ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಕಾಂಗ್ರೆಸ್ ಮತಗಳ ಕಡಿತಕ್ಕೆ ಓವೈಸಿ ಕಾರಣ

|
Google Oneindia Kannada News

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಮತಗಳನ್ನು ಕಡಿತಗೊಳಿಸುವಲ್ಲಿ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ ಪಕ್ಷ ಪ್ರಮುಖ ಪಾತ್ರವಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

ಎಐಎಂಐಎಂ ಇದುವರೆಗೆ ಐದು ಸ್ಥಾನಗಳನ್ನು ಗೆದ್ದಿದೆ. ಅಖ್ತರುಲ್ ಇಮಾನ್, ಮೊಹಮ್ಮದ್ ಇಝಾರ್ ಆಸ್ಫಿ, ಶಹ್ನವಾಜ್ ಆಲಮ್, ರುಕ್ನುದ್ದೀನ್, ಅಜರ್ ನಯೀಮಿ ಗೆಲುವುದು ಸಾಧಿಸಿದ್ದಾರೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ನಮಗೆ ಬಿಹಾರದಲ್ಲಿ ಗೆಲುವಿನ ಭರವಸೆ ಇತ್ತು ಆದರೆ ನಂತರ ಸಣ್ಣ ಪಕ್ಷಗಳಿಂದ ಅದು ಕೈತಪ್ಪಿ ಹೋಗುತ್ತದೆ ಎಂದೆನಿಸುತ್ತದೆ.

 Bihar Assembly Election Results: Congress Claims Owaisi Used By BJP To Target It

ನಮ್ಮ ಮತಗಳನ್ನು ಕಡಿತಗೊಳಿಸುವಲ್ಲಿ ಓವೈಸಿ ಪಕ್ಷವು ಪಾತ್ರವಹಿಸಿದೆ. ನಮ್ಮನ್ನು ಗುರಿಯಾಗಿಸಿಕೊಂಡು ಬಿಜೆಪಿ ಓವೈಸಿಯನ್ನು ಬಳಸಿದೆ ಎಂದರು.

ನಿತೀಶ್ ಕುಮಾರ್ ಅವರ ಮತಗಳನ್ನು ಕಡಿತಗೊಳಿಸಲು ಬಿಜೆಪಿ ಎಲ್‌ಜೆಪಿಯನ್ನು ಬಳಸಿದೆ. ಈ ಮೊದಲು ಎನ್‌ಡಿಎ ಮಿತ್ರರಾಗಿದ್ದ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿ ಭಿನ್ನಾಭಿಪ್ರಾಯಗಳನ್ನು ಹೇಳಿ ಜೆಡಿಯು ಜತೆ ಸ್ಪರ್ಧಿಸಲು ನಿರಾಕರಿಸಿದ್ದರು.

ಓವೈಸಿ ಮತಗಳನ್ನು ಬಳಸಿಕೊಳ್ಳಲು ಬಿಜೆಪಿ ಬಳಸಿಕೊಂಡಿದೆ.ನಮಗೆ ಬಿಹಾರದಲ್ಲಿ ಗೆಲುವಿನ ಭರವಸೆ ಸಿಕ್ಕಿತ್ತು. ಆದರೆ ಕೆಲವು ಸಣ್ಣ ಪಕ್ಷಗಳು ನಾವು ಬೆಲೆ ತೆರುವಂತೆ ಮಾಡಿದವು, ನಮ್ಮ ಮತವನ್ನು ಕಡಿತಗೊಳಿಸುವಲ್ಲಿ ಒವೈಸಿಯ AIMIM ಪಕ್ಷ ಪ್ರಮುಖ ಪಾತ್ರವಹಿಸಿದೆ. ನಮ್ಮನ್ನು ಗುರಿಯಾಗಿಸಲು ಓವೈಸಿಯನ್ನು ಬಿಜೆಪಿ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

English summary
Bihar Election Results 2020: Congress leader Adhir Ranjan Choudhary on Tuesday accused Asaduddin Owaisi's AIMIM party of playing a role in cutting the alliance Mahagathbandhan's votes in the Bihar Assembly elections where counting is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X