ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಬಿಹಾರದ ಭಾವಿ ಮುಖ್ಯಮಂತ್ರಿ ತೇಜಸ್ವಿಗೆ ಶುಭವಾಗಲಿ'' ಪೋಸ್ಟರ್ ಪ್ರಕಟ

|
Google Oneindia Kannada News

ಪಾಟ್ನಾ, ನ.10: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಯುಗ ಅಂತ್ಯವಾಗಲಿದ್ದು, ಇದರೊಂದಿಗೆ ಮೋದಿ ಅಲೆಯು ಕ್ಷೀಣಿಸಲಿದೆ. ಬಿಹಾರದಲ್ಲಿ ಯುವ ಮಖಂಡ ತೇಜಸ್ವಿ ಯಾದವ್ ಪರ ಮತದಾರರು ಒಲವು ತೋರಿಸಲಿದ್ದು, ಹೊಸ ಯುಗ ಆರಂಭವಾಗಲಿದೆ ಎಂಬ ಹುರುಪಿನಲ್ಲಿ ರಾಷ್ಟ್ರೀಯ ಜನತಾ ದಳದ ಕಾರ್ಯಕರ್ತರಿದ್ದಾರೆ. ಚುನಾವಣೆ ಫಲಿತಾಂಶವು ತಮ್ಮ ನಾಯಕ ತೇಜಸ್ವಿ ಯಾದವ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಲಿದೆ ಎಂದಿದ್ದಾರೆ.

Recommended Video

BiharElectionResult : ತಮ್ಮನ ಪರವಾಗಿ ಟ್ವೀಟ್ ಮಾಡಿದ ತೇಜ್ | Oneindia Kannada

ಬಿಹಾರದ ಭಾವಿ ಅತ್ಯಂತ ಕಿರಿಯ ಮುಖ್ಯಮಂತ್ರಿ ತೇಜಸ್ವಿಯಾದವ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆ ಎಂದು ಬರೆದಿರುವ ಪೋಸ್ಟರ್ ಗಳು ಕಾಣಿಸಿಕೊಂಡಿವೆ. 1968ರಲ್ಲಿ ಸತೀಶ್ ಪ್ರಸಾದ್ ಸಿಂಗ್ ಅವರು 32 ವರ್ಷದಲ್ಲಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದರು. ಒಂದು ವೇಳೆ ತೇಜಸ್ವಿ ಅಧಿಕಾರಕ್ಕೇರಿದರೆ ಬಿಹಾರದ ಅತಿ ಕಿರಿಯ ಸಿಎಂ ಎನಿಸಲಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆಗಳ ಸಮೀಕ್ಷೆ: ತೇಜಸ್ವಿ ಬಣಕ್ಕೆ ಗೆಲುವುಇಂಡಿಯಾ ಟುಡೇ ಸಮೀಕ್ಷೆಗಳ ಸಮೀಕ್ಷೆ: ತೇಜಸ್ವಿ ಬಣಕ್ಕೆ ಗೆಲುವು

ಚುನಾವಣೆ ಫಲಿತಾಂಶದ ಬಗ್ಗೆ ಆತ್ಮವಿಶ್ವಾಸ ಇದ್ದೇ ಇದೆ. ಆದರೆ, ಫಲಿತಾಂಶದಲ್ಲಿ ಏನೇ ವ್ಯತ್ಯಾಸವಾದರೂ ತಾಳ್ಮೆ ಕಳೆದುಕೊಳ್ಳದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ . ಅನಾಗರಿಕ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ. ವಿಜಯೋತ್ಸವ ಆಚರಣೆ ಹೆಸರಿನಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ತರಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ ಎಂದು ಹಿರಿಯ ಮುಖಂಡ ಶಿವಾನಂದ್ ತಿವಾರಿ ಎಚ್ಚರಿಕೆ ನೀಡಿದ ಬಳಿಕವೂ ಇಂಥ ಪೋಸ್ಟರ್ ಹೊರ ಬಂದಿದೆ.

Bihar Election results: Posters declare Tejashwi Yadav Bihar CM

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಎಕ್ಸಿಟ್ ಪೋಲ್ ಗಳ ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಫಲಿತಾಂಶ ಬಂದಿದೆ.

English summary
Bihar Election results: Posters declare Tejashwi Yadav Bihar CM as Rashtriya Janata Dal (RJD) Workers wished their leader with quote “to-be chief minister of Bihar Tejashwi Yadav” on his birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X