ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಕೊರತೆ: ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಸಾವು

|
Google Oneindia Kannada News

ಪಣಜಿ, ಮೇ 14: ಆಮ್ಲಜನಕದ ಕೊರತೆಯಿಂದಾಗಿ ಗೋವಾದ ಕೋವಿಡ್ ಆಸ್ಪತ್ರೆಯಲ್ಲಿ 74 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಗೋವಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 74 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 13 ಮಂದಿ ಶುಕ್ರವಾರ(ಮೇ 14) ಬೆಳಗಿನ ಜಾವದಲ್ಲಿ ಮೃತಪಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ.

ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ 26 ಕೊರೊನಾ ಸೋಂಕಿತರ ಸಾವುಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ 26 ಕೊರೊನಾ ಸೋಂಕಿತರ ಸಾವು

ಗುರುವಾರ15 ಮಂದಿ ಸಾವನ್ನಪ್ಪಿದ್ದರು, ಬುಧವಾರ 20 ಮಂದಿ, ಮಂಗಳವಾರ 26 ಮಂದಿ ಪ್ರಾಣ ಕಳೆದುಕೊಂಡಿದ್ದರು.

Goas Oxygen Crisis Claims 74 Lives In Four Days

ಮೇ 1 ರಿಂದ 10ರವರೆಗೆ ರಾಜ್ಯವು ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಗದಿಪಡಿಸಿದ್ದ 110 ಮೆಟ್ರಿಕ್ ಟನ್‌ಗಳಲ್ಲಿ ಕೇವಲ 66.74 ಮೆಟ್ರಿಕ್ ಟನ್ ಆಮ್ಲಜನಕ ಪಡೆದಿರುವುದಾಗಿ ಕೇಂದ್ರಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೆಡಿಕಲ್ ಆಕ್ಸಿಜನ್ ಲಭ್ಯತೆಯ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ, ರಾಜ್ಯದಲ್ಲಿ ಸರಬರಾಜು ಕೊರತೆ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಗುರುವಾರ ಗೋವಾದಲ್ಲಿ ಸುಮಾರು 2,491 ಹೊಸ ಪ್ರಕರಣಗಳು ಪತ್ತೆಯಾಗಿವೆ. 63 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಕರಾವಳಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,30,130ಕ್ಕೆ ಏರಿಕೆಯಾಗಿದ್ದರೆ, ಸಾವನ್ನಪ್ಪಿದವರ ಸಂಖ್ಯೆ 1,937ಕ್ಕೆ ಏರಿಕೆಯಾಗಿದೆ.ಸುಮಾರು 95,240 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 32,953 ಸಕ್ರಿಯ ಪ್ರಕರಣಗಳಿವೆ.

English summary
At least 13 more patients died at the Goa Medical College and Hospital (GMCH) in the early hours of Friday, a day after 15 coronavirus patients had succumbed at the same facility in Panaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X