ಕೊರೊನಾ ಭೀತಿಯಲ್ಲೂ ಪ್ರವಾಸೋದ್ಯಮ ಪುನರಾರಂಭಿಸಿದ ಗೋವಾ

ಪಣಜಿ, ಜುಲೈ 1: ಕೊರೊನಾ ವೈರಸ್ ಭೀತಿಯ ನಡುವೆಯೂ ಗೋವಾದಲ್ಲಿ ಪ್ರವಾಸೋದ್ಯಮ ಆರಂಭವಾಗುತ್ತಿದೆ. ನಾಳೆಯಿಂದಲೇ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಂ ಅಜ್ಗಾಂವ್ಕರ್ ತಿಳಿಸಿದ್ದಾರೆ.

Recommended Video

      Unlock 2.0 : ಕರ್ನಾಟಕ ಸರ್ಕಾರದ ಪ್ರಕಾರ ಇಂದಿನಿಂದ ಏನಿರುತ್ತೆ? ಏನಿರಲ್ಲ? | Oneindia Kannada

      ರಾಜ್ಯದಲ್ಲಿ ಸುಮಾರು 250 ಹೋಟೆಲ್‌ಗಳಿಗೆ ಕಾರ್ಯ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ಗೋವಾದಲ್ಲಿ ಉಳಿದುಕೊಳ್ಳಲು ಅನುಮತಿ ಸಹ ಸಿಗಲಿದೆ.

      ಆದರೆ, ಗೋವಾ ರಾಜ್ಯ ಪ್ರವೇಶಿಸುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಯ ಪ್ರಮಾಣಪತ್ರ ತೆಗೆದುಕೊಂಡು ಬರಬೇಕು ಅಥವಾ ಗೋವಾದಲ್ಲಿ ಕೊವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಪ್ರವಾಸೋದ್ಯಮ ಸಚಿವ ಎಂ ಅಜ್ಗಾಂವ್ಕರ್ ಸ್ಪಷ್ಟಪಡಿಸಿದ್ದಾರೆ.

      ರಾಜ್ಯದಲ್ಲಿ ಪ್ರವಾಸೋದ್ಯಮ ಆರಂಭಿಸುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಜುಲೈ 2 ರಿಂದ ರಾಜ್ಯಕ್ಕೆ ಪ್ರವಾಸಿಗರು ಪ್ರವೇಶಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

      Goa To Open For Tourists From Tomorrow

      ಅಂದ್ಹಾಗೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೋವಾ ರಾಜ್ಯ ವಿಶೇಷ ಸ್ಥಾನ ಹೊಂದಿದೆ. ಆರ್ಥಿಕವಾಗಿ ರಾಜ್ಯಕ್ಕೆ ಪ್ರವಾಸೋದ್ಯಮ ಪ್ರಮುಖ ಪಾತ್ರವಹಿಸಿದೆ. ಈವರೆಗೂ ಗೋವಾದಲ್ಲಿ 1315 ಮಂದಿಗೆ ಕೊವಿಡ್ ತಗುಲಿದೆ. ಈ ಪೈಕಿ 716 ಕೇಸ್‌ಗಳು ಸಕ್ರಿಯವಾಗಿದೆ. 596 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+