• search
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್ ಬಗ್ಗೆ ರಾಹುಲ್ ಸುಳ್ಳು ಹೇಳಿದರೆ? ಪರಿಕ್ಕರ್ ಪತ್ರದಲ್ಲಿರುವುದೇನು?

|

ಪಣಜಿ, ಜನವರಿ 30 : ಐದು ನಿಮಿಷಗಳ ಸೌಜನ್ಯದ ಭೇಟಿಯನ್ನು ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಕ್ಕಾಗಿ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ರಾಹುಲ್ ಗಾಂಧಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಮನೋಹರ್ ಪರಿಕ್ಕರ್ ಅವರು ರಾಹುಲ್ ಗಾಂಧಿ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದು, "ಆ ಭೇಟಿಯನ್ನು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಕ್ಕಾಗಿ ನನಗೆ ಖೇದವಾಗುತ್ತಿದೆ. ಕೇವಲ 5 ನಿಮಿಷಗಳ ಭೇಟಿಯಲ್ಲಿ ನೀವು ರಫೇಲ್ ಡೀಲ್ ಬಗ್ಗೆ ಕೇಳಲಿಲ್ಲ, ಅದರ ಬಗ್ಗೆ ಯಾವುದೇ ಚರ್ಚೆಯೂ ಆಗಲಿಲ್ಲ" ಎಂದಿದ್ದಾರೆ.

ರಾಹುಲ್ ಲೈಂಗಿಕತೆಯನ್ನೂ ಉಚಿತ ನೀಡುತ್ತಾರಾ : ಮಧು ಕಿಶ್ವರ್ ಟ್ವೀಟ್

ಅವರನ್ನು ಪಣಜಿಯಲ್ಲಿ ಭೇಟಿಯಾದ ನಂತರ ಕೇರಳದ ಕೊಚ್ಚಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ಹೊಸ ರಫೇಲ್ ಡೀಲ್ ಗೂ ಮನೋಹರ್ ಪರಿಕ್ಕರ್ ಅವರಿಗೂ ಸಂಬಂಧವಿಲ್ಲ ಎಂದು ಪರಿಕ್ಕರ್ ಹೇಳಿದ್ದು, ಇದೆಲ್ಲ ಅನಿಲ್ ಅಂಬಾನಿ ಅವರಿಗೆ ಲಾಭ ದೊರಕಿಸಿಕೊಡಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಆಟ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ರಫೇಲ್ ಡೀಲ್: ಪರಿಕ್ಕರ್ ಬೆಂಬಲಕ್ಕೆ ನಿಂತ ರಾಹುಲ್ ಗಾಂಧಿ!

ಹಾಗಿದ್ದರೆ ರಾಹುಲ್ ಗಾಂಧಿ ಅವರು ರಫೇಲ್ ಡೀಲ್ ಬಗ್ಗೆ ಮತ್ತು ಮನೋಹರ್ ಪರಿಕ್ಕರ್ ಜೊತೆಗಿನ ಭೇಟಿಯಲ್ಲಿ ಆಡಿದ ಮಾತುಗಳ ಬಗ್ಗೆ ಸುಳ್ಳು ಹೇಳಿದರೆ? ರಾಹುಲ್ ಆಡಿದ್ದು ಸುಳ್ಳು ಎಂದು ಮನೋಹರ್ ಪರಿಕ್ಕರ್ ಅವರ ಪತ್ರದಿಂದ ಗೊತ್ತಾಗುತ್ತದೆ. ಇನ್ನು ಇದನ್ನು ರಾಹುಲ್ ಗಾಂಧಿ ಅವರೇ ಸಮರ್ಥಿಸಿಕೊಳ್ಳಬೇಕು. ಮನೋಹರ್ ಪರಿಕ್ಕರ್ ಅವರು ರಾಹುಲ್ ಗೆ ಬರೆದಿದ್ದೇನು? ಮುಂದೆ ಓದಿ.

