ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಕಾಂಗ್ರೆಸ್ ಬಿಕ್ಕಟ್ಟು; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ

|
Google Oneindia Kannada News

ಬೆಂಗಳೂರು,ಜು.11: ಗೋವಾ ಕಾಂಗ್ರೆಸ್ ಘಟಕದಲ್ಲಿನ ರಾಜಕೀಯ ಬಿಕ್ಕಟ್ಟು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. "ಬಿಜೆಪಿ ಪ್ರತಿ ಶಾಸಕರಿಗೆ 50 ಕೋಟಿ ರೂಪಾಯಿ ನೀಡುತ್ತಿದೆ" ಎಂದು ಕರ್ನಾಟಕದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಗೋವಾ ಕಾಂಗ್ರೆಸ್ ವಿಭಜನೆಯ ವದಂತಿಗಳು ಹೊರಬಿದ್ದ ಒಂದು ದಿನದ ನಂತರ ಸಿದ್ದರಾಮಯ್ಯ ಈ ಕುರಿತು ಹೇಳಿಕೆ ನೀಡಿದ್ದಾರೆ. "ಕಾಂಗ್ರೆಸ್ ಪಕ್ಷದ ಶಾಸಕ ಮೈಕಲ್ ಲೋಬೋರನ್ನು ಗೋವಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ. ಅವರು ದಿಗಂಬರ್ ಕಾಮತ್ ಹಾಗೂ ಬಿಜೆಪಿಯೊಂದಿಗೆ ಸಮನ್ವಯ ಸಾಧಿಸಿ ಪಕ್ಷಾಂತರಕ್ಕೆ ಸಂಚು ರೂಪಿಸಿದ್ದಾರೆ" ಎಂದು ಸಿದ್ದರಾಮಯ್ಯ ದೂರಿದರು.

ಬಿಜೆಪಿ ಸೇರಲು 40 ಕೋಟಿ ರುಪಾಯಿ ಆಫರ್: ಗೋವಾ ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆಬಿಜೆಪಿ ಸೇರಲು 40 ಕೋಟಿ ರುಪಾಯಿ ಆಫರ್: ಗೋವಾ ಕಾಂಗ್ರೆಸ್ ನಾಯಕನ ಸ್ಫೋಟಕ ಹೇಳಿಕೆ

"ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಗೋವಾದ ಪ್ರತಿಯೊಬ್ಬ ಶಾಸಕನಿಗೆ 50 ಕೋಟಿ ಕೊಡುತ್ತಿದ್ದಾರೆ. ಗೋವಾ ಮಾತ್ರವಲ್ಲ ಎಲ್ಲೆಂದರಲ್ಲಿ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಹಣ ನೀಡಿ ಶಾಸಕರನ್ನು ಖರೀದಿಸುತ್ತಾರೆ" ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕರ್ನಾಟಕದ ಶಾಸಕರು ಸಹ ಬಿಜೆಪಿ ಸೇರುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಎಂ. ಬಿ. ಪಾಟೀಲ್, "ಇದಕ್ಕೆ ಅವಕಾಶವೇ ಇಲ್ಲ. ವಾಸ್ತವವಾಗಿ ಬಿಜೆಪಿ ಮತ್ತು ಜೆಡಿಎಸ್‌ನವರು ಕಾಂಗ್ರೆಸ್‌ಗೆ ಸೇರುತ್ತಾರೆ" ಎಂದರು.

ಕಾಂಗ್ರೆಸ್ ಪಕ್ಷದ ಗೋವಾ ಘಟಕದಲ್ಲಿ ಪಕ್ಷಾಂತರ ಸಂಚು ರೂಪಿಸಲಾಗಿದೆ ಎಂಬ ಆರೋಪದ ನಂತರ, ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಸೋಮವಾರ ಮಾತನಾಡಿ, "ಪಕ್ಷದ ರಾಜ್ಯ ಉಸ್ತುವಾರಿ ದಿನೇಶ್ ಗುಂಡೂರಾವ್ ಮಾತುಗಳು ತಮಗೆ ಆಳವಾಗಿ ನೋವುಂಟುಮಾಡಿದೆ" ಎಂದು ಹೇಳಿದ್ದಾರೆ.

ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ

ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ

"ಮೈಕಲ್ ಲೋಬೋ ಜೊತೆಗೆ ಕಾಮತ್ ಬಿಜೆಪಿಯೊಂದಿಗೆ ಸೇರಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ" ಎಂದು ದಿನೇಶ್‌ ಗುಂಡೂರಾವ್‌ ಆರೋಪಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ದಿಗಂಬರ ಕಾಮತ್‌ ಅವರು ಹೇಳಿಕೆಗಳನ್ನು ನೀಡಿದ್ದಾರೆ.

"ನಾನು ದಿನೇಶ್ ಗುಂಡೂರಾವ್ (ಕಾಂಗ್ರೆಸ್ ಗೋವಾ ಉಸ್ತುವಾರಿ) ಅವರ ವಿಡಿಯೋವನ್ನು ನೋಡಿದೆ. ಅವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇದು ನನಗೆ ಹೇಳಲಾಗದಷ್ಟು ನೋವುಂಟುಮಾಡಿದೆ. ಶನಿವಾರ ರಾತ್ರಿ ಇಲ್ಲಿ ದಿನೇಶ್ ಇದ್ದರು. ಆಗ ನಾನು ಅವರಿಗೆ ನನ್ನ ನಿಲುವನ್ನು ಹೇಳಿದ್ದೇನೆ" ಎಂದು ಅವರು ಹೇಳಿದರು.

