• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಲಿಕಾಪ್ಟರ್‌ನಲ್ಲಿ ಕೋವಿಡ್ ಸೋಂಕಿತರಿಗಾಗಿ ವೈದ್ಯಕೀಯ ತೀವ್ರ ನಿಗಾ ಘಟಕ

By ಕಾರವಾರ ಪ್ರತಿನಿಧಿ
|
Google Oneindia Kannada News

ಪಣಜಿ, ಜೂನ್ 4: ಗೋವಾದ ನೌಕಾ ವಿಮಾನ ನಿಲ್ದಾಣ ಐಎನ್‌ಎಸ್ ಹನ್ಸಾದಲ್ಲಿ ಸುಧಾರಿತ ಲೈಟ್ ಹೆಲಿಕಾಪ್ಟರ್ (ಎಎಲ್‌ಹೆಚ್) ವಿಮಾನದಲ್ಲಿ ವೈದ್ಯಕೀಯ ತೀವ್ರ ನಿಗಾ ಘಟಕವನ್ನು (ಎಂಐಸಿಯು) ಅಳವಡಿಸುವ ಮೂಲಕ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸುವ ಸಾಮರ್ಥ್ಯವನ್ನು ಭಾರತೀಯ ನೌಕಾಪಡೆ ಹೆಚ್ಚಿಸಿದೆ.

ಎಂಐಸಿಯುವನ್ನು ಐಎನ್‌ಎಸ್ 323ರಿಂದ ಎಎಲ್‌ಎಚ್ ಎಂಕೆ-3ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಹಾಯದಿಂದ ಸ್ಥಾಪಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಎಲ್ಲಾ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಿಸುವ ಎಎಲ್‌ಎಚ್ ಎಂಕೆ- 3 ಈಗ ಎಂಐಸಿಯು ಹೊಂದಿದ ಕಾರಣ, ಭಾರತೀಯ ನೌಕಾಪಡೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ಗಾಳಿಯಲ್ಲ್ಲಿ ಗಂಭೀರ ಸ್ಥಿತಿಯ ರೋಗಿಗಳನ್ನು ಸ್ಥಳಾಂತರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಂಐಸಿಯು ಎರಡು ಸೆಟ್ ಡಿಫಿಬ್ರಿಲೇಟರ್‌ಗಳನ್ನು ಹೊಂದಿದ್ದು, ಮಲ್ಟಿಪ್ಯಾರಾ ಮಾನಿಟರ್‌ಗಳು, ವೆಂಟಿಲೇಟರ್, ಇನ್ಫ್ಯೂಷನ್ ಮತ್ತು ಸಿರಿಂಜ್ ಪಂಪ್‌ಗಳನ್ನು ಒಳಗೊಂಡ ಆಮ್ಲಜನಕ ಬೆಂಬಲವನ್ನೂ ಇದು ಹೊಂದಿದೆ. ವಿಮಾನದ ವಿದ್ಯುತ್ ಸರಬರಾಜಿನ ಮೂಲಕ ಈ ವ್ಯವಸ್ಥೆಯನ್ನು ನಿರ್ವಹಿಸಬಹುದಾಗಿದ್ದು, ನಾಲ್ಕು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ನ್ನು ಇದು ಹೊಂದಿದೆ. ಎಚ್‌ಎಎಲ್‌ನಿಂದ ಭಾರತೀಯ ನೌಕಾಪಡೆಗೆ ನೀಡಲಾಗುತ್ತಿರುವ ಎಂಟು ಎಂಐಸಿಯು ಸೆಟ್‌ಗಳಲ್ಲಿ ಎಎಲ್‌ಎಚ್ ಎಂಕೆ-3 ಮೊದಲನೆಯದಾಗಿದೆ.

English summary
The Medical Intensive Care Unit (MICU) has been installed on the Advanced Light Helicopter (ALH) aircraft at Naval Airport INS Hansa, Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X