• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಹಿಂದು ರಾಷ್ಟ್ರ ನಿರ್ಮಾ ಣಕ್ಕಾಗಿ ಸಾಮಾಜಿಕ ಮಾಧ್ಯಮ ಸದ್ಬಳಕೆಯಾಗಾಲಿ"

|

ರಾಮನಾಥಿ (ಗೋವಾ), ಜೂನ್ 03: "ಹಿಂದೂ ಧರ್ಮದ ಮೇಲಾಗುವ ಆಘಾತಗಳ ವಿರುದ್ಧ ಧ್ವನಿ ಎತ್ತುವುದು ನಮ್ಮ ಪ್ರತಿಯೊಬ್ಬರ ಕರ್ತವವ್ಯವಾಗಿದೆ. ಕಾಲಾನುಸಾರ ನಮ್ಮಲ್ಲಿ ಏನೆಲ್ಲ ಸಾಧನಗಳಿವೆ ಅವುಗಳನ್ನು ಉಪಯೋಗಿಸಿ ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ಜನರ ಮುಂದೆ ಮಂಡಿಸಬೇಕು" ಎಂದು ದೆಹಲಿಯ ಸಾಮಾಜಿಕ ಮಾಧ್ಯಮಗಳಿಂದ ಧರ್ಮಪ್ರಸಾರ ಮಾಡುವ ರಿತೂ ರಾಠೌಡರವರು ಕರೆ ನೀಡಿದರು.

ಪ್ರಸಕ್ತ ಕಾಲದಲ್ಲಿ ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು ಇವುಗಳಿಂದ ಹಿಡಿದು ಪ್ರತಿಯೊಂದು ಸ್ಥಳದಲ್ಲಿ ಎಡಪಂಥೀಯ ವಿಚಾರದ ಜನರ ಪ್ರಾಬಲ್ಯವಿದೆ. ಅದನ್ನು ವಿರೋಧಿಸಿ ಹಿಂದೂ ರಾಷ್ಟ್ರದ ವಿಚಾರಸರಣಿಯ ಪ್ರಚಾರ ಮಾಡಲು ಟ್ವಿಟರ್, ಫೇಸಬುಕ್ ಮತ್ತು 'ವಾಟ್ಸಆಪ್', ಇಂತಹ ಸಾಮಾಜಿಕ ಮಾಧ್ಯಮಗಳನ್ನು ಪ್ರಭಾವಶಾಲಿಯಾಗಿ ಬಳಸಬೇಕು. ಸಾಮಾಜಿಕ ಮಾಧ್ಯಮಗಳ ರೂಪದಲ್ಲಿ ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಹೋರಾಡುವ ವೈಚಾರಿಕ ಯೋಧರನ್ನು ನಿರ್ಮಿಸಿ ಆ ಮಾಧ್ಯಮದಿಂದ ಹೋರಾಡಬೇಕಿದೆ ಎಂದು ಅವರು ಹೇಳಿದರು.

ಹಿಂದುತ್ವ ಜಾಗೃತವಾಗಿದ್ದೇ ಬಿಜೆಪಿ ಗೆಲುವಿಗೆ ಕಾರಣ - ಪೇಜಾವರ ಶ್ರೀ

ಜೂನ್ 2 ರಂದು ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ 'ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಐದನೇ ದಿನ 1-ದಿನದ 'ಸೋಶಿಯಲ್ ಮೀಡಿಯಾ ಕಾನ್‌ಕ್ಲೇವ್'ನ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಸೋಶಿಯಲ್ ಮೀಡಿಯಾ ಸಮನ್ವಯಕರಾದ ವಿಶ್ವನಾಥ ಕುಲಕರ್ಣಿರವರು ಸ್ವಾಗತ ಹಾಗೂ ಪ್ರಸ್ತಾವನೆ ಮಂಡಿಸಿದರು. 'ಸೋಶಿಯಲ್ ಮೀಡಿಯಾ ಕಾನ್‌ಕ್ಲೇವ್'ಗಾಗಿ ಭಾರತ ಹಾಗೂ ಬಾಂಗ್ಲಾದೇಶಗಳಿಂದ 250 ಕ್ಕೂ ಹೆಚ್ಚು ಹಿಂದುತ್ವನಿಷ್ಠರು ಪಾಲ್ಗೊಂಡಿದ್ದರು.

"ಆಂಗ್ಲರು ಭಾರತಕ್ಕೆ ಬಂದ ನಂತರ ಕೇವಲ 'ಸಾಂತಾಕ್ಲಾಸ', 'ಕ್ರಿಸಮಸ್ ಟ್ರಿ', ಇಂತಹ ಪ್ರತೀಕಗಳನ್ನು ಹಿಂದೂಗಳೆದುರು ಇಟ್ಟರು. ಹಾಗಾಗಿ ಕಳೆದ ಮೂರು ಪೀಳಿಗೆಯ ಮುಂದಿನ ಹಿಂದೂಗಳ ಆದರ್ಶ ಹಾಗೂ ಪ್ರತೀಕಗಳು ಇಲ್ಲವಾದವು. ಆದುದರಿಂದ ಮಕ್ಕಳಿಗೆ ಚಿಕ್ಕಂದಿನಿಂದ ಹಿಂದೂಗಳ ಸಂಸ್ಕೃತಿ, ಧರ್ಮ ಇವುಗಳ ವಿಷಯದಲ್ಲಿ ಪಂಚತಂತ್ರ, ಮಹಾಭಾರತ ಇವುಗಳಲ್ಲಿನ ಕಥೆಗಳನ್ನು ಹೇಳಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಸುಳ್ಳು ಕಥೆಗಳು ಭಿತ್ತರವಾಗುತ್ತವೆ, ಇರುವುದನ್ನು ಇದ್ದಂತೆ ಪ್ರಸಾರ ಮಾಡಿದರೆ ನಮ್ಮ ವಿಶ್ವಾಸಾರ್ಹತೆ ಕಡಿಮೆಯಾಗಬಹುದು." ಎಂದು ಅವರು ಹೇಳಿದರು.

