• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಟ್ನಾದಿಂದ ಶತ್ರುಘ್ನ ಸಿನ್ಹಾ ಪುತ್ರನಿಗೆ ಟಿಕೆಟ್ ನೀಡಿದ ಕಾಂಗ್ರೆಸ್

|

ಪಾಟ್ನಾ, ಅ. 15: ಕೇಂದ್ರದ ಮಾಜಿ ಸಚಿವ, ಹಿಂದಿ ಚಿತ್ರರಂಗದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಅವರಿಗೆ ಪಾಟ್ನಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.

ಪಾಟ್ನಾ ಸಾಹೀಬ್ ಕ್ಷೇತ್ರದ ವ್ಯಾಪ್ತಿಯ ಬಂಕಿಪೋರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು 37 ವರ್ಷ ವಯಸ್ಸಿನ ಲವ್ ಸಿನ್ಹಾಗೆ ಟಿಕೆಟ್ ನೀಡಲಾಗಿದೆ. ಇದೇ ಕ್ಷೇತ್ರದಿಂದ ಅವರ ತಂದೆ ಶತ್ರುಘ್ನ ಅವರು 2009 ಹಾಗೂ 2014ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ಗುರುವಾರದಂದು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಲು ಲವ್ ಸಿನ್ಹಾ ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 03 ರಂದು ಮತದಾನ ಹಾಗೂ ನವೆಂಬರ್ 10ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

2010ರಲ್ಲಿ ಹೇಮಮಾಲಿನಿ, ರೇಖಾ ಹಾಗೂ ರಿಷಿ ಕಪೂರ್ ಅವರಿದ್ದ ಸದಿಯಾನ್ ಚಿತ್ರದ ಮೂಲಕ ಬಾಲಿವುಡ್ಡಿಗೆ ಲವ್ ಎಂಟ್ರಿ ಕೊಟ್ಟರೂ ಯಾವುದೇ ಚಿತ್ರ ಹಿಟ್ ಆಗಲಿಲ್ಲ. 2018ರಲ್ಲಿ ಜೆಪಿ ದತ್ತಾ ಅವರ ಪಲ್ಟನ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.

ಈ ಕ್ಷೇತ್ರದಲ್ಲಿ ಬಿಜೆಪಿಯೊಂದ ಮೂರು ಬಾರಿ ಶಾಸಕರಾದ ಬಿಜೆಪಿಯ ನಿತಿನ್ ನವೀನ್ ಹಾಗೂ ಪ್ಲೂರಲ್ಸ್ ಪಾರ್ಟಿಯ ಸ್ಥಾಪಕಿ ಪುಷ್ಪಂ ಪ್ರಿಯ ಚೌಧರಿ ಕಣದಲ್ಲಿದ್ದಾರೆ. ಹೀಗಾಗಿ ಯುವ ಪೀಳಿಗೆಯ ಕದನ ಇದು ಎಂದು ವಿಶ್ಲೇಷಿಸಲಾಗಿದೆ.

ಕಳೆದ 30 ವರ್ಷಗಳಿಂದ ಪಾಟ್ನಾ ಸಾಹೀಬ್ ಎಂದಿಗೂ ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿದೆ. ರಾಮವ್ತಾರ್ ಶಾಸ್ತ್ರಿ, ರಾಮ್ ಕೃಪಾಳ್ ಯಾದವ್, ಡಾ. ಸಿ. ಪಿ ಠಾಕೂರ್, ಶತ್ರುಘ್ನ ಸಿನ್ಹಾ ಕೂಡಾ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಆದರೆ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎದುರು ಸೋಲು ಕಂಡಿದ್ದರು.

ನಿತೀಶ್‌ಗೆ ಸವಾಲು ಹಾಕಿ, ಬಿಹಾರಕ್ಕೆ ಬಂದಿಳಿದ ಯುವತಿ ಪುಷ್ಪಂ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

   Harbhajan Singh ಅಲ್ಲಾ Snake Singh ನೀನು : CSK Fans | Oneindia Kannada

   2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

   English summary
   Former Union minister and Bollywood veteran Shatrughan Sinha’s actor-son Luv Sinha will make his debut in politics by contesting the assembly elections from his ancestral place in Bihar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X