• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಕೋವಿಡ್‌ ಪ್ರಕರಣ ಜಿಗಿತ: ಪಾಟ್ನಾ ಹೈಕೋರ್ಟ್ ಕಳವಳ

|
Google Oneindia Kannada News

ಪಾಟ್ನಾ, ಜೂ.12: ಬಿಹಾರದಲ್ಲಿ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಮೊದಲ ಬಾರಿಗೆ ಕೊರೊನಾ ದತ್ತಾಂಶ ಪರಿಷ್ಕರಣೆ ನಡೆಸಿದ್ದು ಈ ಪರಿಷ್ಕರಣೆ ಬಳಿಕ ಬಿಹಾರದಲ್ಲಿ ಏಕಾಏಕಿ 3,971 ಅಧಿಕ ಸಾವು ಸೇರ್ಪಡೆಯಾಗಿದೆ. ಹಾಗೆಯೇ ರಾಜ್ಯದಲ್ಲಿ ಕೋವಿಡ್ -19 ಸಂಖ್ಯೆಯು ಶೇ 72.75 ರಷ್ಟು ಹೆಚ್ಚಿಸಿದೆ.

ಕೊರೊನಾ ಸಾಂಕ್ರಾಮಿಕದ ಎರಡನೇಯ ಅಲೆಯ ಸಂದರ್ಭ ದತ್ತಾಂಶ ಪರಿಷ್ಕರಣೆಗೆ ಪಾಟ್ನಾ ಹೈಕೋರ್ಟ್ ಒತ್ತಾಯಿಸಿದ ನಂತರ ರಾಜ್ಯ ಸರ್ಕಾರ ಕೋವಿಡ್ -19 ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿ, ಪ್ರತಿ-ಅಫಿಡವಿಟ್ ಸಲ್ಲಿಸಿತ್ತು. ಈ ಸಾವಿನ ಸಂಖ್ಯೆ ಏರಿಕೆಯ ಬಗ್ಗೆ ಶುಕ್ರವಾರ ಪಾಟ್ನಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಹಾಗೆಯೇ ಈ ಪ್ರಕರಣದಲ್ಲಿ ವಿವರವಾದ ವಿಚಾರಣೆಯನ್ನು ನಡೆಸಲು ವಿಶೇಷ ಪೀಠವನ್ನು ರಚಿಸಿದೆ.

ಬಿಹಾರದಲ್ಲಿ ಕೋವಿಡ್‌ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು ದೃಢ ಬಿಹಾರದಲ್ಲಿ ಕೋವಿಡ್‌ ಮರಣ ಅಂಕಿಅಂಶ ಪರಿಷ್ಕರಣೆ: 9,000 ಕ್ಕೂ ಅಧಿಕ ಸಾವು ದೃಢ

ಬಿಹಾರ ಸರ್ಕಾರ ಸಲ್ಲಿಸಿರುವ ಪ್ರತಿ-ಅಫಿಡವಿಟ್ ಅನ್ನು "ಗಂಭೀರ" ಎಂದು ಹೇಳಿರುವ, ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಎಸ್ ಕುಮಾರ್‌ರನ್ನು ಒಳಗೊಂಡ ವಿಭಾಗೀಯ ಪೀಠವು ಶುಕ್ರವಾರ, "ಹೈಕೋರ್ಟ್ ಆದೇಶ ಮಾಡಿದ ನಂತರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಹೈಕೋರ್ಟ್ ಮೇ 17, 2021 ರಂದು ಆದೇಶ ಹೊರಡಿಸದಿದ್ದಲ್ಲಿ, ಈ ಭಾರೀ ಪ್ರಮಾಣದ ಸಾವುಗಳ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ" ಎಂದು ಅಭಿಪ್ರಾಯಿಸಿದೆ.

ಏತನ್ಮಧ್ಯೆ, ಬಿಹಾರ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಲಲಿತ್ ಕಿಶೋರ್ ಈ ಪ್ರಕರಣದ ವಿಚಾರಣೆಗೆ ಹೆಚ್ಚಿನ ಸಮಯವನ್ನು ಕೋರಿದರು. ಆದರೆ, ಸಮಯ ನೀಡಲು ನ್ಯಾಯಾಲಯ ನಿರಾಕರಿಸಿದ್ದು ವಿಷಯ ಗಂಭೀರವಾಗಿದೆ ಮತ್ತು ಶೀಘ್ರವಾಗಿ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಈ ಪ್ರಕರಣದ ವಿಚಾರಣೆ ಶನಿವಾರ ನಡೆಯಲಿದೆ.

ದೇಶದಲ್ಲಿ ಹಠಾತ್‌ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು? ದೇಶದಲ್ಲಿ ಹಠಾತ್‌ ಕೊರೊನಾ ಸಾವು ಸಂಖ್ಯೆ ಏರಿಕೆಗೆ ಕಾರಣವೇನು?

ಬಿಹಾರದಲ್ಲಿ 5,500 ಕ್ಕಿಂತ ಕಡಿಮೆಯಾಗಿದ್ದ ಕೊರೊನಾ ಸಾವು ಪ್ರಕರಣಗಳು ಪರಿಷ್ಕರಣೆಯ ಬಳಿಕ 9,429 ಕ್ಕೆ ಏರಿದೆ. ಬುಧವಾರ ಪರಿಷ್ಕರಣೆಯ ಬಳಿಕ ದೇಶದ ಕೊರೊನಾ ಸಾವು ಪ್ರಕರಣಗಳ ದತ್ತಾಂಶ ಪಟ್ಟಿಯಲ್ಲಿ ಬಿಹಾರ 12 ನೇ ಸ್ಥಾನದಲ್ಲಿದೆ. ಇನ್ನು ಈ ಸಾವುಗಳ ಪೈಕಿ ಈ ಹೆಚ್ಚಿನವುಗಳು ಈ ಹಿಂದೆ ಚೇತರಿಸಿಕೊಂಡಿರುವ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಈ ಕಾರಣದಿಂದಾಗಿ ರಾಜ್ಯದಲ್ಲಿ ಚೇತರಿಕೆ ಸಂಖ್ಯೆಯು ಇಳಿಕೆ ಕಂಡಿದೆ. ಪರಿಷ್ಕರಣೆಗೂ ಮೊದಲು 7,01,234 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದ್ದು ಪರಿಷ್ಕರಣೆ ಬಳಿಕ ಈ ಅಂಕಿ ಅಂಶ 6,98,397 ಕ್ಕೆ ಕುಸಿದಿದೆ. ಈ ಮೂಲಕ ಶೇ 98.70 ರಷ್ಟಿದ್ದ ಚೇತರಿಕೆ ಪ್ರಮಾಣ ಪರಿಷ್ಕರಣೆಯ ನಂತರ ಶೇ 97.65 ಕ್ಕೆ ಇಳಿದಿದೆ. ಸಾವಿನ ಪ್ರಮಾಣವು ಶೇಕಡಾ 1.22 ರಿಂದ 1.23 ಕ್ಕೆ ಏರಿದೆ.

(ಒನ್‌ಇಂಡಿಯಾ ಸುದ್ದಿ)

   Virat ಪಡೆಗೆ ಅಭ್ಯಾಸದ ಪಂದ್ಯದಿಂದ ನಿರಾಸೆ! | Oneindia Kannada
   English summary
   Patna High Court concerns about jump in Bihar Covid-19 after revise and constituted a special bench to conduct a detailed hearing in this case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X