ಪಾಕಿಸ್ತಾನ ಪ್ರಧಾನಿಯನ್ನು ನಂಬಲಾಗದು: ಅಮಿತ್ ಶಾ

ನವದೆಹಲಿ, ಮಾರ್ಚ್‌ 01: ಪುಲ್ವಾಮಾ ದಾಳಿಯನ್ನು ಖಂಡಿಸದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನಾವು ಹೇಗೆ ನಂಬುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.

ಇಂಡಿಯಾ ಟುಡೆ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಗೆ ಬೆಂಬಲ ಕೊಡುತ್ತಿರುವವರ ಮನದಲ್ಲಿ ಭಯ ಹುಟ್ಟಿಸಲು ಮೋದಿ ಯಶಸ್ವಿಯಾಗಿದ್ದಾರೆ ಎಂದು ಶಾ ಅವರು ಮೋದಿ ಅವರನ್ನು ಹೊಗಳಿದರು.

ಭಯೋತ್ಪಾದನಾ ಕೃತ್ಯಗಳನ್ನು, ಭಯೋತ್ಪಾದನಾ ಬೆಂಬಲಿಗರನ್ನು ನಿಭಾಯಿಸುವಲ್ಲಿ ನಮ್ಮ ಸರ್ಕಾರ ಉತ್ತಮ ಕಾರ್ಯಗಳನ್ನು ಆರಂಭಿದಂದಲೂ ತೆಗೆದುಕೊಳ್ಳುತ್ತಾ ಬಂದಿದೆ ಎಂದು ಅವರು ಶಾ ಅವರು ಹೇಳಿದರು.

Why Imran Khan not condemned Pulwama attack: Amit Shah

ಇಷ್ಟು ಕಡಿಮೆ ಸಮಯದಲ್ಲಿ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳುತ್ತಿರುವುದು ನಮ್ಮ ರಾಜತಾಂತ್ರಿಕ ಗೆಲುವು ಎಂದು ಅಮಿತ್ ಶಾ ಹೇಳಿದರು.

ಮನಮೋಹನ್ ಸಿಂಗ್ ಅವರು ಭಾರತ-ಪಾಕ್ ಎರಡೂ ಸಂಯಮದಿಂದ ವರ್ತಿಸಬೇಕು ಎಂದಿರುವುದನ್ನು ವಿರೋಧಿಸಿದ ಅವರು, ಭಯೋತ್ಪಾದನೆಗೆ ಬೆಂಬಲ ಕೊಡುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ಹೇಗೆ ಸಂಯಮದಿಂದ ವರ್ತಿಸಲು ಸಾಧ್ಯ ಎಂದು ಶಾ ವಿರೋಧ ವ್ಯಕ್ತಪಡಿಸಿದ್ದಾರೆ.

2008ರ ಮುಂಬೈ ದಾಳಿಯ ಬಳಿಕ ಮನಮೋಹನ್ ಸಿಂಗ್ ಸರ್ಕಾರ ಪಾಕಿಸ್ತಾನ ಹಾಗೂ ಉಗ್ರರಿಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಲು ವಿಫಲವಾದವು ಎಂದು ಶಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+