ಆರೋಗ್ಯಕರ ರಾಜಕೀಯ ಸಂಪ್ರದಾಯ ಭಾರತದಲ್ಲಿದೆ

ಆರೋಗ್ಯಕರ ರಾಜಕೀಯ ಸಂಪ್ರದಾಯ ಭಾರತದಲ್ಲಿದೆ

ಆತ್ಮೀಯ ರಾಹುಲ್ ಗಾಂಧಿ ಅವರೆ, ಜನವರಿ 29ರಂದು ನನ್ನ ಆರೋಗ್ಯ ಸ್ಥಿತಿಯನ್ನು ವಿಚಾರಿಸಲೆಂದು ಯಾವುದೇ ಪೂರ್ವಮಾಹಿತಿ ನೀಡದೆ ನನ್ನನ್ನು ಭೇಟಿಯಾದಿರಿ. ಯಾರೇ ಆಗಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಎಲ್ಲ ವಿರೋಧಗಳನ್ನೂ ಮೀರಿ ಆರೋಗ್ಯಕರ ರಾಜಕೀಯ ಸಂಪ್ರದಾಯ ಭಾರತದಲ್ಲಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ, ಉತ್ತಮ ಚಿಕಿತ್ಸೆ ಪಡೆಯುತ್ತಿರುವ ನಾನು ನಿಮ್ಮನ್ನು ಅದೇ ಸ್ಫೂರ್ತಿಯಿಂದ ಸ್ವಾಗತಿಸಿದೆ. ನಿಮ್ಮ ಸೌಜನ್ಯತೆಯನ್ನು ನಾನು ಶ್ಲಾಘಿಸುತ್ತೇನೆ.

ರಾಹುಲ್ ಗಾಂಧಿಯನ್ನು ಬಾಯ್ತುಂಬ ಹೊಗಳಿದ ಗೋವಾ ಬಿಜೆಪಿ ಮುಖಂಡ

ಭೇಟಿ ರಾಜಕೀಯ ಲಾಭಕ್ಕೆ ದುರ್ಬಳಕೆ

ಭೇಟಿ ರಾಜಕೀಯ ಲಾಭಕ್ಕೆ ದುರ್ಬಳಕೆ

ಆದರೆ, ನಮ್ಮ ಭೇಟಿ ಮತ್ತು ನೀವು ನೀಡಿದ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ನನ್ನನ್ನು ಯಾತನೆಗೀಡುಮಾಡಿದೆ. ರಫೇಲ್ ಯುದ್ಧ ವಿಮಾನ ಪಡೆಯುವ ಬಗ್ಗೆಯಾಗಲಿ, ಅದರ ಬಗ್ಗೆ ಯಾವುದೇ ಮಾಹಿತಿ ನನಗಿರಲಿಲ್ಲ ಎಂದು ನಾನು ನಿಮಗೆ ಹೇಳಿರುವುದಾಗಿ ಮಾಧ್ಯಮಗಳಲ್ಲಿ ಓದಿದೆ. ನೀವು ಈ ಭೇಟಿಯನ್ನು ರಾಜಕೀಯ ಲಾಭಗಳಿಗಾಗಿ ಬಳಸಿಕೊಂಡಿದ್ದು ನನಗೆ ಆಘಾತ ತಂದಿದೆ. ಕೇವಲ 5 ನಿಮಿಷಗಳ ಭೇಟಿಯಲ್ಲಿ ನೀವು ರಫೇಲ್ ಬಗ್ಗೆ ಏನನ್ನೂ ಕೇಳಲಿಲ್ಲ, ಅದರ ಬಗ್ಗೆ ಚರ್ಚೆಯೂ ಆಗಲಿಲ್ಲ. ನಮ್ಮ ಭೇಟಿಯಲ್ಲಿ ರಫೇಲ್ ಡೀಲ್ ಬಗ್ಗೆ ಕಿಂಚಿತ್ತೂ ಪ್ರಸ್ತಾಪವೇ ಇರಲಿಲ್ಲ.

ಅಚ್ಚರಿ ಮೂಡಿಸಿದ ಮನೋಹರ್ ಪರಿಕ್ಕರ್-ರಾಹುಲ್ ಗಾಂಧಿ ಭೇಟಿ!

ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು

ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು

ಎರಡು ಸರಕಾರಗಳ ನಡುವಿನ ಒಪ್ಪಂದ ಮತ್ತು ರಫೇಲ್ ಯುದ್ಧ ವಿಮಾನ ಕೊಂಡಿದ್ದು ರಕ್ಷಣಾ ಇಲಾಖೆಯ ಕೊಳ್ಳುವ ಪ್ರಕ್ರಿಯೆಯಂತೆಯೇ ಆಗಿದೆ. ಇದನ್ನು ನಾನು ಹಿಂದೆಯೂ ಹೇಳಿದ್ದೇನೆ, ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಪುನರುಚ್ಚರಿಸುತ್ತೇನೆ. ಗರಿಷ್ಠ ರಾಷ್ಟ್ರೀಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಿಧಿವಿಧಾನಗಳನ್ನು ಅನುಸರಿಸಿ ರಫೇಲ್ ಯುದ್ಧವಿಮಾನಗಳನ್ನು ಕೊಳ್ಳಲಾಗಿದೆ. ಆದರೆ, ಸೌಜನ್ಯತೆಗಾಗಿ ನೀಡಿದ ಭೇಟಿಯ ಸಂದರ್ಭದಲ್ಲಿ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳಿಕೆ ನೀಡುವಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ಇಳಿದಿರುವುದು, ನಿಮ್ಮ ಭೇಟಿಯ ಉದ್ದೇಶ ಮತ್ತು ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ.

