ಟಿಎಂಸಿ ತೊರೆದ ಗೋವಾದ ಮಾಜಿ ಶಾಸಕ ಲಾವೂ ಮಮ್ಲಾತ್‌ದಾರ್
ಪಣಜಿ, ಡಿಸೆಂಬರ್ 24: ಕೇವಲ ಮೂರು ತಿಂಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಗೋವಾದ ಮಾಜಿ ಶಾಸಕ ಲವೂ ಮಮ್ಲಾತ್‌ದಾರ್ ಪಕ್ಷ ತೊರೆದಿದ್ದಾರೆ. ಪಕ್ಷವು ಹಿಂದೂ ಹಾಗೂ ಕ್ರಿಶ್ಚಿಯನ್ನರ ನಡುವೆ ಭಿನ್ನಾಭಿಪ್ರಾಯ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೂ ಮುನ್ನ ಈ ಬೆಳವಣಿಗೆ ನಡೆದಿದ್ದು, ಭಾರತೀಯ ಜನತಾ ಪಕ್ಷ, ಆಮ್ ಆದ್ಮಿ ಪಕ್ಷ, ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಲಾವೂ ಮಮ್ಲಾತ್‌ದಾರ್ ಟಿಎಂಸಿಗೆ ಸೇರ್ಪಡೆಯಾಗಿದ್ದರು, ಟಿಎಂಸಿಗೆ ಸೇರಿದ ಗೋವಾದ ಪ್ರಥಮ ಸ್ಥಳೀಯ ನಾಯಕರು ಇವರಾಗಿದ್ದಾರೆ.

ಫೆಬ್ರವರಿ 2022ರಲ್ಲಿ ನಡೆಯಲಿರುವ ಗೋವಾ ಅಸ್ಸೆಂಬ್ಲಿ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಟಿಎಂಸಿಗೆ ಸೇರ್ಪಡೆಗೊಂಡ ರಾಜ್ಯದ ಮೊದಲ ಕೆಲವು ಸ್ಥಳೀಯ ನಾಯಕರಲ್ಲಿ ಒಬ್ಬರಾಗಿದ್ದರು.
ಟಿಎಂಸಿ ಚುನಾವಣೆಯ ನಂತರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮಹಿಳೆಯರ ಕಲ್ಯಾಣ ಯೋಜನೆ ಜಾರಿಗೊಳಿಸುವ ಹೆಸರಿನಲ್ಲಿ ಜನರ ಡೇಟಾವನ್ನು ಸಂಗ್ರಹಿಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಅವರ ರಾಜೀನಾಮೆ ಕುರಿತು ಮಾತನಾಡಿದ್ದ ಅವರು, ಪಶ್ಚಿಮ ಬಂಗಾಳದಲ್ಲಿ ವರ್ಷದ ಆರಂಭದಲ್ಲಿ ನಡೆದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯಿಂದ ಸಂಪೂರ್ಣವಾಗಿ ಪ್ರಭಾವಿತನಾಗಿ ಟಿಎಂಸಿಗೆ ಸೇರಿದ್ದೆ ಎಂದು ಹೇಳಿದ್ದಾರೆ.
ಟಿಎಂಸಿ ಜಾತ್ಯತೀತ ಪಕ್ಷ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಕಳೆದ 15-20 ದಿನಗಳಿಂದ ನಾನು ಗಮನಿಸುತ್ತಾ ಬಂದಂತೆ, ಟಿಎಂಸಿಯು ಬಿಜೆಪಿಗಿಂತ ಕೆಟ್ಟ ಪಕ್ಷ ಎಂದು ಹೇಳಿದ್ದಾರೆ .
ತಮ್ಮ ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ, ಕ್ರಿಶ್ಚಿಯನ್ ಮತಗಳು ಟಿಎಂಸಿಗೆ ಮತ್ತು ಹಿಂದೂ ಮತಗಳು ಎಂಜಿಪಿಗೆ ಹೋಗಬೇಕೆಂದು ಅವರು ಬಯಸುತ್ತಾರೆ... ಟಿಎಂಸಿ ಒಂದು ಕೋಮುವಾದಿ ಪಕ್ಷವಾಗಿದ್ದು, ಇದು ಜಾತ್ಯತೀತರನ್ನು ಕದಡಲು ಪ್ರಯತ್ನಿಸುತ್ತಿದೆ ಎಂದರು.
ಗೃಹ ಲಕ್ಷ್ಮೀ ಯೋಜನೆ ಮೂಲಕ ಜನರ ದತ್ತಾಂಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ 5 ಸಾವಿರ ರೂ, ನೀಡುವುದಾಗಿ ಪ್ರಮಾಣ ಮಾಡಿದ್ದ ಸರ್ಕಾರವು ಇದೀಗ ಕೇವಲ 500ರೂ. ನೀಡುತ್ತಿದೆ.












Click it and Unblock the Notifications