ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಏಕನಾಥ್ ಶಿಂಧೆ ಮಾಡೆಲ್' ಜಾರಿಗೆ ಬಿಜೆಪಿ ಯತ್ನ: ಜೆಡಿಯು ಮುಖಂಡನ ಆರೋಪ?

|
Google Oneindia Kannada News

ಪಟ್ನಾ, ಆಗಸ್ಟ್ 09: ಬಿಹಾರದಲ್ಲಿ ಆಡಳಿತಾರೂಢ ಮಿತ್ರಪಕ್ಷಗಳ ನಡುವಿನ ಬಿರುಕು ಹೆಚ್ಚಾಗುತ್ತಿದ್ದಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಜೆಡಿಯು ಪಕ್ಷದ ನಾಯಕರೊಬ್ಬರು ರಾಜ್ಯ ಸರ್ಕಾರವನ್ನು ಹಾಳುಮಾಡಲು ಬಿಜೆಪಿ "ಏಕನಾಥ್ ಶಿಂಧೆ ಯೋಜನೆ" ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಯೋಜನೆಯನ್ನು ಸಿಎಂ ನಿತೀಶ್ ಕುಮಾರ್ ಸರಿಯಾದ ಸಮಯದಲ್ಲಿ ಗುರುತಿಸಿದ್ದಾರೆ, ಬಿಜೆಪಿ ಯೋಜನೆ ಜಾರಿಗೂ ಮೊದಲೇ ಎಚ್ಚೆತ್ತು ಸಂಪೂರ್ಣವಾಗಿ ಬದಲಾವಣೆಗೆ ಮುಂದಾಗಿದ್ದು, ಬಿಜೆಪಿ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು: ನಿತೀಶ್ ಕುಮಾರ್ ರಾಜಕೀಯ ಇತಿಹಾಸ ಗೊತ್ತಾ?ಬಿಹಾರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು: ನಿತೀಶ್ ಕುಮಾರ್ ರಾಜಕೀಯ ಇತಿಹಾಸ ಗೊತ್ತಾ?

ಮೈತ್ರಿ ಸರ್ಕಾರ ಬಹುತೇಕ ಅಂತ್ಯವಾಗುವ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಯು ನಾಯಕರು ಬಿಜೆಪಿ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲಲ್ ಸಿಂಗ್ 2020ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 'ಚಿರಾಗ್ ಮಾದರಿ' ಯಿಂದ ಜೆಡಿಯು 43 ಸೀಟು ಗೆದ್ದಿದೆ. ಜೆಡಿಯು ಸೋಲಿಸಲು ಷಡ್ಯಂತ್ರ ಮಾಡಲಾಗಿತ್ತು ಎಂದು ದೂರಿದ್ದಾರೆ.

ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಹೊರಗೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಲೋಕ ಜನಶಕ್ತಿ ಪಕ್ಷ ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಜೆಡಿಯು ಸೋಲಿಸಲು ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಬಿಹಾರ ಸಿಎಂಗೆ ಆಪ್ತರಿಂದಲೇ ಅಪಾಯ: ಹೀಗೆ ಹೇಳಿದ್ದೇಕೆ ಚಿರಾಗ್ ಪಾಸ್ವಾನ್?ಬಿಹಾರ ಸಿಎಂಗೆ ಆಪ್ತರಿಂದಲೇ ಅಪಾಯ: ಹೀಗೆ ಹೇಳಿದ್ದೇಕೆ ಚಿರಾಗ್ ಪಾಸ್ವಾನ್?

 ಏಕನಾಥ್ ಶಿಂಧೆ ಮಾದರಿ ಜಾರಿಗೆ ಯತ್ನ

ಏಕನಾಥ್ ಶಿಂಧೆ ಮಾದರಿ ಜಾರಿಗೆ ಯತ್ನ

"ಈ ಬಾರಿ, ಚಿರಾಗ್ ಮಾದರಿಯನ್ನು ಆರ್‌ಸಿಪಿ ಸಿಂಗ್ ಮೂಲಕ ಸಕ್ರಿಯಗೊಳಿಸಲಾಗಿದೆ. ಬಿಜೆಪಿ ಪಕ್ಷವು ಆರ್‌ಸಿಪಿ ಸಿಂಗ್ ಜೆಡಿಯುನಲ್ಲಿ ಉಳಿಯಲು ಮತ್ತು ಏಕನಾಥ್ ಶಿಂಧೆ ಅವರಂತೆ ಕೆಲಸ ಮಾಡಲು ಬಯಸಿತು. ಚಿರಾಗ್ ಮಾದರಿಯ ಬಗ್ಗೆ ಲಾಲನ್ ಸಿಂಗ್ ಅವರ ಹೇಳಿಕೆಯು ಬಿಹಾರದಲ್ಲಿ ಏಕನಾಥ್ ಶಿಂಧೆ ಮಾದರಿಗೆ ಉದಾಹರಣೆಯಾಗಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸುವ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ" ಎಂದು ಜೆಡಿಯು ನಾಯಕರಬ್ಬರು ಹೇಳಿದ್ದಾರೆ.

