ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ವಿವಿಯ 'ಕೋವಿಶೀಲ್ಡ್' ಲಸಿಕೆಯ ಮಾನವ ಪ್ರಯೋಗ ಶೀಘ್ರದಲ್ಲೇ ಶುರು

|
Google Oneindia Kannada News

ಪಟ್ನಾ, ಆಗಸ್ಟ್ 22: ಬಿಹಾರದ ಪಟ್ನಾದಲ್ಲಿರುವ ಆರ್‌ಎಂಆರ್‌ಐ ಕೋವಿಶೀಲ್ಡ್ ಲಸಿಕೆಯ ಮಾನವ ಪ್ರಯೋಗದ ಎರಡು ಮತ್ತು ಮೂರನೇ ಹಂತಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಬ್ರಿಟಿಷ್-ಸ್ವೀಡಿಷ್ ಬಹುರಾಷ್ಟ್ರೀಯ ಕಂಪೆನಿ ಆಸ್ಟ್ರಾಜೆನಿಕಾ ಜತೆಗಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಇದಾಗಿದೆ.

Recommended Video

ರಾಜಣ್ಣ ಸರ್ಕಲ್ ನಲ್ಲಿ ನಾಡದೊರೆಗೆ ಪ್ರತಿಮೆ‌‌ ಮೂಲಕ ನಮನ | Oneindia Kannada

ದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೋವಿಶೀಲ್ಡ್ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ದೇಶದಾದ್ಯಂತ ಒಟ್ಟು 17 ಸಂಸ್ಥೆಗಳಿಗೆ ಅನುಮತಿ ನೀಡಿದೆ. ಅದರಲ್ಲಿ ಆರ್‌ಎಂಆರ್‌ಐ ಒಂದು.

ಕೋವಿಡ್ ರೋಗಿಗಳಿಗೆ ಆಮ್ಲಜನಕ ಬಳಕೆ: ಸರ್ಕಾರದ ಹೊಸ ನಿಯಮಕೋವಿಡ್ ರೋಗಿಗಳಿಗೆ ಆಮ್ಲಜನಕ ಬಳಕೆ: ಸರ್ಕಾರದ ಹೊಸ ನಿಯಮ

ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾದ ಲಸಿಕೆಯನ್ನು (ಸಿಎಚ್‌ಎಡಿಒಎಕ್ಸ್1- ಭಾರತದಲ್ಲಿ ಕೋವಿಶೀಲ್ಡ್) ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಉತ್ಪಾದಿಸುತ್ತಿದ್ದು, ದೆಹಲಿಯ ಐಸಿಎಂಆರ್‌ನ ಸಹಭಾಗಿತ್ವದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಎರಡೂ ಹಂತಗಳಲ್ಲಿ ರಾಂಡಮ್ ಆಗಿ ಪರೀಕ್ಷೆಗಳು ನಡೆಯಲಿವೆ. ಮಾನವ ದೇಹದ ಪ್ರತಿರಕ್ಷಣಾ ಸ್ಪಂದನೆ ಮತ್ತು ಸುರಕ್ಷತೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಮುಂದೆ ಓದಿ.

160 ಜನರ ಆಯ್ಕೆ

160 ಜನರ ಆಯ್ಕೆ

ಈ ಪ್ರಯೋಗಕ್ಕೆ 18 ವರ್ಷ ಮೇಲ್ಪಟ್ಟ ಒಟ್ಟು 160 ಆರೋಗ್ಯವಂತ ಪುರುಷರು ಮತ್ತು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಒಪಿಡಿ ಆಧಾರದಲ್ಲಿ ಈ ಕ್ಲಿನಿಕಲ್ ಪ್ರಯೋಗಗಳು ನಡೆಯಲಿವೆ. ಅಂದರೆ, ಇದರಲ್ಲಿ ಪಾಲ್ಗೊಳ್ಳುವ ಜನರು ದಾಖಲಾಗುವ ಅಗತ್ಯವಿಲ್ಲ. ಸ್ವಯಂ ಸೇವಕರ ಸ್ನಾಯುಯೊಳಗೆ ಮೊದಲ ದಿನದಿಂದ 29ನೇ ದಿನದವರೆಗೆ 0.5 ಮಿ.ಲೀ ಇಂಜೆಕ್ಷನ್ ಲಸಿಕೆ ನೀಡಲಾಗುತ್ತದೆ. 59ನೇ ದಿನ ಮತ್ತು 180ನೇ ದಿನ ಅದನ್ನು ಪುನಃ ನಡೆಸಲಾಗುತ್ತದೆ. ಈ ಲಸಿಕೆಯ ಫಲಿತಾಂಶವನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ ಎಂದು ಆರ್‌ಎಂಆರ್‌ಐ-ಪಟ್ನಾದ ನಿರ್ದೇಶಕ ಡಾ. ಪ್ರದೀಪ್ ದಾಸ್ ತಿಳಿಸಿದ್ದಾರೆ.

