ಟ್ವೀಟ್ ಎಚ್ಚರಿಕೆ: ಕರ್ನಾಟಕದಲ್ಲಿ ಬಿಎಸ್‌ವೈ ಇಲ್ಲದೇ ಬಿಜೆಪಿಗೆ ಅಧಿಕಾರವಿಲ್ಲ!

ನವದೆಹಲಿ, ಜುಲೈ 21: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ವಿಚಾರ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಯಕತ್ವ ಬದಲಾವಣೆ ಸುದ್ದಿಯ ನಡುವೆ ತೀವ್ರ ಸಂಚಲನ ಸೃಷ್ಟಿಸುವಂತಾ ಬೆಳವಣಿಗೆಗಳು ನಡೆಯುತ್ತಿವೆ.

Recommended Video

      Subramanian : BSY ಚಮಚಾಗಿರಿ ಮಾಡಿದ್ದಿದ್ರೆ ಸಿಎಂ ಸ್ಥಾನ ಉಳಿಯುತ್ತಿತ್ತು!! | Oneindia Kannada

      ರಾಜ್ಯದ ಲಿಂಗಾಯತ ಸಮುದಾಯದ ನಾಯಕರು, ಮಠಾಧೀಶರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಕೇಂದ್ರದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಬಿಜೆಪಿ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆಯ ಟ್ವೀಟ್ ಮಾಡಿದ್ದಾರೆ.

       Without CM B S Yediyurappa BJP Cant Get Power In The Karnataka, Subramanian Swamy Tweet

      "ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇ ಬಿ ಎಸ್ ಯಡಿಯೂರಪ್ಪ. ಹಿಂಬಾಲಕರಂತೆ ನಡೆದುಕೊಳ್ಳದ್ದನ್ನು ಸಹಿಸದ ಕೆಲವರು ಅವರನ್ನು ತೆಗೆದು ಹಾಕುವುದುಕ್ಕೆ ಸಂಚು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಇಲ್ಲದೇ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಪಕ್ಷ ಬಿಟ್ಟು ಹೋಗಿದ್ದ ಅವರು ವಾಪಸ್ ಆದ ನಂತರವೇ ರಾಜ್ಯದಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಯಿತು. ಅದು ತಿಳಿದಿದ್ದರೂ ಕೂಡ ಈ ಹಿಂದಿನ ತಪ್ಪನ್ನೇ ಏಕೆ ಪುನರಾವರ್ತಿಸಬೇಕು," ಎಂದು ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ ಮಾಡಿದ್ದಾರೆ.

      ಬಿಜೆಪಿ ಹೈಕಮಾಂಡ್ ನಾಯಕರಿಗೆ ಮಠಾಧೀಶರ ಎಚ್ಚರಿಕೆ:

      ಕರ್ನಾಟಕದಲ್ಲಿ ಬಿ ಎಸ್ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಈಗಾಗಲೇ ಮಠಾಧೀಶರು ಬಿಜೆಪಿ ಹೈಕಮಾಂಡ್ ನಾಯಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಮಠಾಧೀಶರು ಒಗ್ಗೂಡಿಕೊಂಡು ಬಿ ಎಸ್ ಯಡಿಯೂರಪ್ಪ ಪರ ಧ್ವನಿಗೂಡಿಸುವುದಾಗಿ ಹೇಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+