3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
Recommended Video

ನವದೆಹಲಿ, ಡಿಸೆಂಬರ್ 13: ಚುನಾವಣೆ ಮುಗಿದು, ಗೆಲುವೂ ಸಿಕ್ಕಿದ್ದಾಯ್ತು. ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ ಪಡೆದ ಮೇಲೂ ಕಾಂಗ್ರೆಸ್ಸಿನ ತಲೆನೋವು ಕಡಿಮೆಯಾಗಿಲ್ಲ. ಹಾಗೆ ಹೇಳೊಕೆ ಹೋದರೆ ಅಸಲಿ ಸಮಸ್ಯೆ ಶುರುವಾಗಿದ್ದೇ ಈಗ!
ಹೌದು, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನಲ್ಲೇ ತಲೆನೋವು ಆರಂಭವಾಗಿದೆ. ಆದರೆ ಇದು ಗೆದ್ದ ಖುಷಿಯನ್ನು ಮರೆಮಾಚಬಾರದು, ಮತ್ತು ಚುನಾವಣೆಯ ಫಲಿತಾಂಶದ ನಂತರ ಹೆಚ್ಚಾದ ಪಕ್ಷದ ವರ್ಚಸ್ಸು ಕುಸಿಯುವಂತೆ ಮಾಡಬಾರದು ಎಂಬ ಎಚ್ಚರಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಅದಕ್ಕೆಂದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಉಪಾಯವೊಂದನ್ನು ಹೂಡಿದ್ದಾರೆ. ಮುಖ್ಯಮಂತ್ರಿಯ ಆಯ್ಕೆಗೂ ಪ್ರಜಾಪ್ರಭುತ್ವ ತತ್ತ್ವದ ತಳಹದಿಯಲ್ಲೇ ಮುಂದುವರಿಯುವ ಯೋಚನೆಯಲ್ಲಿ ಅವರಿದ್ದಾರೆ. ಇದೀಗ ಕಾಂಗ್ರೆಸ್ ಕಾರ್ಯಕರ್ತರ ನಡುವಲ್ಲೇ ಅನೌಪಚಾರಿಕವಾದ ಚುನಾವಣೆಯೊಂದನ್ನು ನಡೆಸಿ, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ರಾಹುಲ್ ಬಂದಿದ್ದಾರೆ ಎನ್ನಲಾಗಿದೆ.

ಏನಿದು ಉಪಾಯ?
ರಾಹುಲ್ ಗಾಂಧಿ ಅವರು ಈಗಾಗಲೇ ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳ 7.3 ಲಕ್ಷ ಕಾಂಗ್ರೆಸ್ ಕಾರ್ಯಕರ್ತರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ. ಮೂರು ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರೇ ತಮಗೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ರಾಹುಲ್ ಮನವಿ ಮಾಡಿದ್ದಾರೆ. ಹೆಚ್ಚಿನ ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ಮುಖ್ಯಮಂತ್ರಿ!

ವಾಯ್ಸ್ ಮೆಸೇಜ್ ನಲ್ಲೇನಿದೆ?
"ನಾನು ಈಗ ನಿಮ್ಮಲ್ಲಿ ಒಂದು ಬಹುಮುಖ್ಯ ಪ್ರಶ್ನೆ ಕೇಳುತ್ತೇನೆ? ಯಾರು ಮುಖ್ಯಮಂತ್ರಿಯಾಗಬೇಕು? ದಯವಿಟ್ಟು ಒಂದೇ ಹೆಸರನ್ನು ಸೂಚಿಸಿ. ನೀವು ಯಾರ ಹೆಸರನ್ನು ಹೇಳುತ್ತೀರಿ ಎಂಬುದು ನನ್ನೊಬ್ಬನಿಗೆ ಮಾತ್ರ ತಿಳಿಯುತ್ತದೆ. ಪಕ್ಷದ ಇನ್ಯಾರಿಗೂ ಇದು ಗೊತ್ತಿರುವುದಿಲ್ಲ, ದಯವಿಟ್ಟು ಪ್ರತಿಕ್ರಿಯಿಸಿ" ಎಂಬ ವಾಯ್ಸ್ ಮೆಸೇಜ್ ಅನ್ನು ರಾಹುಲ್ ಗಾಂಧಿ ಅವರು ಕಾರ್ಯಕರ್ತರಿಗೆ ಕಳಿಸಿದ್ದಾರೆ.

ಗೌಪ್ಯ ಪ್ರಕ್ರಿಯೆ
7.3 ಲಕ್ಷ ಕಾರ್ಯಕರ್ತರಲ್ಲಿ ಎಷ್ಟು ಜನ ಪ್ರತಿಕ್ರಿಯೆ ನೀಡುತ್ತಾರೋ, ಆ ಎಲ್ಲ ವಾಯ್ಸ್ ಮೆಸೇಜ್ ಗಳನ್ನೂ ಕೇವಲ ರಾಹುಲ್ ಗಾಂಧಿ ಅವರೊಬ್ಬರೇ ಕೇಳಿಸಿಕೊಳ್ಳಲಿದ್ದು, ಕಾರ್ಯಕರ್ತರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಎಂಬ ಅಭಯವನ್ನು ರಾಹುಲ್ ಗಾಂಧಿ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಇದು ಸವಾಲಿನ ಚುನಾವಣೆ!
ಅಬ್ಬಾ, ಒಂದು ಚುನಾವಣೆ ಮುಗೀತು ಎಂದು ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ, ಗೆಲುವಿನ ಖುಷಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗದಂತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿಗೆ ಮತ್ತೊಂದು ಚುನಾವಣೆ ಎದುರಾಗಿದೆ! ಆದರಿದು ಅನೌಪಚಾರಿಕ ಚುನಾವಣೆಯಷ್ಟೆ! ಪ್ರಚಾರವಿಲ್ಲ, ಆಮಿಷವಿಲ್ಲ, ಆಶ್ವಾಸನೆಯಿಲ್ಲ... ನೀತಿ ಸಂಹಿತೆಯೂ ಇಲ್ಲ. ಒಟ್ಟಿನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ಇದೊಂದು ಅಗ್ನಿಪರೀಕ್ಷೆ ಎನ್ನಿಸಿರುವುದು ಸುಳ್ಳಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications