ಶಿಕ್ಷಕರ ವೇತನ ಏರಿಕೆ ಮಾಡಿದ ಬಿಹಾರ ಶಿಕ್ಷಣ ಇಲಾಖೆ

ಪಾಟ್ನಾ, ಆಗಸ್ಟ್‌ 29: ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಮತ್ತು ಗ್ರಂಥಪಾಲಕರ ವೇತನವನ್ನು ಶೇ 15 ರಷ್ಟು ಹೆಚ್ಚಿಸುವುದಾಗಿ ಬಿಹಾರ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರ್ಜರಿಯಾದ ಕೊಡುಗೆ ನೀಡಿದ್ದಾರೆ. ಏಪ್ರಿಲ್ 2021 ರಿಂದ ಅನ್ವಯವಾಗುವಂತೆ ಪಾವತಿಸಬೇಕಾದ ಮೂಲ ವೇತನದಲ್ಲಿ ಶೇ 15 ರಷ್ಟು ಹೆಚ್ಚಳ ನೀಡುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.

ಇತ್ತೀಚೆಗೆ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಶಿಕ್ಷಕರ ವೇತನವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅಲ್ಲದೆ ದೇಶದ ಉದ್ಯೋಗಿಗಳ ಶಿಕ್ಷಕರ ಸೇವಾ ಸ್ಥಿತಿ ನಿಯಮಗಳನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ ಬಿಹಾರ ರಾಜ್ಯದ ಶಿಕ್ಷಕರ ದೀರ್ಘಾವಧಿಯ ಬಾಕಿ ಇರುವ ಬೇಡಿಕೆ ಪೂರ್ಣಗೊಳ್ಳುವ ನಿರೀಕ್ಷೆ ಹೆಚ್ಚಿದೆ.

Bihar Education Department announces 15 per cent Hike in Salaries of Teachers and Librarians

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ನಿತೀಶ್ ಸರ್ಕಾರದ ಈ ಘೋಷಣೆಯು ಮಾಸ್ಟರ್ ಸ್ಟ್ರೋಕ್ ಎಂದು ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+