ಗೋವಾದಲ್ಲೂ ನಡೆಯುತ್ತಿದ್ಯಾ 'ಆಪರೇಷನ್ ಕಮಲ': ಬಿಜೆಪಿ ಲೆಕ್ಕಾಚಾರ ಏನು?ಗೋವಾದಲ್ಲೂ ನಡೆಯುತ್ತಿದ್ಯಾ 'ಆಪರೇಷನ್ ಕಮಲ': ಬಿಜೆಪಿ ಲೆಕ್ಕಾಚಾರ ಏನು?

ನಾನು ಯಾವುದೇ ಜವಾಬ್ದಾರಿ ಹೊತ್ತುಕೊಳ್ಳಲ್ಲ

ನಾನು ಯಾವುದೇ ಜವಾಬ್ದಾರಿ ಹೊತ್ತುಕೊಳ್ಳಲ್ಲ

"ಚುನಾವಣೆ ನಂತರ ನೀವು ನನ್ನನ್ನು ಅವಮಾನಿಸಿದ ಕಾರಣ, ನನ್ನ ಕಾರ್ಯಕರ್ತರು ಕೋಪಗೊಂಡಿದ್ದಾರೆ. ನನಗೂ ತೀವ್ರ ನೋವಾಗಿದೆ. ಹಾಗಾಗಿ ಸದ್ಯಕ್ಕೆ ನಾನು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸಲು ಹೋಗುವುದಿಲ್ಲ, ನಾನು ತಯಾರಿ ನಡೆಸಿ ಬಳಿಕ ಹೇಳುತ್ತೇವೆ. ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿಗಳು 2017ರಿಂದ ಹರಡುತ್ತಿವೆ. ತಾನು ಬಿಜೆಪಿ ಹೋಗಬೇಕೆಂದಿದ್ದರೆ ಹೋಗುತ್ತಿದ್ದೆ. ತಾನು ಕಾಂಗ್ರೆಸ್‌ಗಾಗಿಯೇ ಹೋರಾಡುತ್ತಿದ್ದೇನೆ. ಆದರೂ ಪಕ್ಷವು ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಬದಲಾಯಿಸಿದೆ" ಎಂದು ದಿಗಂಬರ್ ಕಾಮತ್ ಹೇಳಿದರು.

ಪಕ್ಷದ ನೇತೃತ್ವ ವಹಿಸಿಕೊಂಡು ಮುನ್ನಡೆಸಿದ್ದೇನೆ

ಪಕ್ಷದ ನೇತೃತ್ವ ವಹಿಸಿಕೊಂಡು ಮುನ್ನಡೆಸಿದ್ದೇನೆ

"ನಾನು ಹೋಗಬೇಕೆಂದು ಬಯಸಿದರೆ, ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾನು ಪಕ್ಷದ ನೇತೃತ್ವ ವಹಿಸಿಕೊಂಡು ಮುನ್ನಡೆಸಿದೆ. ನಾನು ಎಲ್ಲಾ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ. ಫಲಿತಾಂಶಗಳು ಬಂದಾಗ ಅವರು ನನ್ನನ್ನು ಮುಖ್ಯಸ್ಥಾನದಿಂದ ಬದಲಾಯಿಸಿದರು. ನನಗೆ ಗುಂಡೂರಾವ್‌ ಅವರು ಯಾಕೆ ಇಂತಹ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಹಾಗಾಗಿ ನನ್ನ ಕಾರ್ಯಕ್ಷಮತೆಯನ್ನು ನೀವು ನೋಡಬಹುದು" ಎಂದು ಕಾಮತ್ ಸ್ಪಷ್ಟಪಡಿಸಿದರು.

ಬಿಜೆಪಿಯಿಂದ ವಿಭಜನೆಗೆ ಪ್ರಯತ್ನ

ಬಿಜೆಪಿಯಿಂದ ವಿಭಜನೆಗೆ ಪ್ರಯತ್ನ

ಪ್ರಮುಖವಾಗಿ ಪಕ್ಷಾಂತರಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮೈಕಲ್ ಲೋಬೋರನ್ನು ಗೋವಾ ಕಾಂಗ್ರೆಸ್ ಭಾನುವಾರ ವಜಾಗೊಳಿಸಿದೆ. ಬಿಜೆಪಿ 2/3 ಭಾಗದಷ್ಟು ವಿಭಜನೆಗೆ ಪ್ರಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಪಕ್ಷದ ಶಾಸಕರಿಗೆ ದೊಡ್ಡ ಪ್ರಮಾಣದ ಹಣವನ್ನು ನೀಡುತ್ತದೆ ಎಂದು ಆರೋಪಿಸಿದೆ.

English summary
Karnataka opposition leader Siddaramaiah alleged that BJP offocers Rs 50 crore to each Congress MLA's in Goa. Congress unit in Goa facing political crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X