"ಬಿಹಾರ ವಿಧಾನಸಭಾ ಚುನಾವಣೆ ಬಳಿಕ ನಿತೀಶ್ ಕುಮಾರ್ ನಿವೃತ್ತಿ"

ಪಾಟ್ನಾ, ನವೆಂಬರ್,05: ಬಿಹಾರ ವಿಧಾನಸಭೆ ಚುನಾವಣಾ ಕಣದಲ್ಲಿ ಸಿಎಂ ನಿತೀಶ್ ಕುಮಾರ್ ದೊಡ್ಡ ಘೋಷಣೆಯನ್ನು ಹೊರಡಿಸಿದ್ದಾರೆ. 2020ರ ಈ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ.

ಪುರ್ನಿಯಾದ ಧಂಧಹಾ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಈ ಬಾರಿ ಸ್ಪರ್ಧಿಸಿರುವುದೇ ತಮ್ಮ ಕೊನೆಯ ಚುನಾವಣೆ ಆಗಿರಲಿದೆ ಎಂದು ಘೋಷಿಸಿದ್ದಾರೆ. "ದಯವಿಟ್ಟು ಅರ್ಥ ಮಾಡಿಕೊಳ್ಳಿ, ಇಂದು ಚುನಾವಣಾ ಪ್ರಚಾರಕ್ಕೆ ಕೊನೆಯ ದಿನ. ಇದಾಗಿ ಎರಡು ದಿನಕ್ಕೆ ಮತದಾನ. ಮತ್ತು ಇದು ನಾನು ಸ್ಪರ್ಧಿಸುತ್ತಿರುವ ಕೊನೆಯ ಚುನಾವಣೆ. ಎಲ್ಲವೂ ಉತ್ತಮವಾಗಿ ನೆರವೇರಲಿದೆ" ಎಂದು ನಿತೀಶ್ ಕುಮಾರ್ ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆೆಗೆ ನವೆಂಬರ್.07ರಂದು ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್.10ರಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಎರಡು ಹಂತದ ಚುನಾವಣೆಗಳಲ್ಲಿ ದಾಖಲೆ ಮಟ್ಟದ ಮತದಾನ ನಡೆದಿದೆ.

CM Nitish Kumar Announces Retirement After Bihar Assembly Election 2020.

ಶೇ.50ಕ್ಕಿಂತ ಹೆಚ್ಚು ಮತದಾನ:

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ನಡೆದ ಮೊದಲೆರೆಡು ಹಂತದ ಚುನಾವಣೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮತದಾನ ನಡೆದಿದೆ. ಅಕ್ಟೋಬರ್.28ರಂದು ನಡೆದ ಮತದಾನದಲ್ಲಿ ಶೇ.55.69ರಷ್ಟು ಮತದಾನ ನಡೆದಿತ್ತು. ಎರಡನೇ ಹಂತದ ಚುನಾವಣೆಯಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಮೂರನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಟ್ಟು ಶೇಕಡಾವಾರು ಪ್ರಮಾಣವೆಷ್ಟು ಎಂಬುದು ತೀರ್ಮಾನವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+