ಹಿಂದೂಗಳಿಗೆ ವೋಟ್ ಹಾಕಲು ಬಿಡಬಾರದು: ಟಿಎಂಸಿ ಸಂಸದನ ವಿವಾದಾತ್ಮಕ ವಿಡಿಯೋ

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿಯನ್ನು ಖಚಿತಪಡಿಸಿಕೊಂಡೇ ಅದರ ಪ್ರಸಾರ ಮಾಡಿ, ಎಂದು ಮುಂಬೈಯ 'ಇಂಡಸ್ ಸ್ಕ್ರೋಲ್ ಡಾಟ್ ಕಾಮ್'ನ ಸಹಸಂಪಾದಕಿ ಶ್ರೀಮತಿ ರತಿ ಹೆಗಡೆಯವರು ಕರೆ ನೀಡಿದರು. ಈ ಸಮಯದಲ್ಲಿ ಮುಂಬೈಯ ಮೀನಾಕ್ಷಿ ಶರಣ ಇವರು ಮಾತನಾಡುತ್ತಾ, "ಕ್ರೈಸ್ತರು ಹಾಗೂ ಮುಸಲ್ಮಾನರು ಹಿಂದೂ ಸಂಸೃತಿಯ ಮೇಲೆ ದಾಳಿ ನಡೆಸಿದರು, ಆದ್ದರಿಂದಲೇ ಸತ್ಯ ಇತಿಹಾಸ ಇಲ್ಲದಂತಾಯಿತು. ಹಿಂದೂಗಳು ಇದರ ಪ್ರತಿಕಾರವನ್ನು ಮಾಡಲು ಭಾರತೀಯ ಸಂಸ್ಕೃತಿಯ ಸತ್ಯ ಹಾಗೂ ಐತಿಹಾಸಿಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಿಂದ ಜನರ ಮುಂದೆ ಇಡಬೇಕಾಗಿದೆ" ಎಂದರು.

ಈ ಸಮಯದಲ್ಲಿ ಪುಣೆಯ 'ಗ್ಲೋಬಲ್ ಕಶ್ಮೀರಿ ಪಂಡಿತ ಡಾಯಸಪೊರಾ'ದ ರೋಹಿತ ಕಾಚರು ಮಾತನಾಡುತ್ತಾ, 'ವಿಶ್ವಮಟ್ಟದಲ್ಲಿ ಕಾಶ್ಮೀರಿ ಹಿಂದೂಗಳ ಸಮಸ್ಯೆಯನ್ನು ಮಂಡಿಸುವಾಗ ಮಾಡಿದ ಪ್ರಯತ್ನ ಹಾಗೂ ಅದಕ್ಕೆ ಯಶಸ್ಸಿನ ಬಗ್ಗೆ, ಹಾಗೆಯೇ ತೆಲಂಗಣದಲ್ಲಿಯ ಶಿವಸೇನೆಯ ರಾಜ್ಯ ಪ್ರಮುಖರಾದ ಟಿ. ಎನ್. ಮುರಾರಿ ಇವರು 'ಶಬರಿಮಲೆಯ ಧಾರ್ಮಿಕ ಪರಂಪರೆಯನ್ನು ಭಂಗಗೊಳಿಸಲು ರಚಿಸಿದಂತಹ ಷಡ್ಯಂತ್ರದ ವಿರುದ್ಧ ಮಾಡಿದ ಆಂದೋಲನ', ಇವುಗಳ ಬಗ್ಗೆ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಸೋಶಿಯಲ್ ಮೀಡಿಯಾ ವಿಭಾಗದ ಸಮನ್ವಯಕರಾದ ಪ್ರದೀಪ ವಾಡಕರ ಇವರು 'ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಾಮಾಜಿಕ ಮಾಧ್ಯಮಗಳಿಂದ ಹಮ್ಮಿಕೊಳ್ಳಲಾಗುವ ಉಪಕ್ರಮ ಹಾಗೂ ಅದಕ್ಕೆ ಸಿಕ್ಕಿದ ಯಶಸ್ಸು' ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ 'ಹಿಂದೂ ರಾಷ್ಟ್ರ ಸ್ಥಾಪನೆಯ ಮೂಲ ವಿಚಾರ' ಈ ವಿಷಯದ ಬಗ್ಗೆ ಮಾರ್ಗದರ್ಶನ ಮಾಡಿದರು. ಅಧಿವೇಶನದ ನಿಮಿತ್ತ #WeSupportPunalekkar ಈ ಟ್ವಿಟರ್ ಟ್ರೆಂಡ್ ದೇಶದಲ್ಲಿ ಐದನೇ ಸ್ಥಾನದಲ್ಲಿತ್ತು ಹಾಗೂ #SociialMediaForHinduRashtra ಈ ಟ್ವಿಟರ್ ಟ್ರೆಂಡ್ ಅಧಿವೇಶನದ ನಿಮಿತ್ತ ಆರಂಭಿಸಲಾಗಿತ್ತು.

English summary
Delhi social media activist Rithu Rathore said people should use social media to promote Hindu Rashtra with #WeSupportPunalekkar, #SociialMediaForHinduRashtra hashtags.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X