ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದಲೇ ಲಾಲು ಪ್ರಸಾದ್ ದರ್ಬಾರ್: ಆರ್‌ಜೆಡಿ ಅಭ್ಯರ್ಥಿಗಳ ಸಂದರ್ಶನ

|
Google Oneindia Kannada News

ಪಟ್ನಾ, ಅಕ್ಟೋಬರ್ 8: ವಿವಿಧ ಹಗರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್, ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿದ್ದಾರೆ. ಹಾಗೆಂದು ಅವರು ಬಿಹಾರ ವಿಧಾನಸಭೆ ಚುನಾವಣೆಯ ಚಟುವಟಿಕೆಗಳಿಂದೇನೂ ದೂರ ಸರಿದಿಲ್ಲ. ಆಸ್ಪತ್ರೆ ಒಳಗಿನಿಂದಲೇ ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ.

ಆಗಸ್ಟ್ 5ರಂದು ಅವರನ್ನು ಜಾರ್ಖಂಡ್‌ ರಾಂಚಿಯಲ್ಲಿನ ರಿಮ್ಸ್‌ನ ಡೈರೆಕ್ಟರ್ಸ್ ಬಂಗಲೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಕುಳಿತೇ ಅವರು ಆರ್‌ಜೆಡಿಯಿಂದ ಚುನಾವಣೆಗೆ ಇಳಿಯಬೇಕಾದ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಸಂದರ್ಶನ ನಡೆಸುತ್ತಿದ್ದಾರೆ.

ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ

ಈ ಬಗ್ಗೆ ಹೇಳಿಕೆ ನೀಡಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್, ಜೈಲಿಗೆ ಕಳುಹಿಸಲಾಗಿರುವ ಅಪರಾಧಿಯೊಬ್ಬನಿಗೆ ರಾಜ್ಯ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಅಣಕ ಎಂದು ಟೀಕಿಸಿದ್ದಾರೆ.

Bihar Assembly Election 2020: Lalu Prasad Interviewing RJD Candidates From Hospitals

ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಲಾಲು ಪ್ರಸಾದ್ ಅವರೇ ನಿರ್ಧರಿಸುತ್ತಿದ್ದಾರೆ. ಡೈರೆಕ್ಟರ್ಸ್ ಬಂಗಲೆಗೆ ಬಂದು ಅವರನ್ನು ನೇರವಾಗಿ ಭೇಟಿ ಮಾಡಿ ಸಂದರ್ಶನಕ್ಕೆ ಒಳಗಾಗುವವರಿಗೆ ಮಾತ್ರವೇ ಟಿಕೆಟ್ ಭರವಸೆ ನೀಡಲಾಗುತ್ತಿದೆ ಎಂದು ಲಾಲು ಆಪ್ತರು ತಿಳಿಸಿದ್ದಾರೆ.

ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ತಪ್ಪಿನಿಂದ ಅರಳುತ್ತಾ ಕಮಲ?ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ತಪ್ಪಿನಿಂದ ಅರಳುತ್ತಾ ಕಮಲ?

ರಾಂಚಿಯ ರಿಮ್ಸ್‌ನಲ್ಲಿ ದಾಖಲಾಗಿರುವ ಲಾಲು, ಇಲ್ಲಿ ಅತಿ ಸುದೀರ್ಘಾವಧಿ ದಾಖಲಾದ ರೋಗಿ ಎಂದೆನಿಸಿಕೊಂಡಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ-ಕಾಂಗ್ರೆಸ್ ಸರ್ಕಾರವು ಲಾಲುಗೆ ನೆರವು ನೀಡುತ್ತಿದೆ ಎಂದು ರಘುಬರ್ ದಾಸ್ ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರ ಜತೆ ಲಾಲು ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಆದರೆ, ಆಸ್ಪತ್ರೆಯಲ್ಲಿ ಇರುವುದಾದರೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಅವರಿಗೆ ಮೊಬೈಲ್ ಫೋನ್‌ಗಳನ್ನು ಹೇಗೆ ನೀಡಲಾಗುತ್ತಿದೆ ಎಂದು ಬಿಜೆಪಿ ಪ್ರಶ್ನಿಸಿದೆ.

English summary
Bihar Assembly Election 2020: Former CM Lalu Prasad, who has been jailed interviewing RJD candidates ahead of poll from hospital in Ranchi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X