ವಾಲ್ಮೀಕಿ ನಗರ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಯು ಮುನ್ನಡೆ

ಪಾಟ್ನಾ, ನವೆಂಬರ್ 10: ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಯು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಗಿಂತ 16,000ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಯ ಜೊತೆಗೆ ಮತದಾನ ನಡೆದ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ, ಜೆಡಿಯು ಅಭ್ಯರ್ಥಿ ಸುನೀಲ್ ಕುಮಾರ್ ಅವರು ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 5,67,436 ಮತ ಎಣಿಕೆಗಳಲ್ಲಿ 2,22,200 ಮತಗಳನ್ನು ಪಡೆದಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಪ್ರವೀಶ್ ಕುಮಾರ್ ಮಿಶ್ರಾ ಇದುವರೆಗೂ 2,05,718 ಮತಗಳನ್ನು ಗಳಿಸಿದ್ದರು.

ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಸುನೀಲ್ ಕುಮಾರ್ ಅವರ ತಂದೆ, ಹಾಲಿ ಸಂಸದ ಬೈದ್ಯನಾಥ್ ಮೆಹತೋ ಅವರ ಹಠಾತ್ ನಿಧನದಿಂದಾಗಿ ಉಪ ಚುನಾವಣೆ ನಡೆದಿದೆ.

Bihar: JDU Leads In Valmiki Nagara Lok Sabha By-Election

ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಒಟ್ಟು ಏಳು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಜೆಪಿ ಹಾಗೂ ಜೆಡಿಯು ಮೈತ್ರಿ ಅಭ್ಯರ್ಥಿಯಾಗಿ ಬೈದ್ಯನಾಥ್ ಮೆಹತೋ ಅವರ ಪುತ್ರ ಸುನೀಲ್ ಕುಮಾರ್, ಅನುಕಂಪದ ಅಲೆಯಲ್ಲಿ ಗೆದ್ದರೂ ಅಚ್ಚರಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+