ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ 26 ಕೊರೊನಾ ಸೋಂಕಿತರ ಸಾವು

ಪಣಜಿ, ಮೇ 11: ಗೋವಾದ ಆಸ್ಪತ್ರೆಯಲ್ಲಿ 26 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಆಮ್ಲಜನಕ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಗೋವಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಮುಂಜಾನೆ ಸಾವನ್ನಪ್ಪಿದ್ದಾರೆ ಮತ್ತು ನಿಖರವಾದ ಕಾರಣ ತಿಳಿಯಲು ಹೈಕೋರ್ಟ್‌ನಿಂದ ತನಿಖೆಗೆ ಕೋರಿರುವುದಾಗಿ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಂಗಳವಾರ ಹೇಳಿದ್ದಾರೆ.

ಬೆಳಿಗ್ಗೆ 2 ರಿಂದ 6 ರವರೆಗೆ ಈ ಸಾವುನೋವುಗಳು ಸಂಭವಿಸಿವೆ ಎಂದು ಅವರು ಹೇಳಿದರು, ಆದರೆ ಇದರ ಹಿಂದಿನ ಕಾರಣ ಇನ್ನೂ ಖಚಿತವಾಗಿಲ್ಲ.

26 Covid Patients Dies At Goa Hospital

ಸೋಮವಾರದವರೆಗೆ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ 1,200 ಜಂಬೋ ಸಿಲಿಂಡರ್‌ಗಳಷ್ಟಿದ್ದು , ಅದರಲ್ಲಿ 400 ಮಾತ್ರ ಸರಬರಾಜು ಮಾಡಲಾಗಿದೆ ಎಂದು ರಾಣೆ ಹೇಳಿದರು. "ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಿದ್ದರೆ, ಆ ವ್ಯತ್ಯಾಸವನ್ನು ಹೇಗೆ ನಿವಾರಿಸುವುದು ಎಂಬುದರ ಕುರಿತು ಚರ್ಚೆಯನ್ನು ನಡೆಸಬೇಕು" ಎಂದು ಅವರು ಹೇಳಿದರು.

ಜಿಎಂಸಿಎಚ್‌ನಲ್ಲಿ ಕೋವಿಡ್19 ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರ ನೇಮಿಸಿರುವ ನೋಡಲ್ ಅಧಿಕಾರಿಗಳ ಮೂರು ಸದಸ್ಯರ ತಂಡವು ಸಿಎಂಗೆ ಸಮಸ್ಯೆಗಳ ಬಗ್ಗೆ ಅದರ ಆಳ ಅಗಲದ ಬಗ್ಗೆ ವಿವರ ನೀಡಬೇಕು. ಹಿಂದಿನ ದಿನ, ಪಿಪಿಇ ಕಿಟ್ ಧರಿಸಿದ ಸಿಎಂ ಜಿಎಂಸಿಎಚ್‌ನ ಕೋವಿಡ್ 19 ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಭೇಟಿಯಾದರು.

ಜಿಎಂಸಿಎಚ್‌ಗೆ ಭೇಟಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ಜಿಎಂಸಿಎಚ್‌ನಲ್ಲಿನ ಕೋವಿಡ್ ವಾರ್ಡ್‌ಗಳಿಗೆ ಅದರ ಪೂರೈಕೆಯ ನಡುವಿನ ವ್ಯತ್ಯಾಸ ರೋಗಿಗಳಿಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡಿರಬಹುದು ಎಂದು ಹೇಳಿದ್ದಾರೆ.

ಸೋಮವಾರದವರೆಗೆ ಜಿಎಂಸಿಎಚ್‌ನಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿನ ಕೊರತೆಯನ್ನು ಒಪ್ಪಿಕೊಂಡಿದ್ದಾರೆ. ಈ ಸಾವುಗಳ ಹಿಂದಿನ ಕಾರಣಗಳನ್ನು ಹೈಕೋರ್ಟ್ ತನಿಖೆ ಮಾಡಬೇಕು.

ಜಿಎಂಸಿಎಚ್‌ಗೆ ಆಮ್ಲಜನಕದ ಪೂರೈಕೆಯ ಬಗ್ಗೆ ಹೈಕೋರ್ಟ್ ಸಹ ಮಧ್ಯಪ್ರವೇಶಿಸಿ ಶ್ವೇತಪತ್ರವನ್ನು ಸಿದ್ಧಪಡಿಸಬೇಕು, ಇದು ವಿಷಯಗಳನ್ನು ಸರಿಯಾಗಿ ನಿರೂಪಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ಸಚಿವರು ಜಿಎಂಸಿಎಚ್‌ಗೆ ಭೇಟಿ ನೀಡಿದ ನಂತರ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+