• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಮಾಡಿದ ಬಿಹಾರದ ಜನತೆ: ಪ್ರಧಾನಿ ಮೋದಿ

|

ಪಟ್ನಾ, ನವೆಂಬರ್ 11: ಬಿಹಾರದಲ್ಲಿನ 243 ಸೀಟುಗಳ ಪೈಕಿ ಎನ್‌ಡಿಎ ಮೈತ್ರಿಕೂಟ ಅರ್ಧದಷ್ಟು ಕ್ಷೇತ್ರಗಳ ಗಡಿ ದಾಟುತ್ತಿದ್ದಂತೆ ಬಿಜೆಪಿಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಎನ್‌ಡಿಎಯನ್ನು ಮತ್ತೆ ಚುನಾಯಿಸಿದ್ದಕ್ಕಾಗಿ ಪ್ರಧಾನಿ ಮೋದಿ ಬಿಹಾರದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.

'ಬಿಹಾರದ ಜನತೆ ಜಗತ್ತಿಗೆ ಪ್ರಜಾಪ್ರಭುತ್ವದಲ್ಲಿ ಒಂದು ಪಾಠ ಹೇಳಿಕೊಟ್ಟಿದ್ದಾರೆ. ಇಂದು ಬಿಹಾರವು ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಹೇಗೆ ಎಂದು ಜಗತ್ತಿಗೆ ತಿಳಿಸಿದೆ. ಬಿಹಾರದ ಬಡ, ವಂಚಿತ ಮತ್ತು ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿ ತಮ್ಮ ನಿರ್ಣಾಯಕ ನಿರ್ಧಾರವನ್ನು ಘೋಷಿಸಿದ್ದಾರೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

'ಬಿಹಾರದ ಪ್ರತಿಯೊಬ್ಬ ಮತದಾರರೂ ತಮ್ಮ ಏಕೈಕ ಆದ್ಯತೆ ಅಭಿವೃದ್ಧಿ ಎಂಬ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. 15 ವರ್ಷಗಳ ಬಳಿಕವೂ ಎನ್‌ಡಿಎ ಆಡಳಿತ ಈ ಆಶೀರ್ವಾದ ಪಡೆಯುತ್ತಿರುವುದು ಬಿಹಾರ ಜನತೆಯ ಕನಸು ಮತ್ತು ಆಕಾಂಕ್ಷೆಗಳನ್ನು ತೋರಿಸುತ್ತದೆ' ಎಂದು ಅವರು ಹೇಳಿದ್ದಾರೆ. ಮುಂದೆ ಓದಿ.

ಎನ್‌ಡಿಎಗೆ ಉತ್ತೇಜನ

ಎನ್‌ಡಿಎಗೆ ಉತ್ತೇಜನ

'ಬಿಹಾರದ ಯುವಜನರು ಇದು ಬಿಹಾರಕ್ಕೆ ಹೊಸ ದಶಕ ಮತ್ತು ಬಿಹಾರದ ಸಮೃದ್ಧಿಯ ನಕಾಶೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಎನ್‌ಡಿಎ ಯೋಜನೆಗಳ ಮೇಲೆ ಬಿಹಾರದ ಯುವಜನರು ತಮ್ಮ ನಂಬಿಕೆ ಇರಿಸಿದ್ದಾರೆ. ಈ ಯುವ ಶಕ್ತಿಯು ಹಿಂದಿಗಿಂತಲೂ ಹೆಚ್ಚು ಕಠಿಣವಾಗಿ ಕೆಲಸ ಮಾಡಲು ಎನ್‌ಡಿಎಗೆ ಉತ್ತೇಜನ ನೀಡಿದೆ' ಎಂದಿದ್ದಾರೆ.

ಮಹಿಳಾ ಶಕ್ತಿಗೆ ಆತ್ಮವಿಶ್ವಾಸ

ಮಹಿಳಾ ಶಕ್ತಿಗೆ ಆತ್ಮವಿಶ್ವಾಸ

'ಬಿಹಾರದ ಸಹೋದರಿಯರು ಮತ್ತು ಮಕ್ಕಳು ಸ್ವಯಂಪೂರ್ಣತೆಯ ಬಿಹಾರದಲ್ಲಿ ತಮ್ಮ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ ತೋರಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಬಿಹಾರದಲ್ಲಿ ಮಹಿಳಾ ಶಕ್ತಿಗೆ ಹೊಸ ಆತ್ಮವಿಶ್ವಾಸ ನೀಡಲು ಎನ್‌ಡಿಎಗೆ ಅವಕಾಶ ಸಿಕ್ಕಿದ್ದು ನಮಗೆ ತೃಪ್ತಿ ತಂದಿದೆ. ಬಿಹಾರವನ್ನು ಮುನ್ನಡೆಸುವಲ್ಲಿ ಈ ಆತ್ಮವಿಶ್ವಾಸ ನಮಗೆ ಶಕ್ತಿ ನೀಡಲಿದೆ' ಎಂದು ಹೇಳಿದ್ದಾರೆ.

ಮತ ಎಣಿಕೆ ತಡವಾಗಲು ನಿತೀಶ್, ಮೋದಿ ಕಾರಣ: ಆರ್‌ಜೆಡಿ ಆರೋಪ

ಸಬ್ ಕಾ ಸಾತ್, ಸಬ್ ಕಾ ವಿಕಾಸ್

ಸಬ್ ಕಾ ಸಾತ್, ಸಬ್ ಕಾ ವಿಕಾಸ್

'ಬಿಹಾರದ ಗ್ರಾಮ-ಬಡವರು, ರೈತ-ಕಾರ್ಮಿಕರು, ವ್ಯಾಪಾರಿಗಳು, ಅಂಗಡಿ ಮಾಲೀಕರು, ಎಲ್ಲ ಸಮುದಾಯದವರೂ ಎನ್‌ಡಿಎದ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದ ಮೇಲೆ ನಂಬಿಕೆ ಇರಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಸಮತೋಲಿತ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ ಎಂದು ಪ್ರತಿ ನಾಗರಿಕರಿಗೆ ಭರವಸೆ ನೀಡುತ್ತೇನೆ' ಎಂದಿದ್ದಾರೆ.

ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ

ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ

'ಬಿಹಾರದಲ್ಲಿ ಜನರ ಆಶೀರ್ವಾದದೊಂದಿಗೆ ಮತ್ತೊಮ್ಮೆ ಪ್ರಜಾಪ್ರಭುತ್ವ ಗೆದ್ದಿದೆ. ಬಿಹಾರ ಬಿಜೆಪಿ ಎಲ್ಲ ಎನ್‌ಡಿಎ ಕಾರ್ಯಕರ್ತರ ಬದ್ಧತೆ ಶ್ಲಾಘನೀಯ. ಇದಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಹಾಗೂ ಬಿಹಾರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಮೋದಿ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಉಪ ಚುನಾವಣೆ ಗೆಲುವಿಗೆ ಕನ್ನಡದಲ್ಲಿ ಶುಭ ಹಾರೈಸಿದ ಮೋದಿ, ಅಮಿತ್ ಶಾ

   ಹೆಂಡತಿಯ challenge ಒಪ್ಪಿ ತೇಜ್ ಎನ್ ಮಾಡಿದ್ರು ಗೊತ್ತಾ ? | Oneindia Kannada

   English summary
   Bihar Assembly Election Results 2020 Updates in Kannada: PM Narendra Modi said, people of Bihar have taught the world a lesson in democracy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X