ದೆಹಲಿಯ ಫ್ಲ್ಯಾಟ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ದೆಹಲಿಯ ಫ್ಲ್ಯಾಟ್ ವೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮೂವತ್ತೆಂಟು ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯೊಂದಿಗೆ ಇದ್ದ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆಯಿದ್ದು, ಆತ ನಾಪತ್ತೆಯಾಗಿದ್ದಾನೆ

ನವದೆಹಲಿ, ಮೇ 6: ಮೂವತ್ತೆಂಟು ವರ್ಷದ ಮಹಿಳೆಯ ಶವವೊಂದು ಬೆತ್ತಲೆ ಸ್ಥಿತಿಯಲ್ಲಿ ಪಶ್ಚಿಮ ತಿಲಕ್ ನಗರ್ ನ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್ ನಗರ್ ನ ಫ್ಲ್ಯಾಟ್ ನಲ್ಲಿ ಮಹಿಳೆಯ ದೇಹ ಇದೆ ಎಂಬ ಮಾಹಿತೆ ಬೆಳಗ್ಗೆ ಹೊತ್ತಿಗೆ ಪೊಲೀಸರಿಗೆ ಸಿಕ್ಕಿದೆ.

ಮಹಿಳೆಯ ದೇಹವನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಆಕೆಯ ದೇಹದ ಮೇಲೆ ಯಾವುದೇ ಬಟ್ಟೆಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯೊಂದಿಗೆ ಲಿವ್ ಇನ್ ರಿಲೇಷನ್ ಷಿಪ್ ಇದ್ದ, ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದ ವ್ಯಕ್ತಿ ತಲೆ ತಪ್ಪಿಸಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗಾಗಿ ಆಕೆ ತರಬೇತಿ ಕೇಂದ್ರವೊಂದನ್ನು ನಡೆಸುತ್ತಿದ್ದರು.[ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!]

Woman's Naked Body Found In Delhi's Tilak Nagar

ಆಕೆಯ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ ಮತ್ತು ಆಕೆಯ ಮುಖದ ಮೇಲೆ ಗಾಯಗಳಾಗಿವೆ. ಆಕೆ ಮೊದಲ ಪತಿಯಿಂದ ಬೇರ್ಪಟ್ಟಿದ್ದರು. ಆ ದಾಂಪತ್ಯಕ್ಕೆ ಒಂದು ಗಂಡು ಮಗು ಇದೆ. ಆಕೆ ಸದ್ಯಕ್ಕೆ ವ್ಯಕ್ತಿಯೊಬ್ಬನ ಜತೆ ವಾಸವಿದ್ದರು. ಆತನೊಬ್ಬ ಆಸ್ತಿ ಮಾರಾಟಗಾರ. ಆತನ ಮೇಲೆ ಇಪ್ಪತ್ತು ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.[ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿ ಹತ್ಯೆ]

ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸಲಾಗಿದ್ದು, ಸಾವಿಗೆ ಕಾರಣವನ್ನು ಕಂಡು ಹಿಡಿಯಬೇಕಿದೆ. ಮತ್ತು ಸಾವಿಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆಯೇ ಎಂದು ಕೂಡ ತಿಳಿದುಕೊಳ್ಳಲಾಗುವುದು ಎಂದು ಆತ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+