ಬಿಹಾರದಲ್ಲಿ ನಿಗೂಢ ಕಾಯಿಲೆಗೆ ಲಿಚಿ ಹಣ್ಣು ಕಾರಣ? ಸಾವಿನ ಸಂಖ್ಯೆ 144 ಕ್ಕೆ ಏರಿಕೆ

ಪಾಟ್ನಾ, ಜೂನ್ 19: ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 144 ಕ್ಕೇರಿದ್ದು, ಮಕ್ಕಳ ಸಾವಿಗೆ ಮೆದುಳಿನ ಉರಿಯೂತವೇ ಕಾರಣ ಎನ್ನಲಾಗಿದೆ.

ಮೆದುಳಿನ ಉರಿಯೂತ ಅಂದರೆ Acute Encephalitis Syndrome ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಈಗಾಗಲೇ ಇಲ್ಲಿನ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ(ಎಸ್ ಕೆ ಎಂಸಿಎಚ್) ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಹೆಚ್ಚಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ.

ಮಂಗಳವಾರ ಆಸ್ಪತ್ರೆಗೆ ಆಗಮಿಸಿದ್ದ ನಿತೀಶ್ ಕುಮಾರ್, ಎಇಎಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ 300 ಕ್ಕೂ ಹೆಚ್ಚು ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಪ್ರಯೋಗಾಲಯಕ್ಕೆ ಲಿಚಿ ಹಣ್ಣುಗಳು!

ಪ್ರಯೋಗಾಲಯಕ್ಕೆ ಲಿಚಿ ಹಣ್ಣುಗಳು!

ಈಗಾಗಲೇ ಈ ಕಾಯಿಲೆಗೆ ಲಿಚಿ ಹಣ್ಣೂ ಕಾರಣ ಎನ್ನಲಾಗುತ್ತಿದ್ದು, ಬಿಹಾರ ಸರ್ಕಾರವು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಲಿಚಿ ಹಣ್ಣಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಪ್ರಯೋಗಕ್ಕೊಳಪಡಿಸುವಂತೆ ಆದೇಶಿಸಿದೆ. ಈ ಹಣ್ಣಿನ ಸೇವನೆಯಿಂದ ಆರಂಭವಾದ ಕಾಯಿಲೆ ನಂತರ ಒಬ್ಬರಿಂದ ಒಬ್ಬರಿಗೆ ಸೋಂಕಾಗಿ ಹರಡಿರಬಹುದು ಎನ್ನಲಾಗಿದೆ.

ಲಿಚಿ ಹಣ್ಣುಗಳಲ್ಲಿ ಅಂಥದ್ದೇನಿದೆ?

ಲಿಚಿ ಹಣ್ಣುಗಳಲ್ಲಿ ಅಂಥದ್ದೇನಿದೆ?

ಲಿಚಿ ಹಣ್ಣಿನಲ್ಲಿರುವ ಟಾಕ್ಸಿನ್ ಅಂಶ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತಿದ್ದು, ಆದ್ದರಿಂದಲೇ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬ ಅನುಮಾನ ಎದ್ದಿದೆ. ಲಿಚಿ ಹಣ್ಣುಗಳನ್ನು ಪೋಷ್ಠಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ತಿಂದರೆ ಅದರಲ್ಲಿರುವ ಟಾಕ್ಸಿನ್ ಅಂಶ ಅವರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಇದರಿಂದ ಸಾವು ಸಂಭವಿಸುತ್ತದೆ ಎಂಬುದು ವೈದ್ಯರ ಅನುಮಾನ.

ಲಕ್ಷಣವೇನು?

ಲಕ್ಷಣವೇನು?

ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ.

15 ವರ್ಷದೊಳಗಿನ ಮಕ್ಕಳಲ್ಲಿ

15 ವರ್ಷದೊಳಗಿನ ಮಕ್ಕಳಲ್ಲಿ

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, 15 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಮುಜಾಫರ್ಪುರದಲ್ಲಿ ಹೈಪೋಗ್ಲೆಸಿಮಿಯಾ ಕಾಯಿಲೆ ಆಗಾಗ ಕಂಡುಬರುತ್ತಿತ್ತು. ಆದರೆ AES ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ ಮುಜಾಫರ್ಪುರದಲ್ಲಿಯೇ ಅತೀ ಹೆಚ್ಚು ಮಕ್ಕಳು ಸತ್ತಿದ್ದಾರೆ ಎನ್ನಲಾಗಿದ್ದು, ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+