'ಕುರುಡು' ತ್ರಿಕೋನ ಪ್ರೇಮ ಅಂತ್ಯವಾಗಿದ್ದು ಹತ್ಯೆಯಿಂದ
ನೋಯಿಡಾ, ಸೆಪ್ಟೆಂಬರ್ 10: ಒಂದೇ ಊರಿನ ಗೆಳೆಯರಾದ ರಹೀಮ್ ಮತ್ತು ಇಸ್ರಫಿಲ್ ನಾಲ್ಕು ವರ್ಷದ ಹಿಂದೆ ಬಿಹಾರದ ಕಟಿಹಾರ್-ದೆಹಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಅದೇ ಬೋಗಿಯಲ್ಲಿ ಕುಳಿತಿದ್ದ 22 ವರ್ಷದ ಸಾಯಿರಾ ಪರಿಚಯವಾಯಿತು. ಫೋನ್ ನಂಬರ್‌ಗಳು ವಿನಿಯಮಯವಾದವು. ಅಲ್ಲಿಂದ ಶುರುವಾಗಿದ್ದು ತ್ರಿಕೋನ ಪ್ರೇಮಕಥೆ. ಈ ಪ್ರೇಮಕಥೆ ಭೀಕರ ಕೊಲೆಯೊಂದಿಗೆ ಅಂತ್ಯಕಂಡಿದೆ.
ರಹೀಮ್ ಬಿಹಾರದಲ್ಲಿ ಕೆಲಸ ಮಾಡುತ್ತಿದ್ದರೆ, ಇಸ್ರಫಿಲ್ ನೋಯಿಡಾದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾಯಿರಾ ಇಬ್ಬರ ಜತೆಗೂ ಸಂಬಂಧವಿರಿಸಿಕೊಂಡಿದ್ದಳು. ಎರಡು ವರ್ಷದ ಹಿಂದೆ ಇಸ್ರಫಿಲ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಯಿತು.

ಆತನ ಮದುವೆ ಬಳಿಕ ಸಾಯಿರಾ ಈ ಸಂಬಂಧವನ್ನು ಮುರಿದುಕೊಳ್ಳಲು ಪ್ರಯತ್ನಿಸಿದಳು. ಆದರೆ, ಇಸ್ರಫಿಲ್ ತನ್ನೊಟ್ಟಿಗೆ ಸಂಬಂಧವನ್ನು ಮುಂದುವರಿಸುವಂತೆ ಆಕೆಗೆ ಬಲವಂತಮಾಡತೊಡಗಿದ. ಈ ನಡುವೆ ಸಾಯಿರಾ ಮತ್ತು ರಹೀಮ್ ಹತ್ತಿರವಾಗಿದ್ದರು.
ತನ್ನನ್ನು ಭೇಟಿಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಇಸ್ರಫಿಲ್, ತಮ್ಮಿಬ್ಬರ ಸಂಬಂಧದ ಬಗ್ಗೆ ರಹೀಮ್‌ಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ. ಇದನ್ನು ಸಾಯಿರಾ, ರಹೀಮ್‌ಗೆ ತಿಳಿಸಿದ್ದರು.
ಇಸ್ರಫಿಲ್‌ಗೊಂದು ಗತಿ ಕಾಣಿಸುವ ಬಗ್ಗೆ ಇಬ್ಬರೂ ಚರ್ಚಿಸಿ ತೀರ್ಮಾನ ತೆಗೆದುಕೊಂಡರು. ಊರಿನಿಂದ ರಹೀಮ್ ಸೆಪ್ಟೆಂಬರ್ 2ರಂದು ನೋಯಿಡಾಕ್ಕೆ ಬಂದಿಳಿದ. ಆತನ ಸೂಚನೆಯಂತೆ ಹರಿತವಾದ ಚಾಕು ಖರೀದಿಸಿದ್ದಳು.
ಬಳಿಕ ಸಂಜೆ ವೇಳೆಗೆ ಇಸ್ರಫಿಲ್‌ಗೆ ಕರೆ ಮಾಡಿದ ಸಾಯಿರಾ, ತನ್ನನ್ನು ಭೇಟಿಯಾಗುವಂತೆ ಹೇಳಿದಳು. ಆಕೆಯ ನಯವಾದ ಮಾತುಗಳನ್ನು ನಂಬಿದ ಇಸ್ರಫಿಲ್, ಆಟೋದಲ್ಲಿ ಕೂರಿಸಿಕೊಂಡು ನೋಯಿಡಾ ಎಕ್ಸ್‌ಪ್ರೆಸ್ ವೇ ಕಡೆ ಹೊರಟ. ಅವರನ್ನು ಮತ್ತೊಂದು ಬಾಡಿಗೆ ಆಟೋದಲ್ಲಿ ರಹೀಮ್ ಹಿಂಬಾಲಿಸಿದ್ದ.
