3,700 ಕೆ.ಜಿ. ಸ್ಫೋಟಕ ಬಳಸಿ ನೊಯ್ಡಾದ 40 ಅಂತಸ್ತಿನ ಸೂಪರ್‌ಟೆಕ್ ಅವಳಿ ಕಟ್ಟಡಗಳ ಕೆಡವಲು ಸಿದ್ಧತೆ
ನೋಯ್ಡಾ, ಆಗಸ್ಟ್ 24: ಉತ್ತರ ಪ್ರದೇಶದ ನೋಯ್ಡಾ ಸೂಪರ್‌ಟೆಕ್‌ನ ಅಕ್ರಮ ಅವಳಿ ಗೋಪುರಗಳನ್ನು ಆಗಸ್ಟ್ 28 ರಂದು ನೆಲಸಮಗೊಳಿಸಲು ನೋಯ್ಡಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅತಿದೊಡ್ಡ ಕಟ್ಟಡಗಳನ್ನು ಕೆಡವಲು ಹಲವು ದಿನಗಳಿಂದಲೇ ಸಿದ್ಧತೆ ಆರಂಭವಾಗಿದೆ. ಕಟ್ಟಡ ನೆಲಸಮ ಕಾರ್ಯಾಚರಣೆ ವೇಳೆ ಯಾವುದೇ ಅವಘಡ ಸಂಭವಿಸದಂತೆ ನೋಯ್ಡಾ ಪ್ರಾಧಿಕಾರ ಅಧಿಕಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಆಗಸ್ಟ್ 28ರಂದು ನೋಯ್ಡಾ ಸೆಕ್ಟರ್ 93 ಎ ಹಾರಾಟ ನಿಷೇಧ ವಲಯ ಎಂದು ನೋಯ್ಡಾ ಪ್ರಾಧಿಕಾರ ಅಧಿಕಾರಿಗಳು ಘೋಷಿಸಿದ್ದಾರೆ.
ಆಗಸ್ಟ್ 28ರಂದು ಡ್ರೋನ್‌ಗಳಿಗೆ ಸಹ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸರಿಂದ ಸಾಕಷ್ಟು ಮುಂಚಿತವಾಗಿ ಅಗತ್ಯ ಅನುಮತಿಗಳನ್ನು ಪಡೆದುಕೊಂಡ ನಂತರ ಸ್ಫೋಟದ ವಲಯದ ಹೊರಗೆ ಮಾತ್ರ ಡ್ರೋನ್‌ಗಳ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ.
ಅಕ್ಕಪಕ್ಕದ ಸೊಸೈಟಿಗಳಾದ ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಅನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಡವಲು ಉದ್ದೇಶಿಸಿರುವ ಅವಳಿ ಗೋಪುರಗಳ ಸುತ್ತಲೂ ವಿಶೇಷ ವಲಯವನ್ನು ಗುರುತಿಸಲಾಗುವುದು, ಈ ಪ್ರದೇಶದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸುವ ಸಮಯದಲ್ಲಿ ಯಾವುದೇ ವ್ಯಕ್ತಿಗೆ, ಪ್ರಾಣಿಗಳಿಗೂ ಕೂಡ ಪ್ರವೇಶ ಇರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

