ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ರಾಜ್ಯಕ್ಕೆ ಎನ್‌ಆರ್‌ಸಿ ಬೇಕಿಲ್ಲ' ಎಂದ ಬಿಜೆಪಿ ಮುಖ್ಯಮಂತ್ರಿ

|
Google Oneindia Kannada News

ಪಣಜಿ, ಡಿಸೆಂಬರ್ 24: ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆಗಳು ಎಲ್ಲ ರಾಜ್ಯಗಳಲ್ಲೂ ತೀವ್ರಗೊಳ್ಳುತ್ತಿರುವಂತೆ ರಾಜ್ಯ ಸರ್ಕಾರಗಳು ಜನರ ಆಕ್ರೋಶದಿಂದ ಬಚಾವಾಗಲು ಎನ್‌ಆರ್‌ಸಿ ಗೆ 'ನೋ' ಹೇಳುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳೂ ಎನ್‌ಆರ್‌ಸಿ ಯಿಂದ ಹಿಂದೆ ಸರಿಯುವ ಯತ್ನ ಮಾಡುತ್ತಿವೆ.

ಬಿಜೆಪಿ ಅಧಿಕಾರವಿರುವ ಗೋವಾ ರಾಜ್ಯದ ಸಿಎಂ ಪ್ರಮೋದ್ ಸಾವಂತ್ ಎನ್‌ಆರ್‌ಸಿ ಬಗ್ಗೆ ಅಪಸ್ವರ ಎತ್ತಿದ್ದಾರೆ. 'ನಮ್ಮ ರಾಜ್ಯಕ್ಕೆ ಎನ್‌ಆರ್‌ಸಿ ಅವಶ್ಯಕತೆ ಇದ್ದಂತಿಲ್ಲ' ಎಂದು ಅವರು ರಾಗ ಎತ್ತಿದ್ದಾರೆ.

ಎನ್‌ಆರ್‌ಸಿ ಗೆ 'ನೋ' ಎಂದ ಮೋದಿ ಮೆಚ್ಚಿನ ಹುಡುಗ ಆಂಧ್ರ ಸಿಎಂ ಜಗನ್ಎನ್‌ಆರ್‌ಸಿ ಗೆ 'ನೋ' ಎಂದ ಮೋದಿ ಮೆಚ್ಚಿನ ಹುಡುಗ ಆಂಧ್ರ ಸಿಎಂ ಜಗನ್

'ಗೋವಾದ ಮುಕ್ಕಾಲು ಪಾಲು ಜನಸಂಖ್ಯೆ ಅಲ್ಪಸಂಖ್ಯಾತರಿಂದಲೇ ಕೂಡಿದ್ದು, ನಮ್ಮ ರಾಜ್ಯಕ್ಕೆ ಎನ್‌ಆರ್‌ಸಿ ಅವಶ್ಯಕತೆ ಇದ್ದಂತಿಲ್ಲ, ನಮ್ಮದು ಮಾತ್ರವಲ್ಲ ಹಲವು ರಾಜ್ಯಗಳಲ್ಲಿ ಎನ್‌ಆರ್‌ಸಿ ಅವಶ್ಯಕತೆ ಇಲ್ಲ ಎಂದೆನಿಸುತ್ತದೆ' ಎಂದು ಗೋವಾ ಸಿಎಂ ಹೇಳಿದ್ದಾರೆ.

NRC May Not Needed In Goa: CM Pramod Sawant

ಸಿಎಎ ಕಾಯ್ದೆಯಾಗಿದ್ದು ಅದನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ, ಆದರೆ ಎನ್‌ಆರ್‌ಸಿ ಕೇಂದ್ರದ ಕಾರ್ಯಕ್ರಮವಷ್ಟೆ ಹಾಗಾಗಿ ಅದನ್ನು ನಿರಾಕರಿಸುವ ಧೈರ್ಯವನ್ನು ಬಿಜೆಪಿ ಮೈತ್ರಿಯಲ್ಲಿರುವ ಪಕ್ಷಗಳು ಮತ್ತು ಸ್ವತಃ ಬಿಜೆಪಿ ಆಡಳಿತದ ರಾಜ್ಯಗಳ ಸಿಎಂ ಗಳು ಮಾಡುತ್ತಿದ್ದಾರೆ.

ಗೋವಾ ಸಿಎಂ ಅವರು ಎನ್‌ಆರ್‌ಸಿ ಅವಶ್ಯಕತೆ ಇಲ್ಲ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಕಾಂಗ್ರೆಸ್‌ನ ಮುಖ್ಯಸ್ಥ, 'ಜಾರ್ಖಂಡ್ ಚುನಾವಣಾ ಫಲಿತಾಂಶ ಗೋವಾ ಸಿಎಂ ಕಣ್ಣು ತೆರೆಸಿದಂತಿದೆ' ಎಂದು ವ್ಯಂಗ್ಯ ಮಾಡಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!

ಕೇರಳ, ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ ಮತ್ತು ಎಲ್ಲ ಕಾಂಗ್ರೆಸ್ ಆಡಳಿತ ರಾಜ್ಯಗಳು ತಾವು ಎನ್‌ಆರ್‌ಸಿ ಜಾರಿ ಆಗಲು ಬಿಡುವುದಿಲ್ಲವೆಂದು ಹೇಳಿವೆ. ಈಗ ಈ ಪಟ್ಟಿಗೆ ಗೋವಾ ಸಹ ಸೇರುವ ಸಾಧ್ಯತೆ ಇದೆ.

English summary
Goa BJP CM Pramod Sawant said 'NRC may not needed to Goa'. Many states are opposing NRC to impliment in their states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X