ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆ ಸಿದ್ಧತೆ

|
Google Oneindia Kannada News

ಪಾಟ್ನಾ, ಜುಲೈ 03 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಭಾರತದಲ್ಲಿ ವಿಧಾನಸಭೆ ಚುನಾವಣೆಯೊಂದು ನಡೆಯಬೇಕಿದೆ. ಚುನಾವಣಾ ಆಯೋಗ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆ ಆಗಲಿವೆ.

Recommended Video

15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

ಅಕ್ಟೋಬರ್ ಅಥವ ನವೆಂಬರ್ ತಿಂಗಳಿನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಪ್ರಸ್ತುತ ಇರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಅವಧಿ ನವೆಂಬರ್ 29ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕು.

ಅಂಚೆ ಮತಗಳ ಚಲಾವಣೆ; ವಯೋಮಿತಿ ಸಡಿಲಿಕೆ ಅಂಚೆ ಮತಗಳ ಚಲಾವಣೆ; ವಯೋಮಿತಿ ಸಡಿಲಿಕೆ

ಭಾರತಕ್ಕೆ ಕೊರೊನಾ ವೈರಸ್ ಸೋಂಕು ಕಾಲಿಟ್ಟ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿದೆ. ಚುನಾವಣಾ ಆಯೋಗ ಚುನಾವಣೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೊರೊನಾ ಭೀತಿಯ ನಡುವೆಯೂ ಜನರು ಮತದಾನ ಮಾಡಬೇಕು.

ಬಿಹಾರ ಚುನಾವಣೆ ಗೆಲ್ಲಲು 'ಗಾಲ್ವಾನ್' ಯೋಧರ ಶೌರ್ಯ ಬಳಸಿದ ಮೋದಿ?ಬಿಹಾರ ಚುನಾವಣೆ ಗೆಲ್ಲಲು 'ಗಾಲ್ವಾನ್' ಯೋಧರ ಶೌರ್ಯ ಬಳಸಿದ ಮೋದಿ?

ದೆಹಲಿಯಲ್ಲಿ ಅಧಿಕಾರಿಗಳಿಗೆ 5 ದಿನಗಳ ತರಬೇತಿಯನ್ನು ನಡೆಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಆಯೋಗದ ಅಧಿಕಾರಿಗಳು ಬಿಹಾರದಲ್ಲಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ

ಆಯೋಗದಿಂದ 2 ಬದಲಾವಣೆ

ಆಯೋಗದಿಂದ 2 ಬದಲಾವಣೆ

ಬಿಹಾರ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಚುನಾವಣಾ ಆಯೋಗ ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ. ಚುನಾವಣೆಯಲ್ಲಿ 65 ವರ್ಷ ಮೇಲ್ಪಟ್ಟವರು ಅಂಚೆ ಮತಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಮತಕೇಂದ್ರವೊಂದರ ಜನಸಾಂದ್ರತೆಯನ್ನು 1400-1500 ರಿಂದ 1000ಕ್ಕೆ ಇಳಿಕೆ ಮಾಡಲಾಗಿದೆ.

ಪ್ರತ್ಯೇಕವಾದ ಮಾರ್ಗಸೂಚಿ ಬರಲಿದೆ

ಪ್ರತ್ಯೇಕವಾದ ಮಾರ್ಗಸೂಚಿ ಬರಲಿದೆ

ಚುನಾವಣಾ ಆಯೋಗ ರಾಜಕೀಯ ಪಕ್ಷಗಳು, ಆರೋಗ್ಯ ಇಲಾಖೆ, ತಜ್ಞರ ಜೊತೆ ಸಭೆ ನಡೆಸಿದ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರತ್ಯೇಕ ಮಾರ್ಗಸೂಚಿಯೊಂದನ್ನು ರಚನೆ ಮಾಡಲಿದೆ. ಚುನಾವಣೆಗಾಗಿಯೇ ಈ ಮಾರ್ಗಸೂಚಿ ಜಾರಿಗೆ ಬರಲಿದೆ. ಬಿಹಾರ ಚುನಾವಣೆಯಲ್ಲಿ ಈ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತದೆ.

ನಾಮಪತ್ರ, ಪ್ರಚಾರ, ಮತದಾನ

ನಾಮಪತ್ರ, ಪ್ರಚಾರ, ಮತದಾನ

ಚುನಾವಣೆ ಎಂದರೆ ನಾಮಪತ್ರ ಸಲ್ಲಿಕೆ, ಪ್ರಚಾರ ಮತ್ತು ಮತದಾನದಂದು ಜನಸಂದಣಿ ಹೆಚ್ಚು ಸೇರುತ್ತದೆ. ಆಗ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಗಮನಹರಿಸುವುದು ಕಷ್ಟವಾಗಲಿದೆ. ಆದ್ದರಿಂದ, ಆಯೋಗ ನಾಮಪತ್ರ ಸಲ್ಲಿಕೆ, ಪ್ರಚಾರ ಮತ್ತು ಮತದಾನಕ್ಕೆ ಪ್ರತ್ಯೇಕ ಮಾರ್ಗಸೂಚಿ ಸಿದ್ಧಗೊಳಿಸಲಿದೆ.

ಸಿಬ್ಬಂದಿ, ಮತಗಟ್ಟೆ ಸಂಖ್ಯೆ ಅಧಿಕ

ಸಿಬ್ಬಂದಿ, ಮತಗಟ್ಟೆ ಸಂಖ್ಯೆ ಅಧಿಕ

ಜನರು ವೋಟಿಂಗ್ ಮೆಷಿನ್ ಬಟನ್ ಒತ್ತುವ ಮೂಲಕ ಮತ ಹಾಕುಬೇಕು. ಆದ್ದರಿಂದ, ಇವಿಎಂಗಳ ಸ್ಯಾನಿಟೈಸ್ ಬಗ್ಗೆ ಆಯೋಗ ಗಮನ ಹರಿಸಲಿದೆ. ಮತದಾನದ ದಿನ ಜನಸಂದಣಿ ತಪ್ಪಿಸಲು ಮತಗಟ್ಟೆ ಸಂಖ್ಯೆ ಹೆಚ್ಚಳ ಮಾಡಲಾಗುತ್ತದೆ. ಇದರಿಂದಾಗಿ ಚುನಾವಣಾ ಪ್ರಕ್ರಿಯೆಗೂ ಸಿಬ್ಬಂದಿ ಹೆಚ್ಚು ಬೇಕಾಗಲಿದೆ.

English summary
Bihar assembly election may held on October or November month. It would be first state election after the outbreak of Coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X