Video: ಗಾಂಧಿ ಪ್ರತಿಮೆ ಎದುರು ಕಪ್ಪುಪೇಟ ಸುತ್ತಿಕೊಂಡರೇಕೆ ಮಲ್ಲಿಕಾರ್ಜುನ ಖರ್ಗೆ?

ನವದೆಹಲಿ, ಜುಲೈ 27: ಸಂಸತ್ ಉಭಯ ಕಲಾಪಗಳಲ್ಲಿ ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದು, ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಗಮನ ಸೆಳೆದರು.

ನವದೆಹಲಿಯ ಗಾಂಧಿ ಪ್ರತಿಮೆ ಎದುರು ಸಂಸದರ ಪ್ರತಿಭಟನೆಯ ನಡುವೆ ತಮ್ಮ ತಲೆಗೆ ಕಪ್ಪು ಪೇಟವನ್ನು ಸುತ್ತಿಕೊಳ್ಳುವ ಮೂಲಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ಕ್ರಮವನ್ನು ಖಂಡಿಸಿದರು. ಕಪ್ಪು ಪೇಟವನ್ನು ಸುತ್ತಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Why Mallikarjun Kharge rolled black turban to his head in front of new delhi gandhi statue

ಕೇಂದ್ರ ಸಂಸತ್ ಅಧಿವೇಶನವು ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಮೊದಲ ದಿನದಿಂದಲೂ ಹಣದುಬ್ಬರ, ಬೆಲೆ ಏರಿಕೆ, ಜಿಎಸ್‌ಟಿ ವಿರುದ್ಧ ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಲಾಪದಲ್ಲಿ ಬಿತ್ತಿಪತ್ರವನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಕ್ಕಾಗಿ ಈ ಮೊದಲು ನಾಲ್ವರು ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಇದರ ಮಧ್ಯೆ ರಾಜ್ಯಸಭೆಯ 19 ಸಂಸದರನ್ನು ವಾರದ ಕೊನೆಯವರೆಗೂ ಅಮಾನತುಗೊಳಿಸಲಾಗಿದೆ.

Why Mallikarjun Kharge rolled black turban to his head in front of new delhi gandhi statue

19 ಸಂಸದರ ಅಮಾನತು:

Recommended Video

      Siddaramaiah ನಮ್ಮ ಮುಂದಿನ ಮುಖ್ಯ ಮಂತ್ರಿ !! *Politics | OneIndia Kannada

      ಸಂಸತ್ ಸದನದಲ್ಲಿ ಘೋಷಣೆ ಕೂಗಿದ ದುರ್ವರ್ತನೆಗಾಗಿ ಒಟ್ಟು 19 ಪ್ರತಿಪಕ್ಷದ ರಾಜ್ಯಸಭಾ ಸಂಸದರನ್ನು ವಾರದ ಉಳಿದ ಭಾಗಕ್ಕೆ ಅಮಾನತುಗೊಳಿಸಲಾಗಿದೆ. ಟಿಎಂಸಿ ಸಂಸದ ಸುಶ್ಮಿತಾ ದೇವ್, ಡಾ ಸಂತಾನು ಸೇನ್, ಡೋಲಾ ಸೇನ್ ಸೇರಿದಂತೆ ಇತರ ರಾಜ್ಯಸಭಾ ಸಂಸದರು ಅಮಾನತುಗೊಂಡಿದ್ದಾರೆ. ಹಕ್, ಅಬೀರ್ ಬಿಸ್ವಾಸ್, ಮೌಸಮ್ ನೂರ್, ಶಾಂತಾ ಛೆಟ್ರಿ, ಮೊಹಮ್ಮದ್ ಅಬ್ದುಲ್ಲಾ, ಎಎ ರಹೀಮ್, ಕನಿಮೊಳಿ ಅವರನ್ನೂ ಅಮಾನತುಗೊಳಿಸಲಾಗಿದೆ. ಸಂಸತ್ತಿನ ನಡವಳಿಕೆಯ ನಿಯಮ ಸಂಖ್ಯೆ 256 ಅನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+