ಮಾಸ್ಕ್‌ ಹಾಕದಿದ್ದರೆ, ದಿನಸಿ, ಪೆಟ್ರೋಲ್ ನೀಡುವುದಿಲ್ಲ!

ಪಣಜಿ, ಮೇ 1: ಗೋವಾದಲ್ಲಿ ಜನರು ಮಾಸ್ಕ್ ಧರಿಸದೆ ಇದ್ದರೆ, ದಿನಸಿ ಸಾಮಾನುಗಳನ್ನು ಹಾಗೂ ಪೆಟ್ರೋಲ್ ನೀಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

Recommended Video

      ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು | Siddaramaiah | Oneindia Kannada

      ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಭೆ ಮುಖ್ಯ ಕಾರ್ಯದರ್ಶಿ ಪರಿಮಲ್ ರೈ ಅಧ್ಯಕ್ಷತೆವಹಿಸಿದ್ದರು. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್‌ ಧರಿಸುವುದು ಅಗತ್ಯವಾಗಿದ್ದು, ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳು ಕಾರಣವಾಗಿದೆ.

      ರಾಜ್ಯದ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಯಾರಾದರು ಮಾಸ್ಕ್‌ ಹಾಕದೆ ಬಂದರೆ, ಅವರ ವಾಹನಗಳಿಗೆ ಪೆಟ್ರೋಲ್ ನೀಡದೆ ಇರಲು ತಿಳಿಸಲಾಗಿದೆ. ಅದೇ ರೀತಿ ಮಾಸ್ಕ್‌ ಧರಿಸದ ವ್ಯಕ್ತಿಗಳಿಗೆ ದಿನಸಿ ಅಂಗಡಿಗಳಲ್ಲಿ ದಿನಸಿ ಪದಾರ್ಥ ನೀಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.

      No Mask No Petrol, No Mask No Ration In Goa

      ಅದರೊಂದಿಗೆ ಸರ್ಕಾರ 'no mask-no petrol' (ಮಾಸ್ಕ್‌ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ) 'no mask-no ration' (ಮಾಸ್ಕ್‌ ಇಲ್ಲದಿದ್ದರೆ ದನಸಿ ಇಲ್ಲ) ಎಂದು ಅಭಿಯಾನ ಮಾಡುತ್ತಿದೆ. ಈ ಮೂಲಕ ಜನರಲ್ಲಿ ಮಾಸ್ಕ್‌ ಧರಿಸುವಂತೆ ಅರಿವು ಮೂಡಿಸುತ್ತಿದೆ.

      ಇದರೊಂದಿಗೆ ಮಾಸ್ಕ್‌ ಹಾಕದೆ ವಾಹನದಲ್ಲಿ ಬಂದರೆ, ಅಂತವರ ಬಳಿ ಪೊಲೀಸರು 1000 ರೂಪಾಯಿ ದಂಡ ತೆಗೆದುಕೊಳ್ಳುತ್ತಿದ್ದಾರೆ. ಗೋವಾ ಕೊರೊನಾ ಮುಕ್ತ ರಾಜ್ಯವಾಗಿದೆ. 7 ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಹೀಗಾಗಿ, ಹೊಸ ಪ್ರಕರಣಗಳು ಹುಟ್ಟಿಕೊಳ್ಳದ ಹಾಗೆ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+