ಕತ್ತಲಿನ ಪ್ರದೇಶಕ್ಕೆ ಬಂದ ಬಳಿಕ ಆಟೋ ನಿಲ್ಲಿಸುವಂತೆ ಸೂಚಿಸಿದ ಸಾಯಿರಾ ತನ್ನ ದುಪ್ಪಟ್ಟಾವನ್ನು ಇಸ್ರಫಿಲ್ ಕಣ್ಣಿಗೆ ಕಟ್ಟಿದಳು. ಈ ವಂಚನೆ ಅರಿಯದ ಆತ ಆಕೆ ಹೇಳಿದಂತೆಯೇ ಕೇಳಿದ. ಬಳಿಕ ಚಾಕು ಹೊರತೆಗೆದ ಸಾಯಿರಾ ಆತನ ಕತ್ತು ಸೀಳಿದಳು.
ಸ್ವಲ್ಪ ದೂರದಲ್ಲಿ ಆಟೋದಿಂದ ಇಳಿದು ನಡೆದುಕೊಂಡು ಬಂದ ರಹೀಮ್, ತಾನೂ ಚಾಕು ತೆಗೆದುಕೊಂಡು ಇಸ್ರಫಿಲ್‌ಗೆ ಹಲವು ಬಾರಿ ಇರಿದ. ಬಳಿಕ ಇಟ್ಟಿಗೆಯಿಂದ ಆತನ ತಲೆಯನ್ನು ಜಜ್ಜಿ ಹಾಕಿದ. ನಂತರ ಇಸ್ರಫಿಲ್‌ನ ಆಟೋ ತೆಗೆದುಕೊಂಡು ಇಬ್ಬರೂ ವಾಪಸ್ಸಾಗಿದ್ದರು.
ಸಾಯಿರಾ ದ್ವಾರಕಾಗೆ ಮರಳಿದರೆ, ರಹೀಮ್ ವಿಮಾನದಲ್ಲಿ ಬಿಹಾರಕ್ಕೆ ಹಿಂದಿರುಗಿದ್ದ. ಇಸ್ರಫಿಲ್ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿ ಮರುದಿನ ದೂರು ನೀಡಿದ್ದಳು.
ಮೃತದೇಹ ದೊರೆತಾಗ ಕಣ್ಣಿಗೆ ಕಟ್ಟಿದ್ದ ಬಟ್ಟೆಯಿಂದಾಗಿ ಆ ಕೊಲೆಯ ಹಿಂದೆ ಮಹಿಳೆಯಿರುವುದು ಗೊತ್ತಾಗಿತ್ತು. ಸ್ಥಳದಲ್ಲಿ ಇಸ್ರಫಿಲ್‌ನ ಪರ್ಸ್, ಆತನನ್ನು ಕೊಲ್ಲಲು ಬಳಸಿದ್ದ ಚಾಕು ಕೂಡ ಸಿಕ್ಕಿತ್ತು. ತನಿಖೆ ಆರಂಭಿಸಿದ ಎಕ್ಸ್‌ಪ್ರೆಸ್ ವೇ ಪೊಲೀಸರಿಗೆ ಅದೇ ಸ್ಥಳದಿಂದ ಹಿಂದಿನ ರಾತ್ರಿ ಇನ್ನೂ ಎರಡು ಮೊಬೈಲ್ ಪೋನ್‌ಗಳು ಕಾರ್ಯನಿರ್ವಹಿಸಿದ್ದು ಪತ್ತೆಯಾಗಿತ್ತು.
ಅದನ್ನು ಬೆನ್ನತ್ತಿದ ಪೊಲೀಸರು ಸೆಪ್ಟೆಂಬರ್ 6ರಂದು ಕಟಿಹಾರ್‌ಗೆ ತೆರಳಿದರು. ಎರಡು ದಿನದ ಹುಡುಕಾಟದ ಬಳಿಕ ರಹೀಮ್ ಸಿಕ್ಕಿಬಿದ್ದ. ಬಳಿಕ ಸಾಯಿರಾಳನ್ನೂ ಬಂಧಿಸಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications