ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ 35 ಲೋಕಸಭಾ ಸ್ಥಾನ ಗೆಲ್ಲಲು ಬಿಜೆಪಿ ಮೆಗಾ ಪ್ಲಾನ್‌!

|
Google Oneindia Kannada News

ಪಾಟ್ನಾ, ಆಗಸ್ಟ್ 17: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ದೂರವಾದ ಕೆಲವೇ ದಿನಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 2024 ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೆಗಾ ಪ್ಲಾನ್‌ ಮಾಡಿಕೊಂಡಿದೆ.

ಬಿಹಾರ ಬಿಜೆಪಿ ಕೋರ್ ಕಮಿಟಿ ಸಭೆಯು ಮಂಗಳವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಉಪಸ್ಥಿತಿಯಲ್ಲಿ ನಡೆಯಿತು. ಇಲ್ಲಿ ಬಿಹಾರದಲ್ಲಿ ಕೇಸರಿ ಧ್ವಜ ಹಾರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಸಭೆಯಲ್ಲಿ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಬಿ. ಎಲ್. ಸಂತೋಷ್, ರವಿಶಂಕರ್ ಪ್ರಸಾದ್, ಸಹನವಾಜ್ ಹುಸೇನ್, ಮಂಗಲ್ ಪಾಂಡೆ, ಜನಕ್ ರಾಮ್, ನಂದ್ ಕಿಶೋರ್ ಯಾದವ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Breaking: ನಿತೀಶ್ ಕುಮಾರ್ ಸಂಪುಟಕ್ಕೆ 31 ಸಚಿವರ ಸೇರ್ಪಡೆBreaking: ನಿತೀಶ್ ಕುಮಾರ್ ಸಂಪುಟಕ್ಕೆ 31 ಸಚಿವರ ಸೇರ್ಪಡೆ

ಸಭೆಯ ನಂತರ ಮಾತನಾಡಿದ ಸಂಜಯ್‌ ಜೈಸ್ವಾಲ್, ಬಿಹಾರದ ಮಹಾಘಟಬಂಧನ್ ರಾಜ್ಯದ ಜನರನ್ನು ವಂಚಿಸುವ ಮೈತ್ರಿಯಾಗಿದೆ. ಬಿಜೆಪಿ ಇದರ ವಿರುದ್ಧ ಬೀದಿಯಿಂದ ರಾಜ್ಯ ವಿಧಾನಸಭೆಯವರೆಗೆ ಹೋರಾಡುತ್ತದೆ. ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಕೂಲಂಕುಷವಾಗಿ ಮತ್ತು ವಿವರವಾದ ಚರ್ಚೆ ನಡೆದಿದೆ. ಈ ಒಕ್ಕೂಟವು ಜನರಿಗೆ ದ್ರೋಹ ಬಗೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಹಿಂಬಾಗಿಲಿನ ಮೈತ್ರಿಯಾಗಿದ್ದು, ಇದು ಲಾಲು ರಾಜ್ಯವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದನ್ನು ಕೊನೆಗೊಳಿಸಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಲಿದೆ ಎಂದು ಜೈಸ್ವಾಲ್ ಹೇಳಿದರು.

ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಿದ್ದು, ಅವುಗಳಲ್ಲಿ 17 ಪ್ರಸ್ತುತ ಬಿಜೆಪಿ ವಶದಲ್ಲಿದ್ದರೆ, ಜೆಡಿಯು 16 ಸ್ಥಾನಗಳನ್ನು ಹೊಂದಿದೆ. ಇದಲ್ಲದೆ, ಲೋಕ ಜನಶಕ್ತಿ ಪಕ್ಷವು ಆರು ಸ್ಥಾನಗಳನ್ನು ಹೊಂದಿದೆ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಹೊಂದಿದೆ. ಮಂಗಳವಾರ ಬಿಹಾರದ ನೂತನ ಸಂಪುಟಕ್ಕೆ 31 ಮಂತ್ರಿಗಳು ಮಹಾಘಟಬಂಧನ್ ಅಥವಾ ರಾಜ್ಯದಲ್ಲಿ ಮಹಾಮೈತ್ರಿಕೂಟದ ಭಾಗವಾಗಿರುವ ವಿವಿಧ ಪಕ್ಷಗಳಿಂದ -ಪ್ರಮಾಣ ವಚನ ಸ್ವೀಕರಿಸಿದರು. ಬಿಹಾರ ರಾಜಭವನದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಬಿಹಾರ ಸಂಪುಟ ವಿಸ್ತರಣೆ: ಆರ್‌ಜೆಡಿಗೆ 16, ಜೆಡಿಯುಗೆ 11 ಸಚಿವ ಸ್ಥಾನಬಿಹಾರ ಸಂಪುಟ ವಿಸ್ತರಣೆ: ಆರ್‌ಜೆಡಿಗೆ 16, ಜೆಡಿಯುಗೆ 11 ಸಚಿವ ಸ್ಥಾನ

ಸಚಿವ ಸಂಪುಟದಲ್ಲಿ ಆರ್‌ಜೆಡಿ 16 ಮತ್ತು ಜನತಾ ದಳ (ಯುನೈಟೆಡ್) 11 ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಹಾಗೂ ಜಿತಿನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ ಒಬ್ಬರು ಮತ್ತು ಏಕೈಕ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಶಾಸಕರಾದ ಅಫಾಕ್ ಆಲಂ ಸೇರ್ಪಡೆ

