ಒಳಚರಂಡಿಗೆ ಬಿದ್ದ ಒಬ್ಬನನ್ನು ಕಾಪಾಡಲು ಹೋಗಿ ಏಳು ಜನರ ದುರ್ಮರಣ
ವಡೋದರಾ, ಜೂನ್ 15: ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಏಳು ಜನ ಕಾರ್ಮಿಕರು ಉಸಿರುಕಟ್ಟಿ ಮೃತರಾದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ವಡೋದರದ ಫರ್ತಿಕುಲಿಯ ಹೊಟೇಲ್ ವೊಂದರ ಒಳಚರಂಡಿಯನ್ನು ಓರ್ವ ಕಾರ್ಮಿಕ ಸ್ವಚ್ಛಗೊಳಿಸುತ್ತಿದ್ದರು. ಆದರೆ ಎಷ್ಟು ಸಮಯವಾದರೂ ಆತ ಹೊರಬರದೆ ಇದ್ದಿದ್ದರಿಂದ ಅನುಮಾನಗೊಂಡ ಇನ್ನಿಬ್ಬರು ಒಳಚರಂಡಿಯೊಳಗೆ ಹೋಗಿದ್ದಾರೆ, ಅವರೂ ಹೊರಗೆ ಬಂದಿಲ್ಲ. ಹೀಗೇ ಒಬ್ಬರನ್ನೊಬ್ಬರು ಹುಡುಕಿಕೊಂಡು ಹೋಗಿ ಒಟ್ತು ಏಳಲು ಜನ ಮೃತರಾದ ದುರಂತ ಘಟನೆ ನಡೆದಿದೆ.
ಚರಂಡಿಯೊಳಗೆ ಉಸಿರುಕಟ್ತಿದ ಪರಿಣಾಮ ಏಳು ಜನರೂ ಮೃತರಾಗಿದ್ದು, ಇವರಲ್ಲಿ ಮೂರು ಜನ ಹೊಟೇಲ್ ಉದ್ಯೋಗಿಗಳಾಗಿದ್ದರು. ಅವರು ಒಳಚರಂಡಿಯಲ್ಲಿದ್ದ ಕಾರ್ಮಿಕರನ್ನು ಕಾಪಾಡಲು ಹೋಗಿ ಜೀವಕಳೆದುಕೊಂಡಿದ್ದಾರೆ ಎಂದು ವಡೋದರ ಜಿಲ್ಲಾಧಿಕಾರಿ ಕಿರಣ್ ಜಾವೇರಿ ತಿಳಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಒಳಚರಂಡಿ ದುರಸ್ತಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿತ್ತು.












Click it and Unblock the Notifications