ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್''

|
Google Oneindia Kannada News

ಪಾಟ್ನಾ,ಸೆ. 9: ಕೊರೊನಾವೈರಸ್ ಸೋಂಕು ಹರಡುವ ಭೀತಿ ನಡುವೆ ಕೇಂದ್ರ ಚುನಾವಣಾ ಆಯೋಗವು ನಿಗದಿಯಂತೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ. ಇನ್ನೊಂದೆಡೆ ರಾಜಕೀಯ ಮೈತ್ರಿಕೂಟಗಳು ಸೀಟು ಹಂಚಿಕೆ, ಚುನಾವಣೆ ಪ್ರಚಾರ ಆರಂಭಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವರ್ಚುಯಲ್ ಸಮಾವೇಶ ನಡೆಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಭಾಷಣದುದ್ದಕ್ಕೂ ಲಾಲೂ ಪ್ರಸಾದ್ ಯಾದವ್ ಕುಟುಂಬದ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷ ನಾಯಕ, ಆರ್ ಜೆ ಡಿ ಮುಖಂಡ ತೇಜಸ್ವಿ ಯಾದವ್, ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್ ಆಗಿದೆ ಎಂದಿದ್ದಾರೆ.

Recommended Video

ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada

ಇದಕ್ಕೂ ಮುನ್ನ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿ ಅಂಶದ ಪ್ರಕಾರ ಬಿಹಾರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಶೇ 40ರಷ್ಟಿದೆ. ಪ್ರತಿ 4 ಗಂಟೆಗಳಿಗೊಮ್ಮೆ ಅತ್ಯಾಚಾರ, 5 ಗಂಟೆಗಳಿಗೊಮ್ಮೆ ಕೊಲೆಯಾಗುತ್ತಿದೆ. ಜನರನ್ನು ಭಯದ ವಾತಾವರಣದಲ್ಲಿಡಲು ನಿತೀಶ್ ಕುಮಾರ್ ಬಯಸಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಹಾಘಟಬಂಧನ್ ಜೊತೆ ಎಡಪಕ್ಷಗಳ ಚುನಾವಣಾ ಮೈತ್ರಿ!ಮಹಾಘಟಬಂಧನ್ ಜೊತೆ ಎಡಪಕ್ಷಗಳ ಚುನಾವಣಾ ಮೈತ್ರಿ!

ಡಿಜಿಟಲ್ ವೇದಿಕೆ ಬಳಸಿಕೊಂಡು ನಿತೀಶ್ ಅವರು ಕೈಗೊಂಡ ಚುನಾವಣಾ ಪ್ರಚಾರಕ್ಕೆ ಸುಮಾರು 15,000 ವೀಕ್ಷಣೆ ಮಾತ್ರ ಸಿಕ್ಕಿದೆ. ಈ ಸಮಾವೇಶ ಸೂಪರ್ ಡೂಪರ್ ಫ್ಲಾಪ್ ಆಗಿದೆ, ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಿದ್ದ ನಿತೀಶ್ ಅವರಿಗೆ ಈಗ ವಾಸ್ತವದ ಅರಿವಾಗಿರಬೇಕು, ಡಿಸ್ ಲೈಕ್ ಗಳನ್ನು ಎದುರಿಸಲು ಸಿದ್ಧರಾಗಬೇಕು. ಆತ್ಮವಿಶ್ವಾಸ ಇಲ್ಲದ ಮೊದಲ ಭಾಷಣದಿಂದ ಚುನಾವಣೆಗೆ ಮುನ್ನವೇ ಸೋಲೊಪ್ಪಿಕೊಂಡಂತಾಗಿದೆ ಎಂದು ತೇಜಸ್ವಿ ಪ್ರತಿಕ್ರಿಯಿಸಿದ್ದಾರೆ.

RJD Leader Tejashwi Yadav terms CM Nitish Kumar’s virtual rally as super duper flop

ನಾನು ಸಿಎಂ ನಿತೀಶ್ ಬಳಿ 10 ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದೆ, ದುರಾದೃಷ್ಟವಶಾತ್ ಅವರು ಒಂದೇ ಒಂದು ಪ್ರಶ್ನೆಗೂ ಉತ್ತರಿಸಿಲ್ಲ, ವಿಪಕ್ಷ ನಾಯಕನ ಪ್ರಶ್ನೆಗೆ ಉತ್ತರಿಸಲು ಆಗದ ಸಿಎಂ ಈಗ ಜನರ ಪ್ರಶ್ನೆಗೆ ಹೇಗೆ ಉತ್ತರಿಸುತ್ತಾರೆ ನೋಡೋಣ, ಜನ ಕಲ್ಯಾಣದ ಬಗ್ಗೆ ನಾನು ಪ್ರಶ್ನೆ ಮಾಡುತ್ತಲೇ ಇರುತ್ತೇನೆ ಎಂದರು.

RJD Leader Tejashwi Yadav terms CM Nitish Kumar’s virtual rally as super duper flop

'ಲಾಲೂ ಪ್ರಸಾದ್ ಕುಟುಂಬ ಸೊಸೆಗೆ ಏನು ಮಾಡಿದೆ ನೋಡಿ''ಲಾಲೂ ಪ್ರಸಾದ್ ಕುಟುಂಬ ಸೊಸೆಗೆ ಏನು ಮಾಡಿದೆ ನೋಡಿ'

ಬಿಹಾರ ಇಂದು ದುಃಸ್ಥಿತಿಯಲ್ಲಿದೆ
10 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿರುವುದಾಗಿ ನಿತೀಶ್ ಹೇಳಿದ್ದಾರೆ. ಆದರೆ ಪಟ್ಟಿ ನೀಡಲು ಹೆದರುತ್ತಿದ್ದಾರೆ ಏಕೆ? ಶಿಕ್ಷಕರ ನೇಮಕ ಕುರಿತ ಪತ್ರ ಕಾಣೆಯಾಗಿದೆ, ಪೊಲೀಸ್ ಇಲಾಖೆಯಲ್ಲಿ 50,000 ಹುದ್ದೆಗಳು ಖಾಲಿಯಿವೆ. ಒಂದು ಲಕ್ಷ ಜನತೆಗೆ 77 ಪೊಲೀಸರು ಲಭ್ಯವಾಗಿದ್ದಾರೆ ಅಷ್ಟೇ. ಬಿಹಾರದ ಆರೋಗ್ಯ ಇಲಾಖೆಯಲ್ಲೂ ನೇಮಕಾತಿಯಾಗಿಲ್ಲ. ಒಟ್ಟಾರೆ, ವಿವಿಧ ಇಲಾಖೆಗಳಲ್ಲಿ 4.5 ಲಕ್ಷ ಹುದ್ದೆಗಳು ಖಾಲಿಯಿವೆ. ಇನ್ನೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಲ್ಲ ಏಕೆ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ.

English summary
Leader of Opposition in the Assembly Tejashwi Yadav termed the virtual rally as a "super duper flop", claiming it did not attract more than 15,000 viewers on all digital platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X