ಕಾಂಗ್ರೆಸ್ ಶಾಸಕರಾದ ಅಫಾಕ್ ಆಲಂ ಸೇರ್ಪಡೆ

ಆರ್‌ಜೆಡಿಯಿಂದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಸಹೋದರ ತೇಜ್‌ ಪ್ರತಾಪ್‌ ಯಾದವ್‌, ಸಮೀರ್‌ ಕುಮಾರ್‌ ಮಹಾಸೇತ್‌, ಚಂದ್ರಶೇಖರ್‌, ಕುಮಾರ್‌ ಸರ್ವಜೀತ್‌, ಲಲಿತ್‌ ಯಾದವ್‌, ಸುರೇಂದ್ರ ಪ್ರಸಾದ್‌ ಯಾದವ್‌, ರಮಾನಂದ್‌ ಯಾದವ್‌, ಜಿತೇಂದ್ರ ಕುಮಾರ್‌ ರೈ, ಅನಿತಾದೇವಿ ಮತ್ತು ಸುಧಾಕರ್‌ ಸಿಂಗ್‌ ಮತ್ತು ಅಲೋಕ್‌ ಮೆಹ್ತಾ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಶಾಸಕರಾದ ಅಫಾಕ್ ಆಲಂ ಮತ್ತು ಮುರಾರಿ ಲಾಲ್ ಗೌತಮ್ ಅವರು ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡರು. ಹಿಂದೂಸ್ತಾನಿ ಅವಾಮ್ ಮೋರ್ಚಾದ ಸಂತೋಷ್ ಸುಮನ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಸಂಪುಟ ವಿಸ್ತರಣೆಗಾಗಿ ಕೆಲವು ಸ್ಥಾನ ಖಾಲಿ

ಸಂಪುಟ ವಿಸ್ತರಣೆಗಾಗಿ ಕೆಲವು ಸ್ಥಾನ ಖಾಲಿ

ಬಿಹಾರ ಕ್ಯಾಬಿನೆಟ್ ಮುಖ್ಯಮಂತ್ರಿ ಸೇರಿದಂತೆ ಒಟ್ಟು 36 ಮಂತ್ರಿಗಳನ್ನು ಹೊಂದಬಹುದು. ಭವಿಷ್ಯದ ಸಂಪುಟ ವಿಸ್ತರಣೆಗಾಗಿ ಕೆಲವು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಮಹಾಘಟಬಂಧನ್‌ ಪಕ್ಷಗಳೊಂದಿಗೆ ಸರ್ಕಾರ ರಚಿಸಿದರು. ಉಪಮುಖ್ಯಮಂತ್ರಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ಡ ಪ್ರಮಾಣ ವಚನ ಸ್ವೀಕರಿಸಿದರು.

ಆಗಸ್ಟ್ 24 ರಂದು ಬಹುಮತ ಸಾಬೀತು

ಆಗಸ್ಟ್ 24 ರಂದು ಬಹುಮತ ಸಾಬೀತು

ಬಿಹಾರದ ಮಹಾಮೈತ್ರಿಕೂಟವು ಒಟ್ಟು 163ರ ಬಲವನ್ನು ಹೊಂದಿತ್ತು. ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ ನಂತರ ಅದರ ಬಲವು 164ಕ್ಕೆ ಏರಿದೆ. ಹೊಸ ಸರ್ಕಾರ ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವ ಸಾಧ್ಯತೆಯಿದೆ. ಬಿಹಾರದಲ್ಲಿ 2020ರ ಲೋಕಸಭಾ ಚುನಾವಣೆಯು 125 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಎನ್‌ಡಿಎ 125 ಸ್ಥಾನಗಳನ್ನು ಗೆದ್ದುಕೊಂಡಿತು. ಇವುಗಳಲ್ಲಿ ಬಿಜೆಪಿ 74, ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) 43, ವಿಕಾಸಶೀಲ್ ಇನ್ಸಾನ್ ಪಾರ್ಟಿ 4 ಮತ್ತು ಹಿಂದೂಸ್ತಾನ್ ಆವಾಮ್ ಪಾರ್ಟಿ (ಜಾತ್ಯತೀತ) 4. ಇದು ಸರ್ಕಾರ ರಚನೆಗೆ ಅಗತ್ಯವಾದ 122 ಬಹುಮತದ ಸಂಖ್ಯೆಗಿಂತ ಸ್ವಲ್ಪ ಹೆಚ್ಚಿಗಿಯೇ ಇತ್ತು.

ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿತ್ತು

ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿತ್ತು

ಮತ್ತೊಂದೆಡೆ ಆರ್‌ಜೆಡಿ ಮತ್ತು ಅದರ ಮಿತ್ರಪಕ್ಷಗಳು 110 ಸ್ಥಾನಗಳನ್ನು ಗೆದ್ದಿದ್ದವು. ಆರ್‌ಜೆಡಿ 75 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗಳಿಸಿತು. ಎಡಪಕ್ಷಗಳು ಸ್ಪರ್ಧಿಸಿದ್ದ 29 ಸ್ಥಾನಗಳಲ್ಲಿ ಅವರು 16 ಸ್ಥಾನಗಳನ್ನು ಗೆದ್ದರು. ಸಿಪಿಐ (ಎಂಎಲ್-ಲಿಬರೇಶನ್) 12 ರಲ್ಲಿ ಜಯಗಳಿಸಿತು. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ರಾಜ್ಯದ ಸೀಮಾಂಚಲ್ ಪ್ರದೇಶದಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು. ಅದರ ನಾಲ್ವರು ಶಾಸಕರು ಆರ್‌ಜೆಡಿಗೆ ಬದಲಾಗಿದ್ದಾರೆ.

English summary
The Bharatiya Janata Party (BJP) has come up with a mega plan to win 35 seats in Bihar in the 2024 Lok Sabha elections, just days after Bihar Chief Minister Nitish Kumar-led Janata Dal (United) broke away from the National Democratic Alliance (NDA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X