• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಟನ್ ಮಾಡುವುದಕ್ಕೆ ಮಡದಿ ತಡ ಮಾಡಿದಳೆಂದು ಮಗಳನ್ನೇ ಕೊಂದ

|

ಮಟನ್ ಅಡುಗೆ ಮಾಡಲು ಮಡದಿ ತಡ ಮಾಡಿದಳು ಎಂಬ ಸಿಟ್ಟಿನಲ್ಲಿ ಬಿಹಾರದ ಪುರ್ಣಿಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗಳನ್ನೇ ಕೊಂದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಘಟನೆಯು ಬುಧವಾರ ಸಂಜೆ ಫಕೀರ್ ಟೋಳಿ ಹಳ್ಳಿಯಲ್ಲಿ ನಡೆದಿದೆ. ಈ ಸ್ಥಳ ಬಿಹಾರದ ರಾಜಧಾನಿ ಪಾಟ್ನಾದಿಂದ 360 ಕಿಲೋಮೀಟರ್ ದೂರಲ್ಲಿದೆ.

ಪೊಲೀಸರು ತಂಡವು ಹಳ್ಳಿಗೆ ತೆರಳಿ, 40 ವರ್ಷದ ಆರೋಪಿ ಶಂಭು ಲಾಲ್ ಶರ್ಮಾನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಶವವನ್ನು ಪುರ್ಣಿಯಾದಲ್ಲಿರುವ ಸರ್ದಾರ್ ಆಸ್ಪತ್ರೆಗೆ ನೀಡಲಾಗಿದೆ. "ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ಆರೋಪಿಯ ವಿಚಾರಣೆ ಮಾಡಿದೆವು. ಆ ಕೃತ್ಯದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಮಟನ್ ಮಾಡುವುದಕ್ಕೆ ಮಡದಿ ತಡ ಮಾಡಿದಳೆಂದು ಮಗಳನ್ನೇ ಕೊಂದ

ಶಂಭು ಲಾಲ್ ಶರ್ಮಾನ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಗುಜರಾತ್ ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ, ಹಬ್ಬದ ಸಲುವಾಗಿ ಈಚೆಗಷ್ಟೇ ಮನೆಗೆ ಬಂದಿದ್ದ. "ಆತನಿಗೆ ಮಟನ್ ಅಂದರೆ ಬಲು ಇಷ್ಟ್. ಯಾವಾಗ ಅಡುಗೆ ಮಾಡುವುದು ತಡವಾಯಿತೋ ಸಂಯಮ ಕಳೆದುಕೊಂಡು ಈ ಕೃತ್ಯ ಎಸಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಅಡುಗೆ ತಡವಾಯಿತು ಎಂಬ ಸಿಟ್ಟಿನಲ್ಲಿ ಸಮೀಪದಲ್ಲೇ ಆಟವಾಡಿಕೊಂಡಿದ್ದ ಮಗಳನ್ನು ಶಂಭು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದಾನೆ. ಯಾವಾಗ ಮಗು ಗಂಭೀರ ಗಾಯಗಳೊಂದಿಗೆ ಪ್ರಜ್ಞಾಶೂನ್ಯವಾಗಿ ನೆಲದ ಮೇಲೆ ಬಿತ್ತೋ ಅಲ್ಲಿಯ ತನಕ ತಾನು ಏನು ಮಾಡುತ್ತಿದ್ದೇನೆ ಎಂಬ ಪರಿವೆ ಆತನಿಗೆ ಇರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ ನಂತರ ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅದಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಗಿದೆ. ಆಸ್ಪತ್ರೆಯಲ್ಲೇ ಮಗುವನ್ನು ಬಿಟ್ಟು ಆತ ನಾಪತ್ತೆಯಾಗಿದ್ದಾನೆ. ಆದರೆ ಪೊಲೀಸರು ಶಂಭುನನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.

ಮೂವರು ಪುತ್ರಿಯರನ್ನು ಸಜೀವ ದಹನ ಮಾಡಿದ ಇವನೆಂಥ ತಂದೆ!

ಮಟನ್ ಹಾಗೂ ಮದ್ಯಕ್ಕಾಗಿಯೇ ಖರ್ಚು ಮಾಡಬೇಡ ಎಂದು ಹೆಂಡತಿ ಕೇಳಿಕೊಂಡಾಗಲೆಲ್ಲ ಆಕೆಯನ್ನು ಶಂಭು ಬಡಿಯುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ಅರಾರಿಯಾದಲ್ಲಿ ಒಂದು ಘಟನೆ ನಡೆದಿತ್ತು. ಮಟನ್ ಗೆ ಸರಿಯಾದ ಪ್ರಮಾಣದಲ್ಲಿ ಉಪ್ಪು ಹಾಕಿಲ್ಲ ಎಂಬ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಡಿದು, ಆಕೆಗೆ ಬೆಂಕಿ ಹಚ್ಚಿದ್ದ.

English summary
A man in Bihar’s Purnia district bludgeoned his only four-year-old daughter to death allegedly because his wife took too long to cook mutton, police said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X