ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಚುನಾವಣೆ ಮತ್ತು ಬಿಹಾರ ಚುನಾವಣೆ ನಡುವೆ ಹೋಲಿಕೆ!

|
Google Oneindia Kannada News

ಪಾಟ್ನಾ, ನವೆಂಬರ್.09: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲಿನಿಂದ ಭಾರತೀಯರೂ ಕೂಡಾ ಪಾಠ ಕಲಿತುಕೊಂಡರೆ ಉತ್ತಮವಾಗಿರುತ್ತದೆ ಎಂದು ಶಿವಸೇನೆ ಹೇಳಿದೆ.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

ಶಿವಸೇನಾ ಪಕ್ಷದ ಮುಖ್ಯವಾಣಿ ಸಾಮ್ನಾ ಪತ್ರಿಕೆಯಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮತ್ತು ಬಿಹಾರ ವಿಧಾನಸಭಾ ಚುನಾವಣೆ ನಡುವೆ ಹೋಲಿಕೆ ಮಾಡಲಾಗಿದೆ. ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಎಂದಿಗೂ ಯೋಗ್ಯರು ಎನಿಸುವುದಿಲ್ಲ. ಈ ಮೊದಲು ಡೊನಾಲ್ಡ್ ಟ್ರಂಪ್ ತಾವು ನೀಡಿದ ಭರವಸೆಗಳಲ್ಲಿ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸಿರಲಿಲ್ಲ. ಅಮೆರಿಕನ್ನರು ತಾವು ಮಾಡಿದ ತಪ್ಪನ್ನು ನಾಲ್ಕು ವರ್ಷಗಳಲ್ಲೇ ತಿದ್ದುಕೊಂಡಿದ್ದಾರೆ. ಟ್ರಂಪ್ ಸೋಲಿನಿಂದಾಗಿ ಭಾರತೀಯರು ಪಾಠ ಕಲಿತುಕೊಂಡಿದ್ದಲ್ಲಿ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಸಾಮ್ನಾದಲ್ಲಿ ಪ್ರಕಟಿಸಲಾಗಿದೆ.

ಅಧಿಕಾರ ಬದಲಾವಣೆ: ಅಮೆರಿಕ ನಂತರ ಬಿಹಾರದ ಸರದಿ ಎಂದ ಶಿವಸೇನಾ ಅಧಿಕಾರ ಬದಲಾವಣೆ: ಅಮೆರಿಕ ನಂತರ ಬಿಹಾರದ ಸರದಿ ಎಂದ ಶಿವಸೇನಾ

ಅಮೆರಿಕಾದಲ್ಲಿ ನಿರುದ್ಯೋಗ ಎಂಬ ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಸೋಂಕಿಗಿಂತಲೂ ಹೆಚ್ಚಾಗಿದೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕುವ ಬದಲಿಗೆ ಟ್ರಂಪ್ ಕೇವಲ ರಾಜಕೀಯ ಜಪ, ಅಸಂಬದ್ಧ ತರ್ಕಗಳು ಹಾಗೂ ಅಪಹಾಸ್ಯ ಮಾಡುವುದರಲ್ಲೇ ಕಾಲ ಕಳೆದರು ಎಂದು ದೂಷಿಸಲಾಗಿದೆ.

Americans Corrected Their Mistake, Now Time Comed To Changed Power In Bihar: Shiva Sena


ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಸೋಲು:

ಅಮೆರಿಕಾದಲ್ಲಿ ಈಗಾಗಲೇ ಅಧಿಕಾರ ಬದಲಾವಣೆ ಆಗಿದೆ. ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಇಲ್ಲಿಯೂ ಬದಲಾವಣೆ ಗಾಳಿ ಬೀಸಬೇಕಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಈ ಬಾರಿ ಬಿಹಾರ ಚುನಾವಣೆಯಲ್ಲಿ ಸೋತು ಸಿಎಂ ನಿತೀಶ್ ಕುಮಾರ್ ತಮ್ಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ದೇಶದಲ್ಲಿ ನಮ್ಮನ್ನು ಹೊರತುಪಡಿಸಿದರೆ ಬೇರೆ ಪರ್ಯಾಯ ನಾಯಕರೇ ಇಲ್ಲ ಎನ್ನುವಂತೆ ವಾದಿಸುವವರಿಗೆ ಪ್ರಜೆಗಳು ತಮ್ಮ ಮತಗಳ ಮೂಲಕ ಉತ್ತರ ನೀಡಲಿದ್ದಾರೆ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.

"ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಆದರ ಮತ್ತು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು. ಅಂಥ ತಪ್ಪಾದ ವ್ಯಕ್ತಿಯ ಪರವಾಗಿ ನಿಲ್ಲುವುದು ನಮ್ಮ ಸಂಸ್ಕೃತಿಯಲ್ಲ. ಆದರೆ ಅದನ್ನು ಇನ್ನೂ ಮಾಡಲಾಗುತ್ತಿದೆ. ಬಿಡೆನ್ ಅಮೆರಿಕಾದ ಮುಖ್ಯಸ್ಥರಾಗುತ್ತಾರೆ" ಎಂದು ಶಿವಸೇನೆ ಹೇಳಿದೆ. ಭಾರತವು "ನಮಸ್ತೆ ಟ್ರಂಪ್" ಅನ್ನು ಹೇಗೆ ಸಂಘಟಿಸಿದರೂ, ಅಮೆರಿಕದ ಸಂವೇದನಾಶೀಲ ಮತದಾರರು ಟ್ರಂಪ್ಗೆ "ಬೈ-ಬೈ" ಎಂದು ಹೇಳುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ ಎಂದು ಶಿವಸೇನೆ ತಿಳಿಸಿದೆ.

English summary
Americans Corrected Their Mistake, Now Time Comed To Changed Power In Bihar: Shiva Sena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X