ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಿಹಾರ ಫಲಿತಾಂಶದ ದಿನ ಬಣ್ಣ ಎರೆಚುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ"

|
Google Oneindia Kannada News

ಪಾಟ್ನಾ, ನವೆಂಬರ್.08: ಬಿಹಾರದ 243 ವಿಧಾನಸಭಾ ಚುನಾವಣಾ ಫಲಿತಾಂಶದ ದಿನ ಶಿಸ್ತುಬದ್ಧವಾಗಿ ಹಾಗೂ ಶಾಂತಿಯುತವಾಗಿ ತಾಳ್ಮೆಯಿಂದ ವರ್ತಿಸುವಂತೆ ತಮ್ಮ ಬೆಂಬಲಿಗರಿಗೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ್ ಕರೆ ಕೊಟ್ಟಿದ್ದಾರೆ.

Recommended Video

Bihar Election 3rd Phase: Ashwamesh Devi ಅಭ್ಯರ್ಥಿ ತಮ್ಮ ಮತ ಚಲಾಯಿಸಿದರು | Oneindia kannada

ರಾಜ್ಯದಲ್ಲಿ ಮೂರು ಹಂತಗಳ ಮತದಾನ ಪ್ರಕ್ರಿಯೆ ಪೂರ್ಣಗೊೆೆಂಡಿದೆ. ಮಹಾಘಟಬಂಧನ್ ಮಹಾಮೈತ್ರಿಕೂಟಕ್ಕೆ ಅಧಿಕಾರದ ಗದ್ದುಗೆ ಒಲಿದು ಬರಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿವೆ.

Todays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆTodays Chanakya Exit Poll: ಮಹಾಘಟಬಂಧನ್ ಮೈತ್ರಿಕೂಟಕ್ಕೆ ಗದ್ದುಗೆ

ಬಿಹಾರ ಚುನಾವಣಾ ಫಲಿತಾಂಶ ಅದೇನೇ ಬರಲಿ ಪಕ್ಷದ ಕಾರ್ಯಕರ್ತರು ಮಾತ್ರ ಶಿಸ್ತಿನಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸುವಂತಿಲ್ಲ. ಪರಸ್ಪರ ಬಣ್ಣಗಳನ್ನು ಎರಚುವಂತಿಲ್ಲ. ರೌಡಿಗಳ ರೀತಿಯಲ್ಲಿ ವರ್ತಿಸುವಂತಿಲ್ಲ. ಗೆಲುವಿನ ಖುಷಿಯಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವಂತಿಲ್ಲ ಎಂದು ತೇಜಸ್ವಿ ಯಾದವ್ ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Dont Behave Indiscipline: Tejaswi Yadav Message To RJD Party Workers Ahead Bihar Election Result

ಮೂರು ಹಂತಗಳಲ್ಲಿ ಶೇಕಡಾವಾರು ಮತದಾನ:

ರಾಜ್ಯದಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧದ ಆಡಳಿತ ವಿರೋಧಿ ಅಲೆಯು ಎನ್ ಡಿಎ ಮೈತ್ರಿಕೂಟಕ್ಕೆ ಮುಳ್ಳಲಾಗಲಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಮತದಾನೋತ್ತರ ಸಮೀಕ್ಷೆ ವರದಿಯಿಂದಾಗಿ ಫಲಿತಾಂಶದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ನವೆಂಬರ್,10ರಂದು ಹೊರಬೀಳಲಿರುವ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.

2020ರ ವಿಧಾನಸಭಾ ಚುನಾವಣೆ ಬಳಿಕ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ನಡೆದಿರುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ.

English summary
Don't Behave Indiscipline: Tejaswi Yadav Message To RJD Party Workers Ahead Bihar Election Result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X