ಹೊಸ ವರ್ಷದ ಸಂಭ್ರಮ, ಗೋವಾದಲ್ಲಿ ನೈಟ್ ಕರ್ಫ್ಯೂ ಇಲ್ಲ: ಸಿಎಂ ಪ್ರಮೋದ್ ಸಾವಂತ್
ಗೋವಾ, ಡಿಸೆಂಬರ್ 31: ಕರಾವಳಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಲು ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ನೈಟ್ ಕರ್ಫ್ಯೂ ವಿಧಿಸುವುದನ್ನು ಪರಿಗಣಿಸಲು ಸರ್ಕಾರದ ಮುಂದೆ ಫೈಲ್ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಆದರೆ ಮುಂಬೈ ಸೇರಿದಂತೆ ಇತರೆ ನಗರಗಳಲ್ಲಿ ವಿಧಿಸಿರುವ ನೈಟ್ ಕರ್ಫ್ಯೂ ವಿಧಿಸಲು ಗೋವಾ ಸರ್ಕಾರ ಹಿಂದೇಟು ಹಾಕಿದೆ.
ಈಗಾಗಲೇ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಸೇರಿದೆ. ಕುಟುಂಬದ ಜೊತೆ ಆಗಮಿಸಿರುವ ಪ್ರವಾಸಿಗರು ಬೀಚ್‌ನಲ್ಲಿ ಸಖತ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಹೊಸ ವರ್ಷಾಚರಣೆಗೆ ನೈಟ್ ಕರ್ಫ್ಯೂ ವಿಧಿಸದಿದ್ದರೂ ಸಹ ಕೇಂದ್ರ ಆರೋಗ್ಯ ಇಲಾಖೆ ಜಾರಿ ಮಾಡಿರುವ ಕೋವಿಡ್-19 ಗೈಡ್‌ಲೈನ್ಸ್ ಪಾಲನೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.
ಈಗಾಗಲೇ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದ್ದು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಗಿದೆ.












Click it and Unblock the Notifications