ತೀವ್ರ ಅನಾರೋಗ್ಯದಲ್ಲೂ ಕರ್ತವ್ಯ ಪ್ರಜ್ಞೆ: ಪರಿಕ್ಕರ್ ಚಿತ್ರಕ್ಕೆ ಉಘೇ!

ಪಣಜಿ, ಡಿಸೆಂಬರ್ 18: ಅನಾರೋಗ್ಯ ಪೀಡಿತರಾದ ಮೇಲೆ ಎಂದಲ್ಲ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮೊದಲಿನಿಂದಲೂ ಸರಳತೆಗೆ ಮತ್ತೊಂದು ಹೆಸರು ಎಂಬಂತೆಯೇ ಇದ್ದಾರೆ. ರಕ್ಷಣಾ ಸಚಿವರಾದಾಗಲಾಗಲೀ, ಗೋವಾ ಮುಖ್ಯಮಂತ್ರಿಯಾದ ಮೇಲಾಗಲಿ ಅವರ ಸರಳತೆಗೆ ಮಾತ್ರ ಎಂದಿಗೂ ಕುತ್ತು ಬರಲಿಲ್ಲ.

ಆದರೆ ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ಇತ್ತೀಚೆಗೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆದರೂ ತಮ್ಮ ದೈನಂದಿನ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಇದೀಗ ಗೋವಾದ ಮಾಂಡೋವಿ ನದಿಯ ಸೇತುವೆಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದರು.

ಮೂಗಿಗೆ ನ್ಯಾಸೋ ಗ್ಯಾಸ್ಟ್ರಿಕ್ ಟ್ಯೂಬ್ ತೊಟ್ಟು, ಅನಾರೋಗ್ಯದ ನಡುವೆಯೂ ಕೆಲಸದಲ್ಲಿ ತಲ್ಲೀನರಾಗಿರುವ 63 ವರ್ಷ ವಯಸ್ಸಿನ ಪರಿಕ್ಕರ್ ಅವರ ಕರ್ತವ್ಯ ಪ್ರಜ್ಞೆಗೆ ಅವರ ಅಭಿಮಾನಿಗಳು ಉಘೇ ಎಂದಿದ್ದಾರೆ.

ನಮ್ಮೆಲ್ಲರ ಸಲಾಂ

'ಇವರಿಗೆ ನಮ್ಮೆಲ್ಲರ ಸೆಲ್ಯೂಟ್ ಇರಲಿ. ಅವರಿಗೆ ಕೆಲಸದ ಮೇಲಿರುವ ನಿಷ್ಠೆಗೆ ನಮ್ಮ ಸಲಾಂ. ಅವರು ಜಗತ್ತಿನ ಕೋಟ್ಯಂತರ ಜನರಿಗೆ ಸ್ಫೂರ್ತಿ. ಮನೋಬಲವಿದ್ದರೆ ನಾವು ಏನನ್ನು ಪ್ರೀತಿಸುತ್ತೀವೋ ಅದನ್ನು ಮಾಡಲು ಯಾವ ಶಕ್ತಿಯೂ ನಮ್ಮನ್ನು ತಡೆಯುವುದಕ್ಕೆ ಸಾಧ್ಯವಿಲ್ಲ' ಎಂದಿದ್ದಾರೆ ರಕ್ಷಾ ಕೃಷ್ಣಯ್ಯ.

Array

ನಮ್ಮ ದೇಶಕ್ಕೆ ನಿಮ್ಮಂಥವರು ಬೇಕು!

'ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಗೋವಾ ಜನರ ಉದ್ಧಾರಕ್ಕಾಗಿ ಹೋರಾಡುತ್ತಿದ್ದೀರಿ. ನಮ್ಮದೇಶಕ್ಕೆ ನಿಮ್ಮಂಥ ರಾಜಕಾರಣಿಗಳೇ ಬೇಕಿರುವುದು' ಎಂದು ವೈಭವ್ ಸಿಂಗ್ ಅಭಿಮಾನ ವ್ಯಕ್ತಪಡಿಸಿದ್ದಾರೆ.

ನಾವು ನಿಮ್ಮನ್ನು ನಂಬುತ್ತೇವೆ

'ಹ್ಯಾಟ್ಸ್ ಆಫ್ ಟು ಯು ಸರ್! ಈ ಚಿತ್ರದ ಕುರಿತು ರಾಜಕೀಯ ಲೆಕ್ಕಾಚಾರಗಳೇನೇ ಇದ್ದಿರಲಿ. ನಾವು ನಿಮ್ಮನ್ನು ನಂಬುತ್ತೇವೆ. ಏಕೆಂದರೆ ನಾವು ನಿಮ್ಮನ್ನು ಎಷ್ಟೋ ವರ್ಷದಿಂದ ನೋಡುತ್ತಿದ್ದೇವೆ. ಗೋವಾದ ಬಗೆಗಿನ ನಿಮ್ಮ ಕಾಳಜಿ, ಸಮರ್ಪಣಾ ಭಾವ ಅನನ್ಯ' ಎಂದಿದ್ದಾರೆ ರೂಪಾ ವಾಲೌಲಿಕರ್.

Array

ಇದಕ್ಕಿಂತ ಉತ್ತಮ ಸಿಎಂ ಯಾರು?

'ಗೋವಾಕ್ಕೆ ಇದಕ್ಕಿಂತ ಹೆಚ್ಚು ಸಮರ್ಪಣಾ ಭಾವದ ಮುಖ್ಯಮಂತ್ರಿ ಯಾರು ಸಿಗುವುದಕ್ಕೆ ಸಾಧ್ಯ? ಪರಿಕ್ಕರ್ ಅವರೇ ನಿಮ್ಮ ಕರ್ತವ್ಯನಿಷ್ಠೆಗೆ ಪ್ರಣಾಮಗಳು. ನಿಮಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ' ಎಂ ಕೆ ಸುವ್ರಾಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+