ಮೈಕಲ್ ಮಾಮಾ ಜೊತೆ ಗಾಂಧಿ ಕುಟುಂಬಕ್ಕೆ ಏನು ಸಂಬಂಧ : ಮೋದಿ ವ್ಯಂಗ್ಯ

ನಿಮಗೆ ಬೇರೆಯದೇ ಉದ್ದೇಶವಿತ್ತು

ನಿಮಗೆ ಬೇರೆಯದೇ ಉದ್ದೇಶವಿತ್ತು

ಇಲ್ಲಿ ನಾನು ಜೀವನ್ಮರಣದ ಹೋರಾಟದಲ್ಲಿ ಮುಳುಗಿದ್ದೇನೆ. ನನಗೆ ಸಿಗುತ್ತಿರುವ ತರಬೇತಿ ಮತ್ತು ಸೈದ್ಧಾಂತಿಕ ಶಕ್ತಿಯಿಂದಾಗಿ ಎಲ್ಲ ವೈರುಧ್ಯಗಳನ್ನೂ ಮೆಟ್ಟಿ ನಿಂತು ಗೋವಾ ರಾಜ್ಯಕ್ಕಾಗಿ ಮತ್ತು ಇಲ್ಲಿನ ಜನರಿಗಾಗಿ ಸೇವೆ ಮಾಡಬಯಸುತ್ತೇನೆ. ಕೈಲಾದಷ್ಟು ಜನರ ಸೇವೆ ಮಾಡುತ್ತಿರುವ ನಿಟ್ಟಿನಲ್ಲಿ ನಿಮ್ಮ ಶುಭಾಶಯಗಳು ನನಗೆ ಇನ್ನಷ್ಟು ಶಕ್ತಿ ನೀಡುತ್ತವೆಂದು ನಂಬಿದ್ದೆ. ಆದರೆ, ನಿಮಗೆ ಬೇರೆಯದೇ ಉದ್ದೇಶ ಇದ್ದೀತೆಂದು ನನಗೆ ಎಳ್ಳಷ್ಟೂ ನಿರೀಕ್ಷೆಯಿರಲಿಲ್ಲ.

ತೀವ್ರ ನಿರಾಶೆಯಿಂದ ನಾನು ಪತ್ರ ಬರೆದಿದ್ದೇನೆ

ತೀವ್ರ ನಿರಾಶೆಯಿಂದ ನಾನು ಪತ್ರ ಬರೆದಿದ್ದೇನೆ

ನೀವು ಸತ್ಯವನ್ನು ಹೇಳುತ್ತೀರೆಂಬ ಸದುದ್ದೇಶದಿಂದ ತೀವ್ರ ನಿರಾಶೆಯಿಂದ ನಾನು ಈ ಪತ್ರವನ್ನು ಬರೆದಿದ್ದೇನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಭೇಟಿಯನ್ನು ನಿಮ್ಮ ರಾಜಕೀಯ ಉದ್ದೇಶಗಳಿಗಾಗಿ ಮತ್ತು ಲಾಭಗಳಿಗಾಗಿ ದಯವಿಟ್ಟು ಉಪಯೋಗಿಸಿಕೊಳ್ಳಬೇಡಿ. ನಾನು ನನ್ನ ಗೋವಾ ರಾಜ್ಯದ ಮತ್ತು ದೇಶದ ಜನರ ಸೇವೆಯಲ್ಲಿ ಸದಾ ನಿರತನಾಗಿರುತ್ತೇನೆ. ಗೌರವಗಳೊಂದಿಗೆ, ಮನೋಹರ್ ಪರಿಕ್ಕರ್.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Goa chief minister Manohar Parrikar has slammed Congress president Rahul Gandhi for politicising courtesy visit. Parrikar has written a letter to Rahul Gandhi sayint in 5 minutes visit neither Rahul talked anything about Rafale deal not was it discussed. Did Rahul lie about Rafale deal?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more