ವಿವಿಧೆಡೆ ಫಲಿತಾಂಶ ಸಿಕ್ಕಿದೆ

ವಿವಿಧೆಡೆ ಫಲಿತಾಂಶ ಸಿಕ್ಕಿದೆ

ದಿ ಲ್ಯಾನ್ಸೆಂಟ್ ಎಂಬ ವಿಜ್ಞಾನ ಪತ್ರಿಕೆಯೊಂದು ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪರೀಕ್ಷೆಯ ಮೊದಲ ಮತ್ತು ಎರಡನೆಯ ಹಂತದ ಫಲಿತಾಂಶಗಳ ಬಗ್ಗೆ ಉಲ್ಲೇಖಿಸಿದ್ದು, ಈ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟ ವ್ಯಕ್ತಿಗಳ ದೇಹದಲ್ಲಿ ಪ್ರತಿರಕ್ಷಣಾ ಸ್ಪಂದನೆ ಪ್ರಬಲವಾಗಿರುವುದು ಪ್ರಾಥಮಿಕ ಫಲಿತಾಂಶಗಳಲ್ಲಿ ಗೊತ್ತಾಗಿದೆ. ಇದರಿಂದ ಯಾವುದೇ ತೊಂದರೆಗಳಾಗಿಲ್ಲ ಎಂದು ತಿಳಿಸಿದೆ. ಬ್ರಿಟನ್, ಬ್ರೆಜಿಲ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಮಾನವ ಪ್ರಯೋಗಗಳು ನಡೆದಿವೆ. ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಈ ಲಸಿಕೆಗಳು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ.

ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...ಕೊರೊನಾ ವೈರಸ್ ನಿಯಂತ್ರಣ ಯಾವಾಗ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಹೀಗೆ...

ಲಸಿಕೆಯ ದಕ್ಷತೆ ವಿಶ್ಲೇಷಣೆ

ಲಸಿಕೆಯ ದಕ್ಷತೆ ವಿಶ್ಲೇಷಣೆ

ಲಸಿಕೆ ನೀಡಿದ 14 ದಿನಗಳ ಒಳಗೆ ಲಸಿಕೆಯು ಟಿ-ಸೆಲ್‌ಗಳನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ. 28 ದಿನಗಳೊಳಗೆ ಆಂಟಿಬಾಡಿಗಳು ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಈ ನಿಗಾದ ಸಮಯದಲ್ಲಿ ಲಸಿಕೆಯ ದಕ್ಷತೆ ಮತ್ತು ಟಾಕ್ಸಿಸಿಟಿಯನ್ನು ಕೂಡ ವಿಶ್ಲೇಷಣೆ ಮಾಡುತ್ತೇವೆ. ಕೋವಿಡ್ ವಿರುದ್ಧ ಈಗಾಗಲೇ ಪ್ರತಿರಕ್ಷಣಾ ಸಾಮರ್ಥ್ಯವನ್ನು ಬೆಳೆಸಿಕೊಂಡ ವ್ಯಕ್ತಿಗಳನ್ನು ಈ ಪ್ರಯೋಗಕ್ಕೆ ಒಳಪಡಲು ಅವಕಾಶ ನೀಡುವುದಿಲ್ಲ ಎಂದು ಡಾ. ದಾಸ್ ತಿಳಿಸಿದ್ದಾರೆ.

55 ಲಕ್ಷ ರೂ ಅನುದಾನ

55 ಲಕ್ಷ ರೂ ಅನುದಾನ

ನಾವು ಏಳು ತಿಂಗಳಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸುತ್ತೇವೆ. ಮೊದಲ ತಿಂಗಳು ನಾವು ಪ್ರಯೋಗಕ್ಕೆ ಒಳಪಡುವ ಸ್ವಯಂಸೇವಕರ ಹೆಸರನ್ನು ದಾಖಲಿಸುತ್ತೇವೆ. ಐಸಿಎಂಆರ್-ದೆಹಲಿ ಮತ್ತು ಎಸ್‌ಐಐ ಈ ಪ್ರಯೋಗಗಳನ್ನು ನಡೆಸಲು ಸಂಸ್ಥೆಗೆ 55 ಲಕ್ಷ ರೂ ಅನುದಾನ ನೀಡುತ್ತವೆ ಎಂದಿದ್ದಾರೆ.

ಎಲ್ಲೆಲ್ಲಿ ನಡೆಯಲಿದೆ ಪ್ರಯೋಗ?

ಎಲ್ಲೆಲ್ಲಿ ನಡೆಯಲಿದೆ ಪ್ರಯೋಗ?

ಮುಂಬೈನ ಕೆಇಎಂ ಆಸ್ಪತ್ರೆ, ಚಂಡೀಗಡದ ಬಿಜಿಐಎಂಇಆರ್, ಪುಣೆಯ ಜೆಹಾಂಗೀರ್ ಆಸ್ಪತ್ರೆ, ದೆಹಲಿಯ ಏಮ್ಸ್, ಗೋರಖ್‌ಪುರದ ಐಸಿಎಂಆರ್- ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ, ಸೇವಾಗ್ರಾಮದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ನಾಗಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಈ ಪ್ರಯೋಗಗಳು ನಡೆಯಲಿರುವ ಇತರೆ ಸಂಸ್ಥೆಗಳಲ್ಲಿ ಸೇರಿವೆ.

ಭಾರತ,ದಕ್ಷಿಣ ಏಷ್ಯಾ ಪ್ಲಾಸ್ಮಾ ದಾನಿಗಳಿಗೆ ಯುಕೆ ತುರ್ತು ಕರೆಭಾರತ,ದಕ್ಷಿಣ ಏಷ್ಯಾ ಪ್ಲಾಸ್ಮಾ ದಾನಿಗಳಿಗೆ ಯುಕೆ ತುರ್ತು ಕರೆ

English summary
RMRI-Patna will soon start phase 2 and 3 of human trials of Oxford University's Covishield vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X