 ಆರ್‌ಸಿಪಿ ಸಿಂಗ್ ಅವರಿಗೆ ನೋಟಿಸ್ ಕೊಟ್ಟ ಜೆಡಿಯು

ಆರ್‌ಸಿಪಿ ಸಿಂಗ್ ಅವರಿಗೆ ನೋಟಿಸ್ ಕೊಟ್ಟ ಜೆಡಿಯು

ಇತ್ತೀಚೆಗಷ್ಟೇ ಪಕ್ಷದಿಂದ ನಿರ್ಗಮಿಸಿರುವುದು ಬಿಹಾರದಲ್ಲಿ ನಡೆಯುತ್ತಿರುವ ಸಂದಿಗ್ಧತೆಗಳಿಗೆ ನಾಂದಿ ಹಾಡಿದ ಹಿರಿಯ ಜೆಡಿಯು ನಾಯಕ ಆರ್‌ಸಿಪಿ ಸಿಂಗ್‌ರವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಮತ್ತು ಸಿಎಂ ನಿತೀಶ್ ಕುಮಾರ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ ಎಂದು ಜೆಡಿಯು ಮುಖಂಡ ತಿಳಿಸಿದ್ದಾರೆ.

" ಬಿಜೆಪಿ ಯೋಜನೆಯನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಸಿಎಂ ನಿತೀಶ್ ಕುಮಾರ್ ತೀರ್ಮಾನ ಮಾಡಿದ್ದು, ಆರ್‌ಸಿಪಿ ಸಿಂಗ್ ಅವರಿಗೆ ನೋಟಿಸ್ ನೀಡಲು ಜೆಡಿಯು ರಾಜ್ಯ ಅಧ್ಯಕ್ಷರಿಗೆ ಸೂಚನೆ ನೀಡಿದ್ದರು. ಆರ್‌ಸಿಪಿ ಸಿಂಗ್ ಮತ್ತು ಅವರ ಕುಟುಂಬವು ಕಳೆದ 9 ವರ್ಷಗಳಿಂದ ಪಡೆದ ಭೂಮಿಯ ಬಗ್ಗೆ ವಿವರಣೆ ನೀಡುವಂತೆ ಕೇಳಲಾಗಿದೆ. ಈ ಬೆಳವಣಿಗೆಯ ನಂತರ, ಆರ್‌ಸಿಪಿ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು ಮತ್ತು ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ವಿರುದ್ಧ ಆರೋಪಗಳನ್ನು ಮಾಡಿದರು. ಜೆಡಿಯು ಮುಳುಗುತ್ತಿರುವ ಹಡಗು ಎಂದು ಅವರು ಹೇಳಿದ್ದಾರೆ," ಜೆಡಿಯು ಮುಖಂಡ ಹೇಳಿದ್ದಾರೆ.

 ಲಾಲನ್ ಸಿಂಗ್‌ಗೆ ಪಕ್ಷದ ಅಧಿಕಾರ

ಲಾಲನ್ ಸಿಂಗ್‌ಗೆ ಪಕ್ಷದ ಅಧಿಕಾರ

ನಿತೀಶ್ ಕುಮಾರ್ ಅವರು ಬೆದರಿಕೆಯನ್ನು ಅರಿತು ಎರಡು ರಂಗಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಒಂದು, ಅವರು ಆರ್‌ಸಿಪಿ ಸಿಂಗ್‌ನ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕುವುದು. ಸಂಘಟನಾ ರಚನೆಯಲ್ಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಲಾಲನ್ ಸಿಂಗ್‌ಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದರು.