100 ಮೀಟರ್‌ಗಿಂತ ಹೆಚ್ಚು ಎತ್ತರದ ಕಟ್ಟಡಗಳು
ಆಗಸ್ಟ್ 28ರ ಭಾನುವಾರ ಮಧ್ಯಾಹ್ನ 2.30ಕ್ಕೆ ನೋಯ್ಡಾ ಅವಳಿ ಗೋಪುರಗಳ ಧ್ವಂಸ ಕಾರ್ಯ ನಡೆಯಲಿದೆ. ಗೋಪುರಗಳು 100 ಮೀಟರ್‌ಗಿಂತ ಹೆಚ್ಚು ಎತ್ತರವಾಗಿವೆ.
40 ಅಂತಸ್ತುಗಳ ಈ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಲು ಸುಪ್ರೀಂಕೋರ್ಟ್ ಆಗಸ್ಟ್ 28ರಂದು ದಿನಾಂಕ ನಿಗದಿ ಮಾಡಿದೆ. ಸುಪ್ರೀಂ ನಿರ್ದೇಶನದಂತೆ ನೋಯ್ಡಾ ಪ್ರಾಧಿಕಾರ ಈಗ ಕಟ್ಟಡಗಳನ್ನು ಕೆಡವಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ
ಅವಳಿ ಅಂತಸ್ತಿನ 40 ಅಂತಸ್ತಿನ ಟವರ್ ಗಳನ್ನು ನಿಯಮ ಉಲ್ಲಂಘಸಿ ಕಾನೂನು ಬಾಹಿರವಾಗಿ ಕಟ್ಟಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆಗಸ್ಟ್ 21ರಂದು ಕಟ್ಟಡ ನೆಲಸಮಗೊಳಿಸಲು ಸೂಚನೆ ನೀಡಿತ್ತು.
ಅವದಿ ವಿಸ್ತರಣೆ ಮಾಡುವಂತೆ ನೋಯ್ಡಾ ಪ್ರಾಧಿಕಾರ ಮನವಿ ಸಲ್ಲಿಸಿತ್ತು, ಮನವಿ ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಕಟ್ಟಡ ನೆಲಸಮ ಮಾಡಲು ಆಗಸ್ಟ್ 28ಕ್ಕೆ ದಿನಾಂಕ ನಿಗದಿ ಮಾಡಿದೆ. ಯಾವುದೇ ತಾಂತ್ರಿಕ ದೋಷಗಳು ಹಾಗೂ ಹವಾಮಾನ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 4ರವರೆಗೆ ನೆಲಸಮ ಕಾರ್ಯಾಚರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಗಡುವು ನೀಡಿದೆ.

ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ
ಅವಳಿ ಕಟ್ಟಡಗಳ ಮುಂಭಾಗದಲ್ಲಿ 450 ಮೀಟರ್ ಪ್ರದೇಶದಲ್ಲಿ ಯಾರಿಗೂ ಪ್ರವೇಶಿಸಲು ಅನುಮತಿ ಇರುವುದಿಲ್ಲ ಎಂದು ಹೇಳಿದೆ. ಆ ವ್ಯಾಪ್ತಿಯಲ್ಲಿ ಬರುವ ರಸ್ತೆ ಮತ್ತು ಉದ್ಯಾನವನಗಳಲ್ಲೂ ಯಾರೂ ಇಲ್ಲದಂತೆ ನೋಡಿಕೊಳ್ಳಲು ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಾರೆ.
ಅವಳಿ ಕಟ್ಟಡಗಳ ಇತರೆ ಭಾಗಗಳಲ್ಲಿ 250 ಮೀಟರ್ ವ್ಯಾಪ್ತಿಯವರೆಗೆ ನಿಷೇಧಿತ ವಲಯ ಎಂದು ಪರಿಗಣಿಸಲಾಗುವುದು ಎಂದು ಗೌತಮ್ ಬುದ್ಧ ನಗರದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಪ್ರಧಾನ ಕಛೇರಿ) ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.

ಕಟ್ಟಡ ನೆಲಸಮಗೊಳಿಸಲು 3,700 ಕೆ.ಜಿ. ಸ್ಫೋಟಕ ಬಳಕೆ
ಬೃಹತ್ ಕಟ್ಟಡಗಳನ್ನು ನೆಲಸಮಗೊಳಿಸಲು ಎರಡು ಕಟ್ಟಗಳಲ್ಲಿ 3,700 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಆಗಸ್ಟ್ 28ರಂದು ಮಧ್ಯಾಹ್ನ 2.15 ರಿಂದ 2.45 ರವರೆಗೆ ಸ್ಫೋಟ ಕಾರ್ಯಾಚರಣೆ ನಡೆಸಲಿದ್ದು, ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ.
ಅಪೆಕ್ಸ್ ಮತ್ತು ಸೆಯಾನ್ ಟವರ್‌ಗಳ ಧ್ವಂಸದಿಂದ 35,000 ಕ್ಯೂಬಿಕ್ ಮೀಟರ್ ಭಗ್ನಾವಶೇಷ ಉಳಿಯಲಿದೆ. ಅದರಲ್ಲಿ ಹೆಚ್ಚಿನ ಭಾಗವನ್ನು ಟವರ್‌ಗಳ ನೆಲಮಾಳಿಗೆಯಲ್ಲಿ ಇರಿಸಲಾಗುವುದು ಮತ್ತು ಉಳಿದ ಅವಶೇಷಗಳನ್ನು ನೋಯ್ಡಾದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications