ಗೋವು ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಮೂವರನ್ನು ಕೊಂದ ಗೋ ರಕ್ಷಕರು

ಬಿಹಾರ, ಜುಲೈ 20: ಗೋವುಗಳನ್ನು ಕಳ್ಳತನ ಮಾಡಿ ಲಾರಿ ತುಂಬುತ್ತಿರುವಾಗ ಗೋ ರಕ್ಷಕರ ಕೈಗೆ ಸಿಕ್ಕ ಮೂವರನ್ನು ಹೊಡೆದು ಕೊಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ದೇಶದಲ್ಲಿ ಗೋ ಕಳ್ಳರು ಹೆಚ್ಚಾಗಿದ್ದಾರೆ, ಅದನ್ನು ತಡೆಯಲು ಸರ್ಕಾರದಿಂದ ಆಗುತ್ತಿಲ್ಲ, ಅದರಿಂದ ಉದ್ಭವವಾಗುವ ದೊಂಬಿ, ಗಲಾಟೆಯನ್ನೂ ಕೂಡ ನಿಯಂತ್ರಿಸಲಾಗುತ್ತಿಲ್ಲ ಎಂದು ಕೆಲವರು ದೂರಿದ್ದಾರೆ.

ಗೋವನ್ನು ಕಳ್ಳತನ ಮಾಡಿದ್ದರೆ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕಿತ್ತು ಆದರೆ ಕೊಲೆಯನ್ನೇ ಮಾಡುವುದೇ, ನಮಗೆ ಇನ್ಯಾರು ದಿಕ್ಕು ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

 Cow vigilantes murder cattle smugglers

ಮೂವರು ಕಳ್ಳರು ಗೋವುಗಳನ್ನು ಟ್ರಕ್‌ಗೆ ತುಂಬುತ್ತಿರುವುದನ್ನು ಗಮನಿಸಿದ ಗೋ ರಕ್ಷಣಕರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ. 2014ರಿಂದ ಈ ರೀತಿಯ ಗಲಭೆಯಲ್ಲಿ ನೂರಾರು ಮಂದಿ ಪ್ರಾಣಕಳೆದುಕೊಂಡಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+