ಬಿಹಾರದಲ್ಲಿ ಆರ್‌ಸಿಪಿ ಸಿಂಗ್ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮಗಳಿಗೆ ಯಾವುದೇ ಎಂಎಲ್‌ಎ ಅಥವಾ ಎಂಎಲ್‌ಸಿ ಬಹಿರಂಗವಾಗಿ ಹೋಗಲಿಲ್ಲ. ಪಟ್ನಾಗೆ ನಾಯಕನನ್ನು ಕಳುಹಿಸುವಂತೆ ಬಿಜೆಪಿ ಕೇಂದ್ರ ನಾಯಕತ್ವವನ್ನು ಒತ್ತಾಯಿಸಿದರು. ನಿತೀಶ್‌ ಕುಮಾರ್‌ ಅವರ ದೃಢ ನಿಲುವಿನಿಂದಾಗಿ ಧರ್ಮೇಂದ್ರ ಪ್ರಧಾನ್‌ ಆ ಸಂದರ್ಭದಲ್ಲಿ ಪಟ್ನಾಗೆ ಬಂದು ಈ ವಿಷಯದ ಕುರಿತು ಚರ್ಚೆ ನಡೆಸಿದ್ದರು. ಮುಂದೆ ಇಂತಹುದೇ ಪುನರಾವರ್ತನೆಯಾದಲ್ಲಿ ಘಟಬಂಧನ ಧರ್ಮವನ್ನು ಗೌರವಿಸುವುದಿಲ್ಲ ಎಂದು ನಿತೀಶ್‌ ಕುಮಾರ್‌ ಪ್ರಧಾನ್‌ಗೆ ಸೂಚಿಸಿದರು. ಆರ್‌ಸಿಪಿ ಸಿಂಗ್ ರಾಜೀನಾಮೆ, ಬಿಜೆಪಿ ಮತ್ತೆ ಅದೇ ಗೇಮ್ ಪ್ಲಾನ್ ಆರಂಭಿಸಿದ್ದು, ನಿತೀಶ್ ಕುಮಾರ್ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ ಎಂದು ಹೇಳಿದ್ದಾರೆ.

 ಮಂಗಳವಾರ ಸಭೆಯಲ್ಲಿ ಸರ್ಕಾರದ ಭವಿಷ್ಯ ನಿರ್ಧಾರ

ಮಂಗಳವಾರ ಸಭೆಯಲ್ಲಿ ಸರ್ಕಾರದ ಭವಿಷ್ಯ ನಿರ್ಧಾರ

ಮೂಲಗಳ ಪ್ರಕಾರ ಜೆಡಿಯು ಬಿಜೆಪಿ ಮೈತ್ರಿಯನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದೆ. ಅದರು ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲು ಈಗಾಗಲೇ ಯೋಜನೆ ರೂಪಿಸಿದೆ ಎನ್ನಲಾಗಿದೆ. ಆರ್ ಜೆಡಿ ಮತ್ತು ಕಾಂಗ್ರೆಸ್ ಕೂಡ ಜೆಡಿಯುಗೆ ಬೆಂಬಲ ನೀಡಲು ಈಗಾಗಲೇ ಒಪ್ಪಿಕೊಂಡಿವೆ ಎನ್ನಲಾಗಿದೆ.

ಯಾವ ಪಕ್ಷಗಳೂ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, ತೆರೆಮರೆಯಲ್ಲಿಯೇ ಈಗಾಗಲೇ ಎಲ್ಲವೂ ನಿರ್ಧಾರವಾಗಿದೆ ಎನ್ನಲಾಗಿದೆ. ಆರ್ ಜೆಡಿ ಮತ್ತು ಜೆಡಿಯು ನಡುವೆ ಅಧಿಕಾರ ಹಂಚಿಕೆಯಲ್ಲಿ ಗೊಂದಲವಿದ್ದು ಅದೂ ಕೂಡ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಮೂಲಗಳು ತಿಳಿಸಿವೆ.

Recommended Video

Arvind Kejriwal: ಪುಕ್ಸಟ್ಟೆ ಕೊಡಿ ಇಲ್ಲದಿದ್ರೆ ಆಮ್ ಆದ್ಮಿಗೆ ದಾರಿಬಿಡಿ | *Politics | OneIndia Kannada

English summary
One Of The JDU Leader has claimed that the BJP had activated the Eknath Shinde plan to sabotage the state government. Earlier, the party’s national president Lalan Singh claimed that the JD-U's seat share came down to 43 in the 2020 state Assembly Elections as it was targeted with the Chirag model. He was referring to Chirag Paswan’s Lok Janshakti Party contesting the elections outside the BJP-led NDA alliance, but fielding candidates only on the seats where JD-U was contesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X