ಜೆಎನ್‌ಯು ಹಗರಣದ ರೂವಾರಿ ಉಮರ್ ಖಾಲೀದ್ ಎಲ್ಲಿ?
ಬೆಂಗಳೂರು, ಫೆಬ್ರವರಿ 20 : ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ ಉಮರ್ ಖಾಲೀದ್ ಎಂಬಾತ ಎಲ್ಲಿದ್ದಾನೆ? ಕಾಶ್ಮೀರಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಸುಮಾರು 800 ಕರೆಗಳನ್ನು ಮಾಡಿದ್ದಾನೆನ್ನಲಾದ ಉಮರ್ ಸದ್ಯಕ್ಕೆ ತಲೆಮರೆಸಿಕೊಂಡಿದ್ದಾನೆ.
ಜೆಎನ್‌ಯು ಹಗರಣಕ್ಕೆ ಮೂಲ ಕಾರಣವಾಗಿದ್ದಾನೆ ಎನ್ನಲಾದ ಉಮರ್ ಖಾಲೀದ್ ಪತ್ತೆಗಾಗಿ ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ. ಆತನ ಸುಳಿವು ಎಲ್ಲೂ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪತ್ರಕರ್ತರೊಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೂಡ ನಡೆಸಿದ್ದಾರೆ.
ಉಮರ್ ಖಾಲೀದ್ 800 ಕರೆ ಮಾಡಿರುವ ಬಗ್ಗೆ ಖಚಿತವಾಗಿ ಯಾವ ಮಾಹಿತಿಯನ್ನೂ ಪೊಲೀಸರು ನೀಡುತ್ತಿಲ್ಲ. ಆದರೆ, ಜೆಎನ್‌ಯು ನಲ್ಲಿ, 2001ರ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ಪರವಾಗಿ ವಿದ್ಯಾರ್ಥಿಗಳನ್ನು ಸೇರಿಸಿದ್ದು ಉಮರ್ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎನ್ನುತ್ತಾರೆ ಪೊಲೀಸರು. [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ದೇಶದ್ರೋಹಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್‌ಯು ಯೂನಿಯನ್ ಲೀಡರ್ ಕನ್ಹಯ್ಯ ಕುಮಾರ್ ವಿಚಾರಣೆಯ ಸಂದರ್ಭದಲ್ಲಿ ಉಮರ್ ಖಾಲೀದ್ ಹೆಸರು ಕೂಡ ಪ್ರಸ್ತಾಪವಾಗಿದೆ. ಜಾಮೀನು ಅರ್ಜಿಯನ್ನು ಕನ್ಹಯ್ಯ ಹೈಕೋರ್ಟಿಗೆ ಸಲ್ಲಿಸಿದ್ದು, ಬರುವ ವಾರದ ಆರಂಭದಲ್ಲಿ ವಿಚಾರಣೆಗೆ ಬರಲಿದೆ.
ಭಾರತದ ಐಕ್ಯತೆಗೆ ಬೆಂಕಿ ಇಡುವಂಥ ಘಟನೆಗೆ ಕಾರಣವಾಗಿರುವ ಉಮರ್ ಖಾಲೀದ್‌ನೇ ಈ ಪ್ರಕರಣದ ರೂವಾರಿ ಎಂಬುದರ ಕುರಿತು ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ದೆಹಲಿ ಪೊಲೀಸ್ ಮೂಲಗಳು ಒನ್ಇಂಡಿಯಾಕ್ಕೆ ತಿಳಿಸಿವೆ. ಆದರೆ, 800 ಕರೆ ಮಾಡಿರುವ ಮಾಧ್ಯಮಗಳ ವರದಿ ಬಗ್ಗೆ ಅವರು ಹೆಚ್ಚೇನೂ ಹೇಳುತ್ತಿಲ್ಲ. ["ನಾನು ಒಗ್ಗಟ್ಟು ಮುರಿಯುವವರ ಎದೆ ಒದೆಯುವ ಭಾರತೀಯ"]
ಈ ನಡುವೆ, "ನನ್ನ ಮಗ ಮುಗ್ಧ. ಆತ ಯಾವುದೇ ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗಿಲ್ಲ. ಆತ ಎಲ್ಲಿದ್ದಾನೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಈ ಪ್ರಕರಣದಿಂದಾಗಿ ನನಗೆ ಬೆದರಿಕೆ ಕರೆಗಳು ಬರುತ್ತಿವೆ" ಎಂದು ಉಮರ್ ಖಾಲೀದ್ ತಂದೆ ಡಾ. ಸೈಯದ್ ಕಾಸಿಮ್ ರಸೂಲ್ ಇಲಿಯಾಸ್ (ಜೆಎನ್‌ಯು ಪಿಎಚ್‌ಡಿ ವಿದ್ವಾಂಸ) ಅವರು ಒನ್ಇಂಡಿಯಾ ಎದಿರು ಅಳಲು ತೋಡಿಕೊಂಡಿದ್ದಾರೆ.
ಡಾ. ಸೈಯದ್ ಕಾಸಿಮ್ ರಸೂಲ್ ಇಲಿಯಾಸ್ ಒಂದಾನೊಂದು ಕಾಲದಲ್ಲಿ ಉಗ್ರ ಸಂಘಟನೆ ಸಿಮಿ ಜೊತೆ ಗುರುತಿಸಿಕೊಂಡಿದ್ದರು. "ನಾನೀಗ ಅದನ್ನು ತೊರೆದಿದ್ದು, ಅದರ ಜೊತೆ ಯಾವುದೇ ಸಂಪರ್ಕವೂ ಇಲ್ಲ" ಎಂದಿದ್ದಾರೆ ಇಲಿಯಾಸ್. ಅವರ ವಿರುದ್ಧ ಬರುತ್ತಿರುವ ಜೀವಬೆದರಿಕೆ ಕರೆಗಳ ದೂರಿನ ಮೇಲೆ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications