ಪ್ಯಾರೀಸ್ ನಲ್ಲಿ ಗಲಭೆ, ತುರ್ತು ಪರಿಸ್ಥಿತಿ ಹೇರಿಕೆಗೆ ಮುಂದಾದ ಫ್ರಾನ್ಸ್

ಪ್ಯಾರೀಸ್, ಡಿಸೆಂಬರ್ 02: ಬೆಲೆ ಏರಿಕೆ, ತೆರಿಗೆ ಹೆಚ್ಚಳ, ದುಬಾರಿ ಜನಜೀವನದಿಂದ ಬೇಸತ್ತ ಗುಂಪೊಂದು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಯೆಲ್ಲೋ ಜಾಕೆಟ್ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದು, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಟ್ಟಡಗಳಿಗೆ ಕಲ್ಲು ಎಸೆದು ಕಿಟಕಿಗಳ ಗಾಜುಗಳನ್ನು ಮುರಿದಿದ್ದಾರೆ. ಇಲ್ಲಿ ತನಕ ಈ ಪುಂಡಾಟಕ್ಕೆ 133 ಮಂದಿ ಗಾಯಗೊಂಡಿದ್ದಾರೆ. 415ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಲು ಕಷ್ಟಪಡುತ್ತಿದ್ದಾರೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ತುರ್ತು ಪರಿಸ್ಥಿತಿ ಹೇರಲು ಸರ್ಕಾರ ಮುಂದಾಗಬೇಕಾಗುತ್ತದೆ ಎಂದು ವಕ್ತಾರ ಬೆಂಜಮಿನ್ ಗ್ರಿವಿಯಾ ಹೇಳಿದ್ದಾರೆ.

France to consider state of emergency to contain violent riots

ಸರಿ ಸುಮಾರು 75,000ಕ್ಕೂ ಅಧಿಕ ಮಂದಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ನವೆಂಬರ್ 17ರಂದು ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 2,82,000 ಮಂದಿ ಪಾಲ್ಗೊಂಡಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಪ್ರತಿಭಟನೆ ಹತೋಟಿಗೆ ಸಿಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+