ದೆಹಲಿಯಲ್ಲಿ ಬಿಎಸ್‌ಪಿ ಶಾಸಕನ ಪತ್ನಿ ಕೊಲೆ

murder
ನವದೆಹಲಿ, ಅ.9 : ಹಾಡುಹಗಲೇ ನವದೆಹಲಿಯಲ್ಲಿ ಬಿಎಸ್‌ಪಿ ಶಾಸಕ ಪತ್ನಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್ ಕ್ಷೇತ್ರದ ಶಾಸಕ ಅಲೀಂ ಖಾನ್ ಅವರ ಪತ್ನಿ ರೆಹಾನಾ (40) ಕೊಲೆಯಾದ ದುರ್ದೈವಿ. ಇವರು ದೆಹಲಿಯ ಜಫಾರಾಬಾದ್ ನಲ್ಲಿ ವಾಸಿಸುತ್ತಿದ್ದರು.

ಬುಧವಾರ ಬೆಳಗ್ಗೆ ಇವರ ಮನೆಗೆ ಆಗಮಿಸಿದ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ರೆಹಾನಾ ಅವರನ್ನು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಅಲೀಂ ಖಾನ್ ಅವರು ಹಜ್ ಯಾತ್ರೆಗೆ ತೆರಳಿದ್ದರು. ಆದ್ದರಿಂದ ಘಟನೆ ನಡೆಯವು ಸಮಯದಲ್ಲಿ ಅವರು ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಲೀಂ ಖಾನ್ ರೌಡಿಯಾಗಿದ್ದು ಅವರ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಪರಿಚಿತರು ಆಗಮಿಸಿದರೆ ಮಹಿಳೆ ಮನೆಯ ಬಾಗಿಲು ತೆರೆಯುತ್ತಿರಲಿಲ್ಲ. ಆದ್ದರಿಂದ ಇದು ಪರಿಷಯಸ್ಥರ ಕೃತ್ಯವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+