರು.

ಬಿಹಾರದ ಸಿಎಂ ತೇಜಸ್ವಿಯಾದರೂ ಅಚ್ಚರಿಯಿಲ್ಲ: ಸಂಜಯ್ ರಾವತ್ಬಿಹಾರದ ಸಿಎಂ ತೇಜಸ್ವಿಯಾದರೂ ಅಚ್ಚರಿಯಿಲ್ಲ: ಸಂಜಯ್ ರಾವತ್

ಸಿತಾಮರ್ಹಿಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭಿಸಿ ಸಂಜೆ 4.45ಕ್ಕೆ ವೈಶಾಲಿ ಜಿಲ್ಲೆಯಲ್ಲಿ ಕೊನೆಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್ ಗಂಜ್, ಸಿವಾನ್, ಛಾಪ್ರಾ ಹಾಗೂ ವೈಶಾಲಿಯಲ್ಲಿ ತೇಜಸ್ವಿ ಸುತ್ತಾಡಿದ್ದಾರೆ.

Tejashwi Yadav breaks Lalus record, holds 19 public meetings in a day

ಮಹಾಘಟಬಂಧನ್ ಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ತೇಜಸ್ವಿ ಅವರು 14 ರಿಂದ 16 ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದರೆ, ಎನ್ಡಿಎಯ ಸಿಎಂ ಅಭ್ಯರ್ಥಿ ಹಾಲಿ ಸಿಎಂ ನಿತೀಶ್ ಕುಮಾರ್ ಅವರು ದಿನವೊಂದಕ್ಕೆ 3 ರಿಂದ 4 ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ 54.26ರಷ್ಟು ಮತದಾನ ನಡೆದಿದೆ. ನವೆಂಬರ್.03ರಂದು ಎರಡನೇ ಹಂತ ಮತ್ತು ನವೆಂಬರ್.07ರಂದು ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

English summary
The RJD leader held 17 public meetings and two roadshows during the campaign for the current Bihar assembly elections on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X